ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬ ಕಲಹದಿಂದ ಮಾನಸಿಕ ಒತ್ತಡಕ್ಕೊಳಗಾದ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನದಿ (River) ಗೆ ಹಾರಿರುವ ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಮಾಹಿತಿಯ ಪ್ರಕಾರ, ಶಾಮ್ಲಿಯ ಕೈರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಖೇಲ್ ಕಲಾ ನಿವಾಸಿ 38 ವರ್ಷದ ಸಲ್ಮಾನ್ ಎಂಬವರು ತಮ್ಮ ಪತ್ನಿ ಖುಸ್ನುಮಾ ಅವರೊಂದಿಗೆ ಕಳೆದ 14 ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದರು. ದಂಪತಿಗೆ ಮೆಹಕ್ (12), ಶಿಫಾ (5), ಅಯಾನ್ (3), ಮತ್ತು ಕೇವಲ 8 ತಿಂಗಳ ಮಗು ಇನೈಶಾ ಎಂಬ ನಾಲ್ಕು ಮಕ್ಕಳು ಇದ್ದರು.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಕುಟುಂಬದ ಸದಸ್ಯರ ಪ್ರಕಾರ, ಖುಸ್ನುಮಾ ಮನೆಯಿಂದ ಹೊರಡುವುದು ಇದು ಮೊದಲ ಬಾರಿಯಲ್ಲ. ಇತ್ತೀಚೆಗೆ ಕೂಡಾ ಆಕೆ ಕೆಲವು ಕಾರಣಗಳಿಂದ ಮನೆಯಿಂದ ಹೊರಟಿದ್ದಳು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಿಂದ ಮನೆಯೊಳಗಿನ ವಾತಾವರಣದಲ್ಲಿ ಒತ್ತಡ ಉಂಟಾಗಿದ್ದಿತು ಎಂದು ಕುಟುಂಬದವರು ಹೇಳಿದರು. ಮತ್ತೇ ಇತ್ತೀಚೆಗೆ ಸಲ್ಮಾನ್ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ, ಸಲ್ಮಾನ್ ತುಂಬಾ ಬೇಸರಗೊಂಡಿದ್ದರು ಎಂದು ತಿಳಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸಲ್ಮಾನ್ ತನ್ನ ನಾಲ್ಕು ಮಕ್ಕಳೊಂದಿಗೆ ಹಳೆಯ ಯಮುನಾ ನದಿ (River) ಸೇತುವೆಯ ಕಡೆ ತೆರಳಿದ್ದಾನೆ. ಅಲ್ಲಿ ಮಕ್ಕಳಿಗೆ ತಿಂಡಿ ಕೊಟ್ಟ ನಂತರ ಆತ ನದಿ (River) ಯ ಕಡೆ ಮಕ್ಕಳೊಂದಿಗೆ ತೆರಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಜೆ ವೇಳೆಗೆ ಸಲ್ಮಾನ್ ಮತ್ತು ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತಕ್ಷಣ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೊನೆಯ ಬಾರಿ ಸಲ್ಮಾನ್ ಯಮುನಾ ನದಿ (River) ಸೇತುವೆಯ ಬಳಿ ಇದ್ದ ಮಾಹಿತಿ ದೊರೆತಿದೆ.
ಘಟನೆಯ ಬಗ್ಗೆ ಮಾತನಾಡಿದ ಅತಿರಿಕ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ನಾವು ತಕ್ಷಣ ಡೈವರ್‌ಗಳ ತಂಡವನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದ್ದೇವೆ. ಈಗಲೂ ನದಿ (River) ಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ನಿಜಸ್ವರೂಪ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!
ಘಟನೆಯ ಮೊದಲು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆ ವಿಡಿಯೋದಲ್ಲಿ ಆತ ತನ್ನ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಜೀವನದಲ್ಲಿ ಎದುರಿಸುತ್ತಿದ್ದ ವೈಯಕ್ತಿಕ ಕಷ್ಟಗಳನ್ನು ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನದಿಯ (River) ಕಡೆ ಹೋಗುವ ಮುನ್ನ ವಿಡಿಯೋ ಮಾಡಿದ ಪತಿ :
#यूपी– शामली जिले में एक पिता अपने 4 बच्चों को लेकर यमुना नदी में कूद गया।
👉पांचों की तलाश जारी है। इस युवक की पत्नी 2 दिन पहले अपने बॉयफ्रेंड संग चली गई, तभी से ये डिप्रेस्ड था।#ncrpatrika #shamlipolice #suicidal #viralvideo #upnews #Loewe pic.twitter.com/TLO9mASzzT
— NCR पत्रिका (@ncrpatrika) October 4, 2025
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.
Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!
ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.
ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಪೊಲೀಸರು ಈಗ ಇಬ್ಬರ ಮೊಬೈಲ್ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.