ಮಂಗಳವಾರ, ನವೆಂಬರ್ 18, 2025

Janaspandhan News

HomeGeneral NewsOnline Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ;...
spot_img
spot_img
spot_img

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

- Advertisement -

ಜನಸ್ಫಂದನ ನ್ಯೂಸ್‌, ಮುಂಬೈ : ಮಕ್ಕಳ ಮೇಲೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆ ಹಂಚಿಕೊಂಡಿದ್ದಾರೆ. ಅವರು ತಮ್ಮ 13 ವರ್ಷದ ಪುತ್ರಿಯೊಂದಿಗೆ ಆಗಿದ್ದ ಒಂದು ಸೈಬರ್ ಘಟನೆ ಕುರಿತು ಶುಕ್ರವಾರ ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಉದ್ಘಾಟನಾ ಸಮಾರಂಭದಲ್ಲಿ ವಿವರಿಸಿದ್ದಾರೆ.

ಏನಿದು ಘಟನೆ?

ಕೆಲ ತಿಂಗಳ ಹಿಂದೆ, “ನಾನು ಮನೆಯಲ್ಲಿದ್ದಾಗ ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ (Online video game) ಆಡುತ್ತಿದ್ದರು. ಆಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಸಂಪರ್ಕಿಸಿ, ಆಕೆಯ ಚಿತ್ರವನ್ನು ಕಳುಹಿಸುವಂತೆ ಕೇಳಿದ್ದಾನೆ ಎಂದು ನಟ ಅಕ್ಷಯ್ ಹೇಳಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಆನ್‌ಲೈನ್ ಗೇಮ್‌ಗಳಲ್ಲಿ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಕೂಡ ಆಡಬಹುದಾಗಿದೆ. ಅಕ್ಷಯ್ ಕುಮಾರ್ ಅವರ ಪುತ್ರಿ ಆನ್‌ಲೈನ್ ಗೇಮ್‌ (Game) ಆಡುತ್ತಿದ್ದಾಗ, ಆಟದ ಮಧ್ಯ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ‘ಧನ್ಯವಾದಗಳು’, ‘ಚೆನ್ನಾಗಿ ಆಡಿದೀರಿ’ ಮತ್ತು ‘ಅದ್ಭುತ’ ಮುಂತಾದ ಸಭ್ಯ ಸಂದೇಶಗಳೊಂದಿಗೆ ಪ್ರಾರಂಭಿಸಿದರು. ಅದು ಒಳ್ಳೆಯ ವ್ಯಕ್ತಿಯಂತೆ ತೋರುತ್ತಿತ್ತು.

ಸ್ವಲ್ಪ ಸಮಯದ ನಂತರ, ಅವನು ನನ್ನ ಮಗಳನ್ನ ‘ನೀನು ಗಂಡೋ ಅಥವಾ ಹೆಣ್ಣು?’ ಎಂಬ ಸಂದೇಶ ಬಂದಿತು. ನನ್ನ ಮಗಳು ಹೆಣ್ಣು ಎಂದು ಉತ್ತರ ಕೊಟ್ಟಳು. ಬಳಿಕ ಅವನು ‘ನಿನ್ನ ಬೆತ್ತಲೆ ಚಿತ್ರ ಕಳಿಸಬಹುದೇ?’ ಎಂದು ಕೇಳಿದನು. ನನ್ನ ಮಗಳು ಭಯಗೊಂಡು ಆ ಗೇಮ್ (Game) ಸ್ವಿಚ್ ಆಫ್ ಮಾಡಿದರು.”

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಈ ಘಟನೆ, ಸೈಬರ್ ಅಪರಾಧಗಳು ಕೇವಲ ಕಿರುಮಟ್ಟದ ಅಂಚಿನ ವಿಷಯವಲ್ಲ, ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಹಾನಿ ತರುವಂತಹದು ಎಂಬುದನ್ನು ತೋರಿಸುತ್ತದೆ.

ಶಾಲೆಯಲ್ಲಿ ಸೈಬರ್ ಶಿಕ್ಷಣ ಕಡ್ಡಾಯವಾಗಲಿ :

ಅಕ್ಷಯ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ (7ನೇ–10ನೇ ತರಗತಿ) ಸೈಬರ್ ಜಾಗೃತಿ ಮತ್ತು ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ವಾರದ ಪ್ರಮುಖ ವಿಷಯವಾಗಿ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಮಕ್ಕಳನ್ನು ಡಿಜಿಟಲ್ ಜಾಗದಲ್ಲಿ ಸುರಕ್ಷಿತವಾಗಿ ಮತ್ತು ಮಾಹಿತಿ ಸಮೃದ್ಧಿಯಾಗಿ ಬೆಳೆಸುವುದು ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ಮತ್ತು ಭಾಗವಹಿಸಿದವರು :

ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು, ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (IPS) ಮತ್ತು ರಾಣಿ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅಕ್ಷಯ್ ಕುಮಾರ್‌ನ ಈ ಅಭಿಪ್ರಾಯವು, ಸೈಬರ್ ಅಪರಾಧದ ತೀವ್ರತೆಯನ್ನು ಜನರ ಗಮನಕ್ಕೆ ತರುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ.

ಆನ್‌ಲೈನ್ ವಿಡಿಯೋ ಗೇಮ್ (Game) ಕುರಿತು ಅಕ್ಷಯ ವಿಡಿಯೋ :

An online game is a video game that is either partially or primarily played through the Internet or any other computer network available. Online game / Games are ubiquitous on modern gaming platforms, including PCs, consoles and mobile devices, and span many genres, including first-person shooters, strategy games, and massively multiplayer online role-playing game̤


ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

Tea

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ. ‌

ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :

ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.

ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :

ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.

ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :

ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.

ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಪಾದಕೀಯ :

ಒಟ್ಟಿನಲ್ಲಿ, ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಚಹಾ (Tea) ಕುಡಿಯುವ ಅಭ್ಯಾಸವು ದೇಹಕ್ಕೆ ಅಗತ್ಯವಿಲ್ಲದ ಒತ್ತಡವನ್ನು ತಂದುಕೊಡುತ್ತದೆ. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ದಂತ ಕಾಯಿಲೆಗಳು ಮತ್ತು ಜೀರ್ಣಕ್ರಿಯಾ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸವನ್ನು ಬದಲಿಸಿ, ಸರಿಯಾದ ಸಮಯದಲ್ಲಿ ಮಾತ್ರ ಚಹಾ ಅಥವಾ ಕಾಫಿ ಸೇವಿಸುವುದು ಒಳಿತು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments