ಮಂಗಳವಾರ, ನವೆಂಬರ್ 18, 2025

Janaspandhan News

HomeBelagavi NewsBelagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!
spot_img
spot_img
spot_img

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ನಗರದಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಖಡೇಬಜಾರ್‌ನ ಖಡಕ್‌ ಗಲ್ಲಿ ಪ್ರದೇಶದಲ್ಲಿ ಕಲ್ಲುಗಳ ರಾಶಿ ಮನೆಗಳ ಮುಂದೆ ಬಿದ್ದಿರುವುದರಿಂದ ಸ್ಥಳೀಯರು ಆತಂಕಗೊಂಡು ಬೀದಿಗಳಲ್ಲಿ ಗುಂಪುಗೂಡಿದರು.

ತಕ್ಷಣವೇ ಬೆಳಗಾವಿ (Belagavi) ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಮಾಹಿತಿಯ ಪ್ರಕಾರ, ಪ್ರತಿವರ್ಷ ನಡೆಯುವ ಬೆಳಗಾವಿ (Belagavi)  ಯ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಈ ಬಾರಿ ಖಡಕ್‌ ಗಲ್ಲಿಯ ಮೂಲಕ ಸಾಗಿದ್ದು, ಅಲ್ಲಿ ಕೆಲ ಯುವಕರು ಘೋಷಣೆಗಳನ್ನು ಕೂಗಿರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ಬಳಿಕ ಕೆಲವು ಅಪ್ರತಿಷ್ಠಿತ ವ್ಯಕ್ತಿಗಳಿಂದ ಮನೆಗಳ ಮೇಲೆ ಕಲ್ಲುತೂರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೆ ತಲ್ವಾರ್ ಪ್ರದರ್ಶಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಸಾಮಾನ್ಯವಾಗಿ ಈ ಉರುಸ್ ಮೆರವಣಿಗೆ (Belagavi) ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿಯ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆ ಖಡಕ್‌ ಗಲ್ಲಿಯ ಮೂಲಕ ಹಾದುಹೋಗಿರುವುದರಿಂದ ಸ್ಥಳೀಯರ ಅಸಮಾಧಾನ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ Belagavi ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮತ್ತು ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಇದೀಗ Belagavi ಯ ಖಡಕ್‌ ಗಲ್ಲಿ ಪ್ರದೇಶದಲ್ಲಿ ಭಾರೀ ಪೊಲೀಸ್ ಬಲವನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆಯನ್ನೂ ನಿಯೋಜಿಸಲಾಗಿದೆ. ನಗರದಲ್ಲಿ ಶಾಂತಿ ಭದ್ರತೆ ಕಾಪಾಡುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

Tea

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ. ‌

ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :

ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.

ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :

ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.

ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :

ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.

ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಪಾದಕೀಯ :

ಒಟ್ಟಿನಲ್ಲಿ, ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಚಹಾ (Tea) ಕುಡಿಯುವ ಅಭ್ಯಾಸವು ದೇಹಕ್ಕೆ ಅಗತ್ಯವಿಲ್ಲದ ಒತ್ತಡವನ್ನು ತಂದುಕೊಡುತ್ತದೆ. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ದಂತ ಕಾಯಿಲೆಗಳು ಮತ್ತು ಜೀರ್ಣಕ್ರಿಯಾ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸವನ್ನು ಬದಲಿಸಿ, ಸರಿಯಾದ ಸಮಯದಲ್ಲಿ ಮಾತ್ರ ಚಹಾ ಅಥವಾ ಕಾಫಿ ಸೇವಿಸುವುದು ಒಳಿತು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments