ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 9

ದಂತ ಕುಳಿ, ಒಸಡು ನೋವು, ಬಾಯಿಯ ದುರ್ವಾಸನೆಗೆ ಜಾಮುನ್ ಬೀಜವೇ ಪರಿಹಾರ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಹಲ್ಲುಗಳು ಬಿಳಿಯಾಗಿರಬೇಕು, ಒಸಡುಗಳಿಂದ ರಕ್ತಸ್ರಾವವಾಗಬಾರದು, ಬಾಯಿಯ ದುರ್ವಾಸನೆ ಹೋಗಬೇಕು ಎನ್ನುವುದು ಎಲ್ಲರ ಆಶಯ. ಆದರೆ ಎಷ್ಟೇ ಟೂತ್‌ಪೇಸ್ಟ್ ಬಳಸಿದರೂ ಹಲವರಿಗೆ ಹಲ್ಲಿನ ಕುಳಿಗಳು, ಒಸಡು ನೋವು, ರಕ್ತಸ್ರಾವ ಮತ್ತು ಬಾಯಿಯ ದುರ್ವಾಸನೆ ಸಮಸ್ಯೆಗಳು ಕಾಡುತ್ತವೆ.

ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿ ಜಾಮುನ್ ಬೀಜ ಆಧಾರಿತ ಆಯುರ್ವೇದ ಹಲ್ಲಿನ ಪುಡಿ ಬಹಳ ಉಪಯುಕ್ತವೆಂದು ಆಯುರ್ವೇದ ತಜ್ಞ ಡಾ. ಸಲೀಂ ಜೈದಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಈ ಪುಡಿ ಹಲ್ಲುಗಳನ್ನು ಬಿಳಿಯಾಗಿಸುವುದಷ್ಟೇ ಅಲ್ಲದೆ, ಒಸಡುಗಳ ಆರೋಗ್ಯವನ್ನೂ ಸುಧಾರಿಸಲು ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

👉 ಇದನ್ನೂ ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಜಾಮುನ್ ಬೀಜ ಹಲ್ಲಿನ ಪುಡಿ ತಯಾರಿಸಲು ಬೇಕಾದ ಪದಾರ್ಥಗಳು :

  • ಜಾಮುನ್ ಬೀಜದ ಪುಡಿ.
  • ಜಾಮುನ್ ಎಲೆಗಳ ಪುಡಿ.
  • ತ್ರಿಫಲ ಪುಡಿ.
  • ಲವಂಗ ಪುಡಿ.
  • ಕಲ್ಲುಪ್ಪು (ಪುಡಿ ಮಾಡಿದದ್ದು).

ಹಲ್ಲಿನ ಪುಡಿ ತಯಾರಿಸುವ ವಿಧಾನ :

ಮೊದಲು ಜಾಮುನ್ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು. ನಂತರ ಅವುಗಳನ್ನು ಹುರಿದು ನುಣ್ಣಗೆ ಪುಡಿ ಮಾಡಬೇಕು. ಜಾಮುನ್ ಎಲೆಗಳನ್ನೂ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ಈ ಎರಡು ಪುಡಿಗಳಿಗೆ ತಲಾ ಒಂದು ಚಮಚ ತ್ರಿಫಲ ಪುಡಿ, ಲವಂಗ ಪುಡಿ ಮತ್ತು ಕಲ್ಲುಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.

👉 ಇದನ್ನೂ ಓದಿ : Intestine ನಲ್ಲಿ ಸಂಗ್ರಹವಾದ ತ್ಯಾಜ್ಯ ಹೊರ ಬರಲು ಇವುಗಳನ್ನ ಸೇವಿಸಿ ; ಹೊಟ್ಟೆನೂ ಕ್ಲೀನ್ ಆಗುತ್ತೆ.

ಈ ಹಲ್ಲಿನ ಪುಡಿಯ ಪ್ರಯೋಜನಗಳು :

  • ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆದು ಹಲ್ಲಿನ ಕುಳಿಗಳನ್ನು ಕಡಿಮೆ ಮಾಡುತ್ತದೆ.
  • ಒಸಡುಗಳಿಂದ ಆಗುವ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.
  • ಪ್ಲೇಕ್ ರಚನೆಯನ್ನು ತಡೆದು ಒಸಡು ಉರಿಯೂತ ಕಡಿಮೆ ಮಾಡುತ್ತದೆ.
  • ಲವಂಗದಲ್ಲಿರುವ ಯುಜೆನಾಲ್ ದಂತ ನೋವು ಮತ್ತು ದುರ್ವಾಸನೆಯನ್ನು ತಗ್ಗಿಸುತ್ತದೆ.
  • ಕಲ್ಲುಪ್ಪು ಹಲ್ಲಿನ ಮೇಲಿನ ಹಳದಿ ಕಲೆಗಳನ್ನು ತೆಗೆದು ಹಲ್ಲುಗಳನ್ನು ಬಿಳಿಯಾಗಿಸುತ್ತದೆ.

ಬಳಸುವ ವಿಧಾನ :

  • ವಾರಕ್ಕೆ 2–3 ಬಾರಿ ಮಾತ್ರ ಈ ಪುಡಿಯನ್ನು ಬಳಸುವುದು ಉತ್ತಮ.
  • ಸ್ವಲ್ಪ ಪ್ರಮಾಣದ ಪುಡಿಯನ್ನು ಬೆರಳು ಅಥವಾ ಮೃದುವಾದ ಬ್ರಷ್‌ನಿಂದ ಹಲ್ಲುಗಳು ಮತ್ತು ಒಸಡುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ.
  • ನಂತರ ಸಾಮಾನ್ಯ ಟೂತ್‌ಪೇಸ್ಟ್ ಬಳಸಿ ಹಲ್ಲುಜ್ಜಬಹುದು.

👉 ಇದನ್ನೂ ಓದಿ : ಬ್ಲಡ್‌ ಶುಗರ್‌ ಸಮಸ್ಯೆಯೇ.? ಕುಡಿಯಿರಿ 1 ಚಮಚ ಈ Fruit ನ ಎಲೆಯ ರಸ.!

ಮುಖ್ಯ ಸೂಚನೆ : ಈ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಲಭ್ಯವಿರುವ ಮೂಲಗಳ ಆಧಾರದ ಮೇಲೆ ನೀಡಲಾಗಿದೆ. ಯಾವುದೇ ಗಂಭೀರ ದಂತ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಅಥವಾ ದಂತ ತಜ್ಞರನ್ನು ಸಂಪರ್ಕಿಸುವುದು ಒಳಿತು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಗರ್ಭಿಣಿ ಪತ್ನಿಗೆ ಮೋಸ ; ಗಂಡನ ರಹಸ್ಯ ಬಯಲು ಮಾಡಿದ ಪ್ರವಾಹ.

0

ಜನಸ್ಪಂದನ ನ್ಯೂಸ್‌‌, ಥೈಲ್ಯಾಂಡ್‌ : ಮಲೇಷಿಯಾದ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಕಚೇರಿ ಕೆಲಸದ ನಿಮಿತ್ತ ಕೆಲ ದಿನಗಳು ಥೈಲ್ಯಾಂಡ್‌ಗೆ ಹೋಗಬೇಕಿದೆ ಎಂದು ಸುಳ್ಳು ಹೇಳಿದ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದೆ. ಗಂಡನ ಮಾತು ನಂಬಿದ ಪತ್ನಿ ಆತ ನಿಜವಾಗಿಯೂ ಆಫೀಸ್ ಟ್ರಿಪ್‌ಗೆ ಹೋಗಿದ್ದಾನೆ ಎಂದುಕೊಂಡಿದ್ದಳು. ಆದರೆ, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರವಾಹವೇ ಆತನ ‘ರಹಸ್ಯ ಪ್ರಯಾಣ’ವನ್ನು ಬಯಲು ಮಾಡಿದದ್ದು ವಿಚಿತ್ರ ಸಂಗತಿಯಾಗಿದೆ.

ಗರ್ಭಿಣಿ ಪತ್ನಿಗೆ ಸುಳ್ಳು ಹೇಳಿ ಥೈಲ್ಯಾಂಡ್‌ನಲ್ಲಿ ಪ್ರೇಯಸಿಯೊಂದಿಗೆ ಮಜಾ :

ಪತ್ನಿ ಸಹ ಪ್ರಯಾಣಕ್ಕೆ ಬರುವುದಾಗಿ ಹೇಳಿದಾಗ, ಗರ್ಭಿಣಿಯಾದ್ದರಿಂದ ವಿಮಾನಯಾನ ಬೇಡ ಎಂದು ಹೇಳಿ ಗರ್ಭಿಣಿ ಪತ್ನಿ ಬರದಂತೆ ಮಾಡಿ ತನ್ನ ಪ್ರೆಯಸಿಯ ಜೊತೆ ಟ್ರಿಪ್‌ ಹೋದನು. ಆತ ತನ್ನ ಲವರ್ ಜೊತೆಗೆ ಥೈಲ್ಯಾಂಡ್‌ನ ಹ್ಯಾಟ್ ಯಾಯ್ ಪ್ರದೇಶದ ಒಂದು ರೆಸಾರ್ಟ್‌ನಲ್ಲಿ ನಾಲ್ಕು ದಿನಗಳಿಂದ ಮೋಜುಮಸ್ತಿ ಮಾಡುತ್ತಿದ್ದ.

ಇದನ್ನು ಓದಿ : ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಗಂಡ ತನ್ನ ಸುಳ್ಳಿನ ಕಥೆಯ ಬಗ್ಗೆ ಪತ್ನಿಗೆ ತಿಳಿಯಲು ಯಾವುದೇ ಅವಕಾಶವೇ ಇಲ್ಲ ಎಂದು ಆತ ನಿಶ್ಚಿಂತೆಯಿಂದ ದಿನಗಳನ್ನು ಕಳೆಯುತ್ತಿದ್ದ. ಆದರೆ, ಎಲ್ಲವೂ ಯೋಜಿಸಿದಂತೆ ನಡೆಯುವುದಿಲ್ಲ.

ಥೈಲ್ಯಾಂಡ್‌ನಲ್ಲಿ ಪ್ರವಾಹ — ಕಾಣೆಯಾದ ಗಂಡ – ಪತ್ನಿಗೆ ಆತಂಕ :

ಥೈಲ್ಯಾಂಡ್‌ನಲ್ಲಿ ಅಚಾನಕ್ ಪ್ರವಾಹ ಉಂಟಾದ ಸುದ್ದಿ ಹರಿದಾಡುತ್ತಿದ್ದಾಗ, ಪತ್ನಿ ಟಿವಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳ ದೃಶ್ಯಗಳನ್ನು ನೋಡಿ ಆತಂಕಗೊಂಡಳು. ಗಂಡನಿಗೆ ಫೋನ್ ಮಾಡಿದಾಗ ಸಂಪರ್ಕವಾಗಲಿಲ್ಲ. ಆಕೆ ಆತ ನಿಜವಾಗಿಯೂ ಅಪಾಯದಲ್ಲಿ ಸಿಲುಕಿದ್ದಾನೆ ಎಂದು ಭಾವಿಸಿ, ತಕ್ಷಣ ಥೈಲ್ಯಾಂಡ್‌ನಲ್ಲಿ ಇರುವ ತನ್ನ ಆನ್‌ಲೈನ್ ಗೆಳೆಯನನ್ನು ಸಂಪರ್ಕಿಸಿ ಗಂಡನನ್ನು ರಕ್ಷಿಸಲು ವಿನಂತಿಸಿದಳು.

“ರೆಸಾರ್ಟ್ ವಿಳಾಸ ನೀಡಿದ ಪತ್ನಿ – ಬಯಲಾಯಿತು ಆಘಾತಕರ ಸತ್ಯ :

ಭಯಗೊಂಡ ಗರ್ಭಿಣಿ ಪತ್ನಿ ತನ್ನ ಗಂಡ ಉಳಿದುಕೊಂಡಿದ್ದ ವಿಳಾಸವನ್ನು ಗೆಳೆಯನಿಗೆ ಕಳುಹಿಸಿದ್ದಳು. ಆ ಗೆಳೆಯ ಸ್ಥಳಕ್ಕೆ ಸಂಪರ್ಕಿಸಲು ಯತ್ನಿಸಿದಾಗ, ಅಲ್ಲಿ ಆತನ ಜೊತೆ ‘ಸಹೋದ್ಯೋಗಿ’ ಹೆಸರಿನಲ್ಲಿ ಬಂದಿದ್ದ ಮಹಿಳೆ ಕೂಡ ಇದ್ದಳು ಎಂಬುದು ತಿಳಿದುಬಂತು.

ಇದನ್ನು ಓದಿ : ಪ್ರಿಯಕರನೊಂದಿಗೆ ಹೋಟೆಲ್ Room ನಲ್ಲಿ ಪತ್ನಿಯ ಮೋಜು ; ಪತಿಯ ಆಗಮನ.!

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಗಂಡನು “ಆಫೀಸ್ ಕೆಲಸಕ್ಕಾಗಿ” ಹ್ಯಾಟ್ ಯಾಯ್‌ನಲ್ಲಿ ಇದ್ದೇನೆ ಎಂದು ಹೇಳಿದ್ದರೂ, ವಾಸ್ತವದಲ್ಲಿ ಆತ ತನ್ನ ಪ್ರೇಯಸಿಯೊಂದಿಗೆ ರೆಸಾರ್ಟ್‌ನ ಅದೇ ರೂಮಿನಲ್ಲಿ ನಾಲ್ಕು ದಿನಗಳಿಂದ ವಾಸಿಸುತ್ತಿದ್ದನು ಎಂಬುದು ಬಹಿರಂಗವಾಗಿದೆ.

ಗಂಡನ ನಿಜಸ್ವರೂಪ ಬಯಲು ಮಾಡಿದ ಪ್ರವಾಹ :

ಥೈಲ್ಯಾಂಡ್‌ನ ಪ್ರವಾಹದಿಂದ ಮಹಿಳೆ ಗಂಡನ ಸುರಕ್ಷತೆಗಾಗಿ ಸಂಕಟಗೊಳ್ಳುತ್ತಿದ್ದಾಗಲೇ, ಆತನ ಸುಳ್ಳಿನ ಜೀವನ ಬಯಲಾಗಿರುವುದು ನೋವುತುಂಬಿದೆ. ಗರ್ಭಿಣಿ ಪತ್ನಿ ಮನೆಯಲ್ಲಿರುವಾಗ ಆತ ಪ್ರೇಯಸಿಯೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾನೆಂದು ಹರಿದಾಡುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.

ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

ಗರ್ಭಿಣಿ ಪತ್ನಿಗೆ ಮೋಸ ; ಗಂಡನ ರಹಸ್ಯ ಬಯಲು ಮಾಡಿದ ಪ್ರವಾಹ.

ಜನಸ್ಪಂದನ ನ್ಯೂಸ್‌, ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ (Doctor) ಗಂಭೀರ ನಿರ್ಲಕ್ಷ್ಯದ ಪ್ರಕರಣ ಹೊರಬಿದ್ದಿದೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ (Family planning surgery) ಗಾಗಿ ದಾಖಲಾಗಿದ್ದ ಬಾಲಯ್ಯ ನಗರದ ನಿವಾಸಿ ರಮಾದೇವಿ (22) ಅವರ ದೇಹದೊಳಗೆ ಶಸ್ತ್ರಚಿಕಿತ್ಸಾ ಬ್ಲೇಡ್ ಉಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ವೈದ್ಯರ (Doctor) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಮಾದೇವಿಗೆ ಕೆಲವು ದಿನಗಳ ಹಿಂದೆ ಡಾ. ನಾರಾಯಣ ಸ್ವಾಮಿ ಮತ್ತು ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರದಿಂದಲೇ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳತೊಡಗಿತು. ಆಸ್ಪತ್ರೆಗೆ ಹಲವಾರು ಬಾರಿ ದೂರು ನೀಡಿದರೂ ಸಿಬ್ಬಂದಿ “ನೋವು ಸಾಮಾನ್ಯ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದರು.

ವೈದ್ಯರ (Doctor) ನಿರ್ಲಕ್ಷ್ಯ ಬೆಳಕಿಗೆ :

ನೋವು ದಿನೇದಿನೇ ಹೆಚ್ಚುತ್ತಿದ್ದ ಕಾರಣ, ರಮಾದೇವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆಕೆಯ ಹೊಟ್ಟೆ (ಯೋನಿ) ಯ ಸಮೀಪ ಶಸ್ತ್ರಚಿಕಿತ್ಸಾ ಬ್ಲೇಡ್ ಇರುವುದಾಗಿ ವರದಿಯಲ್ಲಿ ಪತ್ತೆಯಾಯಿತು.

ಇದನ್ನು ಓದಿ : Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಇದನ್ನು ನೋಡಿ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರು (Doctor) ಶಸ್ತ್ರಚಿಕಿತ್ಸೆಯ ವೇಳೆ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಸಂತ್ರಸ್ತೆಯ ಕುಟುಂಬದವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ ಉಚಿತವಾಗಿದ್ದರೂ, ಆಸ್ಪತ್ರೆ ಸಿಬ್ಬಂದಿ ರೂ.2,500/- ಹಣ ವಸೂಲಿ ಮಾಡಿದ್ದಾರೆಂದು ರಮಾದೇವಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಸ್ವಾಮಿ, “ಶಸ್ತ್ರಚಿಕಿತ್ಸೆಯ ನಂತರ ಮತ್ತೊಂದು ತುರ್ತು ಪ್ರಕರಣ ಇತ್ತು. ಕ್ಲೀನರ್‌ಗಳು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಾನು ಹೊರಟುಹೋಗಬೇಕಾಯಿತು. ಬ್ಲೇಡ್ ಉಳಿದಿರುವುದು ನನ್ನ ತಪ್ಪಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಆದರೆ, ಜೀವ ಉಳಿಸಬೇಕಾದ ಸ್ಥಳದಲ್ಲೇ ವೈದ್ಯರ (Doctor) ಇಂತಹ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂಬ ಕಾರಣಕ್ಕೆ ಸಾರ್ವಜನಿಕರ ಮಧ್ಯೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಟುಂಬದವರು ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಬೇಜವಾಬ್ದಾರಿ (Doctor) ಗಳ  ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ರಮಾದೇವಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೂಡಾ ಅವರು ಬೇಡಿಕೆ ಇಟ್ಟಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ದಾರುಣ ಬಸ್ Accident : 15 ಮಂದಿ ಸಾವು, ಹಲವು ಮಂದಿ ಗಂಭೀರ.

0

ಜನಸ್ಪಂದನ ನ್ಯೂಸ್‌, ಆಲೂರಿ (ಆ.ಪ್ರ) : ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತ (Accident) ದಲ್ಲಿ 15 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಇನ್ನೂ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ದುರ್ಘಟನೆ ಬೆಳಗಿನ ಜಾವ ಸುಮಾರು 5.30ರ ಸಮಯದಲ್ಲಿ ತುಳಸಿಪಕಲು ಗ್ರಾಮದ ಬಳಿ ನಡೆದಿದೆ. 35 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ತೀವ್ರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೆಲವು ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದಿವೆ.

ಜಿಲ್ಲಾಧಿಕಾರಿಗಳ ಮಾಹಿತಿ ಪ್ರಕಾರ, ಬಸ್ಸಿನಲ್ಲಿ ಒಟ್ಟು 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಇದ್ದರು. ಅಪಘಾತದಲ್ಲಿ ಗಾಯಗೊಂಡ ಏಳು ಮಂದಿಯನ್ನು 15 ಕಿ.ಮೀ ದೂರದಲ್ಲಿರುವ ಚಿಂತೂರು ಸಿಎಚ್‌ಸಿಗೆ ಸ್ಥಳಾಂತರಿಸಲಾಗಿದೆ.

ಇತರೆ ಗಾಯಾಳುಗಳನ್ನು ಭದ್ರಾಚಲಂ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಎಎಸ್ಆರ್ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು, ರಕ್ಷಣಾ ತಂಡಗಳು ಕಂದಕಕ್ಕೆ ಉರುಳಿದ ಬಸ್ ಅವಶೇಷಗಳನ್ನು ತೆರವುಗೊಳಿಸುತ್ತಿದ್ದು, ಬದುಕುಳಿದವರನ್ನು ಹೊರತೆಗೆದುಕೊಳ್ಳುವ ಕಾರ್ಯ ಮುಂದುವರಿದಿದೆ. ಅಪಘಾತದ ನಿಖರ ಕಾರಣ ಮತ್ತು मृतರ ಗುರುತು ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.

ಅಪಘಾತ (Accident) ದ ಹಿನ್ನಲೆ ಸಿಎಂ ನಾಯ್ಡು ಆಘಾತ :

ಅಪಘಾತದ ಸುದ್ದಿ ತಿಳಿದ ಕೂಡಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ,

“ಬಸ್ ಅಪಘಾತದಲ್ಲಿ ಹಲವು ಜೀವಗಳು ಬಲಿಯಾಗಿರುವುದು ಹೃದಯವಿದ್ರಾವಕ. ಅಧಿಕಾರಿಗಳೊಂದಿಗೆ ಮಾತನಾಡಿ ಸಂತ್ರಸ್ತರಿಗೆ ನೀಡಲಾಗುತ್ತಿರುವ ಸಹಾಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ಸಿಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಮೃತರ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ.”

ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಉಳಿದ ಪ್ರಯಾಣಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ವಿಡಿಯೋ :

Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

Car – KSRTC Bus Accident

ಜನಸ್ಪಂದನ ನ್ಯೂಸ್‌, ಬೆಂಗಳೂರು ಗ್ರಾಮಾಂತರ : ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ದಲ್ಲಿ ಕಾರಿ (Car) ನಲ್ಲಿದ್ದ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಚಿಕ್ಕಬಳ್ಳಾಪುರ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಕಾರು (Car) ಚಾಲಕರ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರುಗಡೆಯ ರಸ್ತೆ ಮೇಲೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗೆ ಅಪ್ಪಳಿಸಿದ ಪರಿಣಾಮ ದುರಂತ ನಡೆದಿದೆ.

ಡಿಕ್ಕಿಯ ತೀವ್ರತೆಗೆ ಕಾರು (Car) ಗಂಭೀರವಾಗಿ ಹಾನಿಗೊಳಗಾಗಿದ್ದು, ವಾಹನದಲ್ಲಿ ಸಿಲುಕಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮೋಹನ್ ಕುಮಾರ್ (33), ಸುಮನ (28) ಮತ್ತು ಸಾಗರ್ (23) ಎಂದು ಪೊಲೀಸರು ದೃಢಪಡಿಸಿದ್ದಾರೆ. ಇವರು ಮೂವರೂ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಮೂಲದವರು ಎಂದು ಮಾಹಿತಿ ದೊರೆತಿದೆ.

ಇದನ್ನು ಓದಿ : “ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.

ಅಪಘಾತದ ರಭಸದ ಪರಿಣಾಮ ಬಸ್ ಮುಂಭಾಗಕ್ಕೂ ಹಾನಿಯಾಗಿದ್ದು, ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಪೊಲೀಸರು ಮತ್ತು ಸ್ಥಳೀಯರು ತಕ್ಷಣ ಪೂರ್ಣಗೊಳಿಸಿದ್ದಾರೆ.

ಅತಿವೇಗವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಊಹಿಸಲಾಗಿದೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸರಾಗಗೊಳಿಸುವಲ್ಲಿ ತೊಡಗಿದ್ದರು.

ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

ಅಪಘಾತದ ಪರಿಣಾಮವಾಗಿ ಕೆಲಕಾಲ ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ನಜ್ಜುಗುಜ್ಜಾದ ಕಾರಿನಿಂದ (Car) ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು.

ಬಳಿಕ ಮೃತದೇಹಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, Car – KSRTC ಬಸ್ ಅಪಘಾತಕ್ಕೆ ಕಾರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

0

ಜನಸ್ಪಂದನ ನ್ಯೂಸ್‌, ಗುಂಟೂರು : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ (Doctor) ಗಂಭೀರ ನಿರ್ಲಕ್ಷ್ಯದ ಪ್ರಕರಣ ಹೊರಬಿದ್ದಿದೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ (Family planning surgery) ಗಾಗಿ ದಾಖಲಾಗಿದ್ದ ಬಾಲಯ್ಯ ನಗರದ ನಿವಾಸಿ ರಮಾದೇವಿ (22) ಅವರ ದೇಹದೊಳಗೆ ಶಸ್ತ್ರಚಿಕಿತ್ಸಾ ಬ್ಲೇಡ್ ಉಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ವೈದ್ಯರ (Doctor) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಮಾದೇವಿಗೆ ಕೆಲವು ದಿನಗಳ ಹಿಂದೆ ಡಾ. ನಾರಾಯಣ ಸ್ವಾಮಿ ಮತ್ತು ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರದಿಂದಲೇ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳತೊಡಗಿತು. ಆಸ್ಪತ್ರೆಗೆ ಹಲವಾರು ಬಾರಿ ದೂರು ನೀಡಿದರೂ ಸಿಬ್ಬಂದಿ “ನೋವು ಸಾಮಾನ್ಯ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದರು.

ವೈದ್ಯರ (Doctor) ನಿರ್ಲಕ್ಷ್ಯ ಬೆಳಕಿಗೆ :

ನೋವು ದಿನೇದಿನೇ ಹೆಚ್ಚುತ್ತಿದ್ದ ಕಾರಣ, ರಮಾದೇವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಆಕೆಯ ಹೊಟ್ಟೆ (ಯೋನಿ) ಯ ಸಮೀಪ ಶಸ್ತ್ರಚಿಕಿತ್ಸಾ ಬ್ಲೇಡ್ ಇರುವುದಾಗಿ ವರದಿಯಲ್ಲಿ ಪತ್ತೆಯಾಯಿತು.

ಇದನ್ನು ಓದಿ : Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಇದನ್ನು ನೋಡಿ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರು (Doctor) ಶಸ್ತ್ರಚಿಕಿತ್ಸೆಯ ವೇಳೆ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಸಂತ್ರಸ್ತೆಯ ಕುಟುಂಬದವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆ ಉಚಿತವಾಗಿದ್ದರೂ, ಆಸ್ಪತ್ರೆ ಸಿಬ್ಬಂದಿ ರೂ.2,500/- ಹಣ ವಸೂಲಿ ಮಾಡಿದ್ದಾರೆಂದು ರಮಾದೇವಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಸ್ತ್ರಚಿಕಿತ್ಸಕ ಡಾ. ನಾರಾಯಣ ಸ್ವಾಮಿ, “ಶಸ್ತ್ರಚಿಕಿತ್ಸೆಯ ನಂತರ ಮತ್ತೊಂದು ತುರ್ತು ಪ್ರಕರಣ ಇತ್ತು. ಕ್ಲೀನರ್‌ಗಳು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಾನು ಹೊರಟುಹೋಗಬೇಕಾಯಿತು. ಬ್ಲೇಡ್ ಉಳಿದಿರುವುದು ನನ್ನ ತಪ್ಪಲ್ಲ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಆದರೆ, ಜೀವ ಉಳಿಸಬೇಕಾದ ಸ್ಥಳದಲ್ಲೇ ವೈದ್ಯರ (Doctor) ಇಂತಹ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂಬ ಕಾರಣಕ್ಕೆ ಸಾರ್ವಜನಿಕರ ಮಧ್ಯೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಟುಂಬದವರು ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಬೇಜವಾಬ್ದಾರಿ (Doctor) ಗಳ  ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ರಮಾದೇವಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೂಡಾ ಅವರು ಬೇಡಿಕೆ ಇಟ್ಟಿದ್ದಾರೆ.

PO ನಲ್ಲಿ ಪತಿ-ಪತ್ನಿ ಜಂಟಿ ಖಾತೆ ; ರೂ.2 ಲಕ್ಷ ಹೂಡಿಕೆಗೆ 90,000 ರೂ. ಬಡ್ಡಿ!

Post Office PO - TD

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬ್ಯಾಂಕ್‌ಗಳಲ್ಲಿ ಬಡ್ಡಿದರಗಳು ನಿರಂತರವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ, ಹೆಚ್ಚು ಸುರಕ್ಷಿತ ಹಾಗೂ ಉತ್ತಮ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಅಂಚೆ ಕಚೇರಿ (Post Office – PO) ಇನ್ನೂ ವಿಶ್ವಾಸಾರ್ಹ ಆಯ್ಕೆಯಾಗಿದೆ. ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೊ ದರವನ್ನು ಮತ್ತೊಮ್ಮೆ ಕಡಿತಗೊಳಿಸಿದರೂ, ಅಂಚೆ ಕಚೇರಿ (Post Office – PO) ಯ ಸಮಯ ಠೇವಣಿ (Time Deposit – TD) ಯೋಜನೆ ಗ್ರಾಹಕರಿಗೆ ಗರಿಷ್ಠ 7.5% ಬಡ್ಡಿದರವನ್ನು ನೀಡುತ್ತಿದೆ.

ಜಂಟಿ ಖಾತೆಗೆ ಹೆಚ್ಚಾದ ಲಾಭ :

ಗಂಡ–ಹೆಂಡತಿ ಇಬ್ಬರೂ ಜಂಟಿ ಖಾತೆ ತೆರೆದು ಹೂಡಿಕೆ ಮಾಡಿದರೆ, 5 ವರ್ಷಗಳ ಕೊನೆಯಲ್ಲಿ ಉತ್ತಮ ಮ್ಯಾಚ್ಯುರಿಟಿ ಮೊತ್ತ ಸಿಗುತ್ತದೆ. ಉದಾಹರಣೆಗೆ, 2 ಲಕ್ಷ ರೂ. ಹೂಡಿಕೆಗೆ 7.5% ಸಂಯುಕ್ತ ಬಡ್ಡಿದರ ಅನ್ವಯ, 5 ವರ್ಷಗಳ ನಂತರ ಒಟ್ಟು ರೂ. 2,89,990 ಸಿಗುತ್ತದೆ. ಅಂದರೆ, ಬಡ್ಡಿಯಲ್ಲಿ ಮಾತ್ರವೇ ರೂ. 89,990 ಲಾಭ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ರೆಪೊ ದರ ಇಳಿಕೆ – ಬ್ಯಾಂಕ್ ಎಫ್‌ಡಿ ಬಡ್ಡಿ ಕಡಿಮೆ :

ಆರ್ಥಿಕ ಪರಿಸ್ಥಿತಿ ಬದಲಾವಣೆ ಹಿನ್ನೆಲೆಯಲ್ಲಿ, ಈ ವರ್ಷ ರಿಸರ್ವ್ ಬ್ಯಾಂಕ್ ನಾಲ್ಕು ಬಾರಿ ರೆಪೊ ದರವನ್ನು 0.25% ಇಳಿಸಿದೆ.

ಒಟ್ಟಾರೆ 1.25%ರಷ್ಟು ಇಳಿಕೆ ನಡೆದಿದ್ದು, ಇದರ ಪರಿಣಾಮವಾಗಿ ಬಹುತೇಕ ಎಲ್ಲಾ ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನು ಕಡಿತಗೊಳಿಸಿವೆ. ಆದರೆ ಅಂಚೆ ಕಚೇರಿ (Post Office – PO) ಮಾತ್ರ ತನ್ನ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಹಾಗೇ ಉಳಿಸಿಕೊಂಡಿದೆ.

ಅಂಚೆ ಕಚೇರಿ (Post Office – PO) ಟಿಡಿ ಯೋಜನೆ ಯಾಕೆ ವಿಶೇಷ?

ಅಂಚೆ ಕಚೇರಿ ಸಮಯ ಠೇವಣಿ ಯೋಜನೆಗೆ ಸರ್ಕಾರದ ಭದ್ರತೆ ಇರುವುದೇ ಪ್ರಮುಖ ಆಕರ್ಷಣೆ.
ಅದೇಂತೆ:

ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

  • 5 ವರ್ಷಗಳ ಟಿಡಿಗೆ 7.5% ಬಡ್ಡಿ — ಬ್ಯಾಂಕ್‌ಗಳು ಸಾಮಾನ್ಯವಾಗಿ ನೀಡುವುದಕ್ಕಿಂತ ಹೆಚ್ಚು.
  • ಹೂಡಿಕೆ ಸಂಪೂರ್ಣ ಅಪಾಯ–ರಹಿತ.
  • ಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ಒಂದೇ ಬಡ್ಡಿದರ (ಹಿರಿಯರಿಗೆ ಕೆಲ ಯೋಜನೆಗಳಲ್ಲಿ ಹೆಚ್ಚುವರಿ ಪ್ರಯೋಜನವಿದ್ದರೂ, ಇಲ್ಲಿ ಎರಡಿಗೂ ಸಮಾನ).
  • ಮ್ಯಾಚ್ಯುರಿಟಿ ಮೊತ್ತ ಖಚಿತ.

ಹೂಡಿಕೆದಾರರಿಗೆ ದೊಡ್ಡ ಲಾಭ :

ಮಾರುಕಟ್ಟೆ ಅಸ್ಥಿರತೆ ಮತ್ತು ಬ್ಯಾಂಕ್‌ಗಳಲ್ಲಿ ಕಡಿಮೆಯಾಗುತ್ತಿರುವ FD ಬಡ್ಡಿದರಗಳನ್ನು ಗಮನಿಸಿದರೆ, ಅಂಚೆ ಕಚೇರಿ (Post Office – PO) TD ಯೋಜನೆ 5 ವರ್ಷಗಳ ನಿರಂತರ ಮತ್ತು ಭದ್ರ ಆದಾಯಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

Raichur & Koppal DCC Bank

ಜನಸ್ಪಂದನ ನ್ಯೂಸ್‌, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು DCC Bank ಹುದ್ದೆಗಳ ವಿವರ :

  • ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
  • ಸಹಾಯಕರು (Assistants) – 45 ಹುದ್ದೆಗಳು.
  • ಅಟೆಂಡರ್ (Attender) – 10 ಹುದ್ದೆಗಳು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

DCC Bank ವಿದ್ಯಾರ್ಹತೆ :

1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.

2. ಸಹಾಯಕರು – 45 ಹುದ್ದೆಗಳು.

  • ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.

3. ಅಟೆಂಡರ್ – 10 ಹುದ್ದೆಗಳು.

  • ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ :

  • 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
  • SC / ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿ ಶುಲ್ಕ (Application Fee) :

1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :

  • ಸಾಮಾನ್ಯ ಮೆರಿಟ್‌ (GM) : ರೂ.1600/-
  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-

2. ಅಟೆಂಡರ್ ಹುದ್ದೆ :

  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
  • ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ವಿಧಾನ :

ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
  2. ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
  3. ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
  4. ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
  5. ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
  6. ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಲು ಚಲನ್‌ (Challan) ಪ್ರಿಂಟ್ ತೆಗೆದುಕೊಳ್ಳಿ.
  8. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
  9. ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಮುಖ್ಯ ದಿನಾಂಕಗಳು :

  • ಅರ್ಜಿ ಪ್ರಾರಂಭ : ನವೆಂಬರ್ 21, 2025.
  • ಕೊನೆಯ ದಿನ : ಡಿಸೆಂಬರ್ 22, 2025.

ಮುಖ್ಯ ಸೂಚನೆ :

  • ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
    👉 ascguru.com/raichur-dcc-bank

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮನೆಯಲ್ಲಿ ಸಾಕು ಪ್ರಾಣಿಗಳು ಸಹ ಜೀವನದಲ್ಲಿ ಕುಟುಂಬ ಸದಸ್ಯರಂತೆ ಪರಿಗಣಿಸಲ್ಪಡುತ್ತವೆ. ಮಹಾನಗರಗಳಲ್ಲಿ ವಾಸಿಸುವ ಜನರು ತಮ್ಮ ಸಾಕು ನಾಯಿ (Dog) ಗಳು ಅಥವಾ ಬೆಕ್ಕು (Cat) ಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಪ್ರಾಣಿಗಳು ಸಹ ತಮ್ಮ ಮಾಲೀಕರಿಗೆ ಅಪಾರ ಪ್ರೀತಿ ನೀಡುತ್ತವೆ. ಕೆಲವು ಶ್ವಾನ (Dog) ಗಳು ತಮ್ಮ ಮಾಲೀಕರನ್ನು ಎದುರು ನೋಡಲು ಬಾಗಿಲ ಬಳಿ ಕುಳಿತುಕೊಳ್ಳುತ್ತವೆ. ಈ ರೀತಿಯ ಮನೋಭಾವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತವೆ.

ಇತ್ತೀಚೆಗೆ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹೊಸ ವಿಡಿಯೋವೊಂದರಲ್ಲಿ ಶ್ವಾನ (Dog) ವು (ನಾಯಿಯು) ತನ್ನ ಮಾಲೀಕನ ನಿಧನಕ್ಕೆ ಕಂಬನಿ ಮಿಡಿದ ದೃಶ್ಯಗಳು ಸೆರೆಹಿಡಿಯಲಾಗಿದೆ.

ಮೃತ ವ್ಯಕ್ತಿಯ ಕಾಲುಗಳ ಬಳಿ ಕುಳಿತ ಶ್ವಾನ (Dog) ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತ, ಮಾಲೀಕನ ಮೇಲೆ ಮುಖವನ್ನು ಇಟ್ಟು ಪ್ರೀತಿಯಿಂದ ಅತ್ತುತ್ತಿತ್ತು. ವಿಡಿಯೋದಲ್ಲಿದ್ದ ಜನರು ಕೂಡ ಭಾವುಕರಾಗಿದ್ದು, ಕೆಲವರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಈ ವಿಡಿಯೋ ಎಲ್ಲಿಂದ ಬಂದದ್ದು ಎಂಬ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ನೆಟ್ಟಿಗರು ಶ್ವಾನದ ಪ್ರೀತಿಯನ್ನು ನೋಡಿ ಕಣ್ಣೀರು ಹಾಕಿದ್ದಾರೆ.

ಸಾಮಾನ್ಯವಾಗಿ ಮನೆಯಲ್ಲಿನ ಪ್ರಾಣಿಗಳು ತಮ್ಮ ಮಾಲೀಕನ ನಿಧನಕ್ಕೆ ದುಃಖಪಡುವುದು ಸಾಮಾನ್ಯ, ಆದರೆ ಈ ಶ್ವಾನ ತನ್ನ ಮಾಲೀಕನ ಅಂತ್ಯ ಕ್ರಿಯೆಯನ್ನು ಕೇವಲ ನೋಡುವ ಮಟ್ಟವಲ್ಲದೆ, ಆಕರ್ಷಕವಾಗಿ ಕಣ್ಣೀರು ಹಾಕಿದ ದೃಶ್ಯವು ಭಾವನಾತ್ಮಕವಾಗಿದೆ.

ವೈರಲ್ ವಿಡಿಯೋವನ್ನು @RADHIKA_INF ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 22 ಸಾವಿರಕ್ಕೂ ಹೆಚ್ಚು Views ಗಳನ್ನು ಪಡೆದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಶ್ವಾನ (Dog) ಮತ್ತು ಮಾಲೀಕ (Owner) ನ ನಡುವಿನ ಬಾಂಧವ್ಯವನ್ನು ನೋಡಿದರೆ, ಪ್ರಾಣಿಗಳೇ ಮಾನವನಿಗಿಂತ ಹೆಚ್ಚಾದ ಪ್ರೀತಿ ಮತ್ತು ನಿಷ್ಠೆಯನ್ನು ತೋರಬಲ್ಲವು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ನಾಯಿ (Dog) ಯ ವಿಡಿಯೋ :

Disclaimer : The information provided in this article is based on a video/post currently circulating on social media. Janaspandan News does not confirm any claim or authenticity regarding this.

DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

Raichur & Koppal DCC Bank

ಜನಸ್ಪಂದನ ನ್ಯೂಸ್‌, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು DCC Bank ಹುದ್ದೆಗಳ ವಿವರ :

  • ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
  • ಸಹಾಯಕರು (Assistants) – 45 ಹುದ್ದೆಗಳು.
  • ಅಟೆಂಡರ್ (Attender) – 10 ಹುದ್ದೆಗಳು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

DCC Bank ವಿದ್ಯಾರ್ಹತೆ :

1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.

2. ಸಹಾಯಕರು – 45 ಹುದ್ದೆಗಳು.

  • ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.

3. ಅಟೆಂಡರ್ – 10 ಹುದ್ದೆಗಳು.

  • ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ :

  • 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
  • SC / ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿ ಶುಲ್ಕ (Application Fee) :

1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :

  • ಸಾಮಾನ್ಯ ಮೆರಿಟ್‌ (GM) : ರೂ.1600/-
  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-

2. ಅಟೆಂಡರ್ ಹುದ್ದೆ :

  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
  • ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ವಿಧಾನ :

ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
  2. ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
  3. ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
  4. ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
  5. ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
  6. ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಲು ಚಲನ್‌ (Challan) ಪ್ರಿಂಟ್ ತೆಗೆದುಕೊಳ್ಳಿ.
  8. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
  9. ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಮುಖ್ಯ ದಿನಾಂಕಗಳು :

  • ಅರ್ಜಿ ಪ್ರಾರಂಭ : ನವೆಂಬರ್ 21, 2025.
  • ಕೊನೆಯ ದಿನ : ಡಿಸೆಂಬರ್ 22, 2025.

ಮುಖ್ಯ ಸೂಚನೆ :

  • ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
    👉 ascguru.com/raichur-dcc-bank

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು ಗ್ರಾಮಾಂತರ : ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ದಲ್ಲಿ ಕಾರಿ (Car) ನಲ್ಲಿದ್ದ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಚಿಕ್ಕಬಳ್ಳಾಪುರ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಕಾರು (Car) ಚಾಲಕರ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರುಗಡೆಯ ರಸ್ತೆ ಮೇಲೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗೆ ಅಪ್ಪಳಿಸಿದ ಪರಿಣಾಮ ದುರಂತ ನಡೆದಿದೆ.

ಡಿಕ್ಕಿಯ ತೀವ್ರತೆಗೆ ಕಾರು (Car) ಗಂಭೀರವಾಗಿ ಹಾನಿಗೊಳಗಾಗಿದ್ದು, ವಾಹನದಲ್ಲಿ ಸಿಲುಕಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮೋಹನ್ ಕುಮಾರ್ (33), ಸುಮನ (28) ಮತ್ತು ಸಾಗರ್ (23) ಎಂದು ಪೊಲೀಸರು ದೃಢಪಡಿಸಿದ್ದಾರೆ. ಇವರು ಮೂವರೂ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಮೂಲದವರು ಎಂದು ಮಾಹಿತಿ ದೊರೆತಿದೆ.

ಇದನ್ನು ಓದಿ : “ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.

ಅಪಘಾತದ ರಭಸದ ಪರಿಣಾಮ ಬಸ್ ಮುಂಭಾಗಕ್ಕೂ ಹಾನಿಯಾಗಿದ್ದು, ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಪೊಲೀಸರು ಮತ್ತು ಸ್ಥಳೀಯರು ತಕ್ಷಣ ಪೂರ್ಣಗೊಳಿಸಿದ್ದಾರೆ.

ಅತಿವೇಗವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಊಹಿಸಲಾಗಿದೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸರಾಗಗೊಳಿಸುವಲ್ಲಿ ತೊಡಗಿದ್ದರು.

ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

ಅಪಘಾತದ ಪರಿಣಾಮವಾಗಿ ಕೆಲಕಾಲ ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ನಜ್ಜುಗುಜ್ಜಾದ ಕಾರಿನಿಂದ (Car) ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು.

ಬಳಿಕ ಮೃತದೇಹಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, Car – KSRTC ಬಸ್ ಅಪಘಾತಕ್ಕೆ ಕಾರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

ರಾಜ್ಯದಲ್ಲಿ 2.84 ಲಕ್ಷ Government ಹುದ್ದೆಗಳು ಖಾಲಿ ; 24,300 ನೇಮಕಕ್ಕೆ ಅನುಮತಿ : ಸಿಎಂ

Government Job

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಇತ್ತೀಚೆಗೆ ಯುವಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಒಟ್ಟು 2,84,881 ಸರ್ಕಾರಿ (Government) ಹಾಗೂ ಅರೆ ಸರ್ಕಾರಿ (semi Government) ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಪೈಕಿ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ, ಇಲಾಖಾವಾರು ಖಾಲಿ ಹುದ್ದೆಗಳ ವಿವರ ಹಾಗೂ ಪ್ರಸ್ತುತ ಭರ್ತಿ ಮಾಡಲು ಅನುಮೋದನೆ ಪಡೆದ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಇಲಾಖಾವಾರು ಖಾಲಿ ಹುದ್ದೆಗಳ ವಿವರ :

ಸಿಎಂ ನೀಡಿದ ಮಾಹಿತಿಯಂತೆ, ರಾಜ್ಯದ ವಿವಿಧ (Government) ಇಲಾಖೆಗಳಲ್ಲಿ ಈ ಕೆಳಕಂಡಂತೆ ಹುದ್ದೆಗಳು ಖಾಲಿಯಿವೆ:

  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 79,696
  • ಆರೋಗ್ಯ ಇಲಾಖೆ : 37,572
  • ಒಳಾಡಳಿತ ಇಲಾಖೆ : 28,188
  • ಉನ್ನತ ಶಿಕ್ಷಣ ಇಲಾಖೆ : 13,599
  • ಪಶುಸಂಗೋಪನೆ ಇಲಾಖೆ : 11,020
  • ಗ್ರಾಮೀಣಾಭಿವೃದ್ಧಿ ಇಲಾಖೆ : 10,504
  • ಕಂದಾಯ ಇಲಾಖೆ : 10,867
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 9,646
  • ಆರ್ಥಿಕ ಇಲಾಖೆ : 7,668
  • ಕಾನೂನು ಇಲಾಖೆ : 7,659
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ : 4,792
  • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ–ಜೀವನೋಪಾಯ ಇಲಾಖೆ : 4,010
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : 3,391
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 2,435

ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

24,300 ಹುದ್ದೆಗಳ ಭರ್ತಿಗೆ ಅನುಮೋದನೆ :

ಪ್ರಸ್ತುತ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 24,300 ಹುದ್ದೆಗಳ ಇಲಾಖಾವಾರು ವಿವರ ಹೀಗಿದೆ:

  • ಸಾರಿಗೆ ಇಲಾಖೆ : 6,847
  • ಇಂಧನ ಇಲಾಖೆ : 2,400
  • ಆರ್ಥಿಕ (ಹಣಕಾಸು) ಇಲಾಖೆ : 2,243
  • ಆರೋಗ್ಯ ಇಲಾಖೆ : 1,725
  • ಕಂದಾಯ ಇಲಾಖೆ : 1,350
  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 5,267
  • ಕೃಷಿ ಇಲಾಖೆ : 557
  • ಒಳಾಡಳಿತ ಇಲಾಖೆ : 557
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 892
  • ವೈದ್ಯಕೀಯ ಶಿಕ್ಷಣ ಇಲಾಖೆ : 333
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 200
  • ನಗರಾಭಿವೃದ್ಧಿ ಇಲಾಖೆ : 185
  • ಸಹಕಾರ ಇಲಾಖೆ : 180

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಒಟ್ಟು 24,300 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Courtesy : Kannada Prabha

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ರಾಜ್ಯದಲ್ಲಿ 2.84 ಲಕ್ಷ Government ಹುದ್ದೆಗಳು ಖಾಲಿ ; 24,300 ನೇಮಕಕ್ಕೆ ಅನುಮತಿ : ಸಿಎಂ

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಇತ್ತೀಚೆಗೆ ಯುವಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಒಟ್ಟು 2,84,881 ಸರ್ಕಾರಿ (Government) ಹಾಗೂ ಅರೆ ಸರ್ಕಾರಿ (semi Government) ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಪೈಕಿ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ, ಇಲಾಖಾವಾರು ಖಾಲಿ ಹುದ್ದೆಗಳ ವಿವರ ಹಾಗೂ ಪ್ರಸ್ತುತ ಭರ್ತಿ ಮಾಡಲು ಅನುಮೋದನೆ ಪಡೆದ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಇಲಾಖಾವಾರು ಖಾಲಿ ಹುದ್ದೆಗಳ ವಿವರ :

ಸಿಎಂ ನೀಡಿದ ಮಾಹಿತಿಯಂತೆ, ರಾಜ್ಯದ ವಿವಿಧ (Government) ಇಲಾಖೆಗಳಲ್ಲಿ ಈ ಕೆಳಕಂಡಂತೆ ಹುದ್ದೆಗಳು ಖಾಲಿಯಿವೆ:

  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 79,696
  • ಆರೋಗ್ಯ ಇಲಾಖೆ : 37,572
  • ಒಳಾಡಳಿತ ಇಲಾಖೆ : 28,188
  • ಉನ್ನತ ಶಿಕ್ಷಣ ಇಲಾಖೆ : 13,599
  • ಪಶುಸಂಗೋಪನೆ ಇಲಾಖೆ : 11,020
  • ಗ್ರಾಮೀಣಾಭಿವೃದ್ಧಿ ಇಲಾಖೆ : 10,504
  • ಕಂದಾಯ ಇಲಾಖೆ : 10,867
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 9,646
  • ಆರ್ಥಿಕ ಇಲಾಖೆ : 7,668
  • ಕಾನೂನು ಇಲಾಖೆ : 7,659
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ : 4,792
  • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ–ಜೀವನೋಪಾಯ ಇಲಾಖೆ : 4,010
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : 3,391
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 2,435

ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

24,300 ಹುದ್ದೆಗಳ ಭರ್ತಿಗೆ ಅನುಮೋದನೆ :

ಪ್ರಸ್ತುತ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 24,300 ಹುದ್ದೆಗಳ ಇಲಾಖಾವಾರು ವಿವರ ಹೀಗಿದೆ:

  • ಸಾರಿಗೆ ಇಲಾಖೆ : 6,847
  • ಇಂಧನ ಇಲಾಖೆ : 2,400
  • ಆರ್ಥಿಕ (ಹಣಕಾಸು) ಇಲಾಖೆ : 2,243
  • ಆರೋಗ್ಯ ಇಲಾಖೆ : 1,725
  • ಕಂದಾಯ ಇಲಾಖೆ : 1,350
  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 5,267
  • ಕೃಷಿ ಇಲಾಖೆ : 557
  • ಒಳಾಡಳಿತ ಇಲಾಖೆ : 557
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 892
  • ವೈದ್ಯಕೀಯ ಶಿಕ್ಷಣ ಇಲಾಖೆ : 333
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 200
  • ನಗರಾಭಿವೃದ್ಧಿ ಇಲಾಖೆ : 185
  • ಸಹಕಾರ ಇಲಾಖೆ : 180

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಒಟ್ಟು 24,300 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Courtesy : Kannada Prabha

DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

Raichur & Koppal DCC Bank

ಜನಸ್ಪಂದನ ನ್ಯೂಸ್‌, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು DCC Bank ಹುದ್ದೆಗಳ ವಿವರ :

  • ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
  • ಸಹಾಯಕರು (Assistants) – 45 ಹುದ್ದೆಗಳು.
  • ಅಟೆಂಡರ್ (Attender) – 10 ಹುದ್ದೆಗಳು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

DCC Bank ವಿದ್ಯಾರ್ಹತೆ :

1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.

2. ಸಹಾಯಕರು – 45 ಹುದ್ದೆಗಳು.

  • ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.

3. ಅಟೆಂಡರ್ – 10 ಹುದ್ದೆಗಳು.

  • ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ :

  • 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
  • SC / ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿ ಶುಲ್ಕ (Application Fee) :

1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :

  • ಸಾಮಾನ್ಯ ಮೆರಿಟ್‌ (GM) : ರೂ.1600/-
  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-

2. ಅಟೆಂಡರ್ ಹುದ್ದೆ :

  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
  • ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ವಿಧಾನ :

ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
  2. ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
  3. ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
  4. ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
  5. ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
  6. ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಲು ಚಲನ್‌ (Challan) ಪ್ರಿಂಟ್ ತೆಗೆದುಕೊಳ್ಳಿ.
  8. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
  9. ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಮುಖ್ಯ ದಿನಾಂಕಗಳು :

  • ಅರ್ಜಿ ಪ್ರಾರಂಭ : ನವೆಂಬರ್ 21, 2025.
  • ಕೊನೆಯ ದಿನ : ಡಿಸೆಂಬರ್ 22, 2025.

ಮುಖ್ಯ ಸೂಚನೆ :

  • ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
    👉 ascguru.com/raichur-dcc-bank

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಕುಡಿದ ಅಮಲಿನಲ್ಲಿ ರಾಪಿಡೋದಿಂದ ಕೆಳಗೆ ಬಿದ್ದ Young woman ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದ್ಯದ ಅಮಲಿನಲ್ಲಿ ಇದ್ದ ಎಳೆ ವಯಸ್ಸಿನ ಯುವತಿ (Young woman) ಯೊಬ್ಬಳು ರಾಪಿಡೋ ಬೈಕ್‌ನಲ್ಲಿ ಕುಳಿತುಕೊಳ್ಳುವ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಯುವ ಸಮೂಹದ ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

37 ಸೆಕೆಂಡುಗಳ ಈ ವಿಡಿಯೋವನ್ನು @rose_k01 ಎಂಬ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕಾಣುವಂತೆ, ಯುವತಿ (Young woman) ಯೊಬ್ಬಳ ಒಂದು ಕೈ ಮತ್ತು ಕಾಲು ಬೈಕ್ ಮೇಲೆ ಇದ್ದರೆ, ಮತ್ತೊಂದು ಕೈ ಹಾಗೂ ಕಾಲು ನೆಲಕ್ಕೆ ತಾಗಿರುವ ಸ್ಥಿತಿಯಲ್ಲಿ ಕಾಣಿಸುತ್ತದೆ.

ರಾಪಿಡೋ ಚಾಲಕ ಒಂದು ಕೈಯಲ್ಲಿ ಬೈಕ್ ಹಿಡಿದು, ಮತ್ತೊಂದು ಕೈಯಿಂದ ಯುವತಿ (Young woman) ಯನ್ನು ಎಚ್ಚರಿಕೆಯಿಂದ ಕೆಳಗೆ ಇಳಿಸಲು ಯತ್ನಿಸುತ್ತಿರುವುದು ದೃಶ್ಯದಲ್ಲಿದೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ವಿಡಿಯೋದಲ್ಲಿ ಯುವತಿ (Young woman) ಸ್ಪಷ್ಟವಾಗಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿದ್ದು, ಆಕೆಗೆ ಏನಾಗುತ್ತಿದೆ ಎಂಬ ಅರಿವು ಇಲ್ಲದಂತಿದೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೋ ಪೋಸ್ಟ್ ಮಾಡಿದವರು, “ದೆಹಲಿಯ ನೈಟ್ ಕ್ಲಬ್ ಹೊರಗೆ ಮದ್ಯದ ಅಮಲಿನಲ್ಲಿ ಯುವತಿ ರಾಪಿಡೋ ಬೈಕ್‌ನಿಂದ ಬಿದ್ದಿದ್ದಾಳೆ. ಆಕೆ (Young woman) ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಂತಿದೆ” ಎಂದು ವಿವರಣೆ ನೀಡಿದ್ದಾರೆ. ಈ ವಿಡಿಯೋ ಕೆಲವೇ ಸಮಯದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಕುರಿತು ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಯುವತಿ (Young woman) ಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಮತ್ತೊಬ್ಬರು ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರ ಸಹಾಯ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಇನ್ನೂ ಕೆಲವರು ಮದ್ಯಪಾನ ಮಾಡಿದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ ಎಂದು ಸೂಚಿಸಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಮಹಿಳೆಯರ ಸುರಕ್ಷತೆ, ವೈಯಕ್ತಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಇದು ಮತ್ತೆ ಒತ್ತಿಹೇಳುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕೆಳಗೆ ಬೀಳುತ್ತಿರುವ ಯುವತಿ (Young woman) ಯ ವಿಡಿಯೋ :

ಸೂಚನೆ : ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಆಧಾರಿತವಾಗಿದೆ. ಘಟನೆಯ ಸಂಪೂರ್ಣ ಸತ್ಯಾಂಶಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಿಲ್ಲ.

ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

missing girl found by smart dog

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.

ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ನಾಪತ್ತೆಯಾಗಿದ್ದ ಮಗು :

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :

ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :

ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.

ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.

ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :

ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.

ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :

ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯ ಸ್ಥಿತಿ :

ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

0

ಜನಸಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಹೃದಯಾಘಾತ (Heart-Attack) ದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅಚ್ಚರಿಯ ಸಂಗತಿಯೆಂದರೆ, ಹೃದಯಾಘಾತ (Heart-Attack) ಸಂಭವಿಸುವ ಮೊದಲು ನಮ್ಮ ದೇಹವೇ ಕೆಲವೊಂದು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಕೆಲವರಲ್ಲಿ ಈ ಲಕ್ಷಣಗಳು ಒಂದು ತಿಂಗಳ ಮುಂಚೆಯೇ ಕಾಣಿಸಿಕೊಳ್ಳಬಹುದು.

ಹೃದಯಾಘಾತ (Heart-Attack) ಅಥವಾ ಪರಿಧಮನಿ ಕಾಯಿಲೆ (Coronary Artery Disease), ಹೃದಯದಲ್ಲಿ ಬ್ಲಾಕೇಜ್, ಹೆಚ್ಚಿದ ಕೊಲೆಸ್ಟ್ರಾಲ್ ಹಾಗೂ ಪೊಟ್ಯಾಸಿಯಮ್ ಮಟ್ಟಗಳು ಹೃದಯದ ಕಾರ್ಯಕ್ಷಮತೆಯನ್ನು ಹದಗೆಡಿಸಬಹುದು. ಆದರೆ, ಬಹುತೇಕ ಜನರು ಈ ಆರಂಭಿಕ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಹೃದಯದಲ್ಲಿ ಬ್ಲಾಕೇಜ್ ಇದ್ದರೆ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು :

ಎದೆನೋವು :

ಪುನಃ ಪುನಃ ಎದೆನೋವು ಕಾಣಿಸಿಕೊಳ್ಳುವುದು ಹೃದಯದ ಪ್ರಮುಖ ಎಚ್ಚರಿಕೆ. ಈ ನೋವು ಒತ್ತುವಂತೆ, ಸುಡುವಂತೆ ಅಥವಾ ತೀಕ್ಷ್ಣವಾಗಿರಬಹುದು. ದೈಹಿಕ ಚಟುವಟಿಕೆ ಮಾಡುವಾಗ, ಒತ್ತಡದಲ್ಲಿರುವಾಗ ಅಥವಾ ಊಟದ ನಂತರ ನೋವು ಹೆಚ್ಚು ತೀವ್ರವಾಗಬಹುದು. ಕೆಲವರು ಎದೆ ಮೇಲೆ ಯಾರೋ ತುಳಿದಂತೆ ಭಾಸವಾಗುತ್ತದೆ ಎಂದು ವಿವರಿಸುತ್ತಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಉಸಿರಾಟದ ತೊಂದರೆ :

ಸ್ವಲ್ಪ ದೈಹಿಕ ಚಟುವಟಿಕೆಯಿಂದಲೂ ಉಸಿರಾಟಕ್ಕೆ ಕಷ್ಟವಾಗುವುದು, ಹೃದಯಕ್ಕೆ ಸರಿಯಾಗಿ ರಕ್ತ ಹರಿಯುತ್ತಿಲ್ಲ ಎಂಬ ಸೂಚನೆಯಾಗಿರಬಹುದು. ಮೆಟ್ಟಿಲೇರಿದಾಗ ಅಥವಾ ಸ್ವಲ್ಪ ದೂರ ನಡೆದರೂ ಉಸಿರಾಟ ಕಡಿಮೆಯಾಗುವುದು ಗಮನಿಸಬೇಕಾದ ಲಕ್ಷಣ.

ನಿರಂತರ ಆಯಾಸ :

ವಿಶ್ರಾಂತಿ ತೆಗೆದುಕೊಂಡರೂ ದಣಿವು ಹೋಗದೆ ಇರುವುದು, ದೇಹದಲ್ಲಿ ಶಕ್ತಿಯ ಕೊರತೆ ಕಂಡುಬರುವುದು ಹೃದಯ ಸಮಸ್ಯೆಗಳ (Heart-Attack) ಸೂಚನೆ ಆಗಿರಬಹುದು.

ತಲೆತಿರುಗುವಿಕೆ ಅಥವಾ ಮೂರ್ಛೆ :

ಹಠಾತ್ ಎದ್ದು ನಿಂತಾಗ ತಲೆಸುತ್ತುವುದು, ಕಣ್ಣು ಕತ್ತಲೆಯಾಗುವುದು ಅಥವಾ ಮೂರ್ಛೆ ಬರುವಂತೆ ಅನಿಸುವುದು ರಕ್ತದೊತ್ತಡ ಅಥವಾ ಹೃದಯದ ರಕ್ತಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಕಾಲುಗಳಲ್ಲಿ ನೋವು :

ನಡೆಯುವಾಗ ವಿಶೇಷವಾಗಿ ಕಾಲುಗಳಲ್ಲಿ, ಹೆಚ್ಚಾಗಿ ಬಲಗಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು ರಕ್ತನಾಳಗಳಲ್ಲಿ ಅಡಚಣೆಯ ಸೂಚನೆಯಾಗಿರಬಹುದು.

ಅತಿಯಾದ ಬೆವರು :

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹೆಚ್ಚು ಬೆವರುವುದು, ವಿಶೇಷವಾಗಿ ತಣ್ಣನೆಯ ಬೆವರು ಹೃದಯಾಘಾತ (Heart-Attack) ದ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ಒಂದು.

ಅಜೀರ್ಣ ಮತ್ತು ಎದೆಯುರಿ :

ಆಗಾಗ್ಗೆ ಅಜೀರ್ಣ, ಎದೆಯುರಿ ಅಥವಾ ಹೊಟ್ಟೆ ಉಬ್ಬರದಂತಹ ಲಕ್ಷಣಗಳು ಹೃದಯದ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರಬಹುದು.

ಇದನ್ನು ಓದಿ : Water : ಬೊಜ್ಜು ಕರಗಿಸಲು ಇಲ್ಲದೇ ಪರಿಹಾರ ; ಆರೋಗ್ಯ ಸಚಿವಾಲಯದ ಪ್ರಮುಖ ಸಲಹೆ.!

ಗಮನಿಸಬೇಕಾದ ಮುಖ್ಯ ವಿಷಯ :

ಹೃದಯದ ಬ್ಲಾಕೇಜ್ ಇರುವ ಬಹುತೇಕ ಸಂದರ್ಭಗಳಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದೇ ಹೃದಯಾಘಾತ (Heart-Attack) ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ, ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ದೀರ್ಘಕಾಲ ಮುಂದುವರಿದರೆ ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

Disclaimer : ಈ Heart-Attack ಲೇಖನವು ಸಾಮಾನ್ಯ ಮಾಹಿತಿ ಮತ್ತು ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ Heart-Attack ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅತ್ಯಾಗತ್ಯ.

“ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆಹಾರ, ಪಾನೀಯಗಳು, ಸಂಗೀತ, ಮೋಜು – ಮಸ್ತಿ ಇವುಗಳ ಜೊತೆಗೆ ಮದ್ಯಪಾನ (Drink) ವೂ ಅನೇಕರ ಪಾರ್ಟಿಗಳ ಅವಿಭಾಜ್ಯ ಭಾಗವಾಗಿದೆ. “ಒಮ್ಮೆ ಕುಡಿದರೆ ಏನು ಆಗುತ್ತದೆ?”, “ವೇಕೆಂಡ್‌ನಲ್ಲಿ ಮಾತ್ರ ಕುಡಿಯುತ್ತಿದ್ದೇನೆ, ಅದರಲ್ಲಿ ಏನು ತೊಂದರೆ ಇಲ್ಲ” ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ.

ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಮದ್ಯಪಾನ (Drink) ದ ಯಾವ ಪ್ರಮಾಣವೂ ಸಂಪೂರ್ಣ ಸುರಕ್ಷಿತವಲ್ಲ ಮತ್ತು ಅದು ದೇಹದ ಮೇಲೆ ಬರುವ ಪರಿಣಾಮವು ನೀವು ಎಷ್ಟು ಬಾರಿ ಮತ್ತು ಯಾವ ಪ್ರಮಾಣದಲ್ಲಿ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ “ಸುರಕ್ಷಿತ ಆಲ್ಕೋಹಾಲ್ (Drink) ಪ್ರಮಾಣ ಎಂಬುದು ಅಸ್ತಿತ್ವದಲ್ಲೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮದ್ಯಪಾನ ಮಾಡಿದೊಡನೆ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚುವರಿ ಶ್ರಮ ಪಡುತ್ತದೆಯೇ ವಿನಃ, ದೇಹಕ್ಕೆ ಯಾವುದೇ ದೀರ್ಘಕಾಲಿಕ ಲಾಭವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ತಿಂಗಳಿಗೊಮ್ಮೆ ಮದ್ಯಪಾನ (Drink) : ದೇಹದ ಮೇಲಿನ ಪರಿಣಾಮ?

ತಿಂಗಳಿಗೊಮ್ಮೆ ಮಾತ್ರ ಕುಡಿಯುವವರಿಗೂ ಮದ್ಯದ ತಕ್ಷಣದ ಪರಿಣಾಮ ಕಂಡುಬರುತ್ತದೆ. ಆ ದಿನ ಮೆದುಳಿನ ಚಟುವಟಿಕೆ ನಿಧಾನವಾಗುವುದು, ದೇಹ ನಿರ್ಜಲೀಕರಣಗೊಳ್ಳುವುದು, ಹಾಗೆಯೇ ಲಿವರ್‌ ಮೇಲೆ ಹೆಚ್ಚುವರಿ ಒತ್ತಡ ಬೀರುವುದು ಸಾಮಾನ್ಯ.

ಕುಡಿದ ಮರುದಿನ ತಲೆನೋವು, ಆಯಾಸ, ನಿದ್ರೆಯ ಅಸ್ವಸ್ಥತೆ ಮತ್ತು ಗಾಬರಿಯ ಅನುಭವ ಉಂಟಾಗಬಹುದು. ಇದು ದೇಹದ ಸಾಮಾನ್ಯ ಚಕ್ರವನ್ನೇ ತಾತ್ಕಾಲಿಕವಾಗಿ ಅವ್ಯವಸ್ಥೆಗೆ ದೂಡುತ್ತದೆ.

ವಾರಕ್ಕೊಮ್ಮೆ ಕುಡಿಯುವವರ ಅಪಾಯ :

“ವಾರಕ್ಕೊಮ್ಮೆ ಮದ್ಯಪಾನ (Drink) ಮಾಡುವ ಅಭ್ಯಾಸ ಹೊಂದಿದವರಲ್ಲಿ ಫ್ಯಾಟಿ ಲಿವರ್ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ.” ಲಿವರ್ ನಿರಂತರವಾಗಿ ವಿಷಕಾರಕ ಪದಾರ್ಥಗಳನ್ನು ಹೊರಹಾಕಲು ಕೆಲಸ ಮಾಡಬೇಕಾಗಿರುವುದರಿಂದ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೆಳಗಿನ ಜಾವ ಹೆಚ್ಚು ತೀವ್ರವಾದ ಹ್ಯಾಂಗೊವರ್, ದೇಹದ ಭಾರ, ಅಶಾಂತಿ ಮತ್ತು ಜೀರ್ಣಕ್ರಿಯೆ ಅಸ್ಥಿರತೆ ಸಾಮಾನ್ಯ. ಕಾಲಕ್ರಮೇಣ ಇದು ಲಿವರ್‌ನ ಕೊಬ್ಬಿನ ಅಂಶವವು ಹೆಚ್ಚಿಸಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ವಾರಕ್ಕೆ 3–5 ಬಾರಿ ಮದ್ಯಪಾನ (Drink) : ದೀರ್ಘಕಾಲದ ಹಾನಿ :

ವಾರದಲ್ಲಿ ಹಲವಾರು ದಿನ ಕುಡಿಯುವವರು ತಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದಿಲ್ಲ. ಇದರಿಂದ:

  • ಚಯಾಪಚಯ ಕ್ರಿಯೆ ನಿಧಾನವಾಗುವುದು.
  • ಲಿವರ್ ಉಬ್ಬುವಿಕೆ.
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಅಸ್ಥಿರಗೊಳ್ಳುವುದು.
  • ಗುಣಮಟ್ಟದ ನಿದ್ರೆ ಕಡಿಮೆ ಆಗುವುದು.
  • ದೇಹದ ಉರಿಯೂತ ವೇಗವಾಗಿ ಹೆಚ್ಚಾಗುವುದು.

ಈ ಹಂತದಲ್ಲಿ ದೇಹವು ಮದ್ಯದ ಒತ್ತಡದಿಂದ ಹೊರಬರಲು ಸಾಧ್ಯವಿಲ್ಲದ ಮಟ್ಟಕ್ಕೆ ಹೋದಂತೆ ಆಗುತ್ತದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಪ್ರತಿದಿನ ಮದ್ಯಪಾನ ; ಅತ್ಯಂತ ಅಪಾಯಕಾರಿ ಹಂತ :

ಪ್ರತಿದಿನ ಮದ್ಯಪಾನ (Drink) ಮಾಡುವವರು ತೀವ್ರ ಅಪಾಯದ ವರ್ಗಕ್ಕೆ ಸೇರುತ್ತಾರೆ. ಇವರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳು:

  • ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು.
  • ಲಿವರ್ ಫೈಬ್ರೋಸಿಸ್ ಮತ್ತು ಸಿರೋಸಿಸ್ ಅಪಾಯ ಹೆಚ್ಚಾಗುವುದು.
  • ಕೆಲವು ವಿಧದ ಕ್ಯಾನ್ಸರ್ ಸಂಭವನೀಯತೆ ಏರಿಕೆ.
  • ಹೃದಯಕ್ಕೆ ಹಾನಿ.
  • ಇನ್ಸುಲಿನ್ ಪ್ರತಿಕ್ರಿಯೆ ಕುಂದಿದ್ದು, ಡಯಾಬಿಟಿಸ್ ಅಪಾಯ.
  • ಮಾನಸಿಕ ಆರೋಗ್ಯಕ್ಕೆ ಹಾನಿ, ನಿದ್ರೆಯ ಗೊಂದಲ.

ತಜ್ಞರ ಪ್ರಕಾರ, ಪ್ರತಿದಿನ ಕುಡಿಯುವುದರಿಂದ ದೇಹದ ಯಾವುದೇ ಅಂಗಾಂಗವೂ ನಿಷ್ಕ್ರಿಯವಾಗದೆ ಕೆಲಸ ಮಾಡಲು ಸಾಧ್ಯವಿಲ್ಲ.

ಸಾರಾಂಶ :

ವಾರಾಂತ್ಯದ ಮೋಜು, ಒತ್ತಡ ನಿವಾರಣೆ ಅಥವಾ ಅಭ್ಯಾಸ—ಯಾವ ಕಾರಣವಾಗಿರಲಿ, ಮದ್ಯಪಾನ (Drink) ದೇಹದ ಮೇಲಿನ ಹಾನಿಯನ್ನು ಶೇ.100 ತಡೆಯಲು ಸಾಧ್ಯವಿಲ್ಲ. ಕುಡಿಯುವ ಅವಧಿ ಮತ್ತು ಪ್ರಮಾಣ ಹೆಚ್ಚಾದಂತೆ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತೊರೆಯುವುದು ಅಥವಾ ಕಡಿಮೆ ಮಾಡುವುದು ಆರೋಗ್ಯಕ್ಕಾಗಿ ಅತ್ಯುತ್ತಮ ಮಾರ್ಗ.

ಗಮನಿಸಿ : ಇಲ್ಲಿನ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ತಜ್ಞರ ಅಭಿಪ್ರಾಯದ ಆಧಾರಿತವಾಗಿದೆ. ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ವೈದ್ಯರ ಸಲಹೆ ಕಡ್ಡಾಯ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ