Tuesday, October 14, 2025

Janaspandhan News

HomeCrime NewsGirl : ನಡು ರಸ್ತೆಯಲ್ಲಿಯೇ 14 ವರ್ಷದ ಬಾಲಕಿಯ ಕುತ್ತಿಗೆ ಹಿಚುಕಿದ ಕಿರಾತಕ.!
spot_img
spot_img
spot_img

Girl : ನಡು ರಸ್ತೆಯಲ್ಲಿಯೇ 14 ವರ್ಷದ ಬಾಲಕಿಯ ಕುತ್ತಿಗೆ ಹಿಚುಕಿದ ಕಿರಾತಕ.!

- Advertisement -

ಜನಸ್ಪಂದನ ನ್ಯೂಸ್‌, ಮೀರತ್ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ನಡೆದ ಒಂದು ಶಾಕಿಂಗ್ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಕ್ಟೋಬರ್ 3 ರಂದು ನಡು ಬೀದಿಯಲ್ಲೇ ಯುವಕನೊಬ್ಬ ಅಪ್ರಾಪ್ತ ಬಾಲಕಿಯ (Girl) ಕುತ್ತಿಗೆ ಹಿಡಿದು ಕಿರುಕುಳ ನೀಡಿದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಮೀರತ್ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಆರೋಪಿ ಜಾನು ಅಲಿಯಾಸ್ ಜಾನೆ ಆಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗಾಜಿಯಾಬಾದ್‌ನಿಂದ ತನ್ನ ಅಜ್ಜಿಯ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ 14 ವರ್ಷದ ಬಾಲಕಿ (Girl) ಯೊಂದಿಗೆ ಆರೋಪಿಯು ವಾಗ್ವಾದ ನಡೆಸಿದ್ದಾನೆ. ಆ ವೇಳೆ ಆತ ಬಾಲಕಿಯ ವಿಡಿಯೋವನ್ನು ಫೋನ್‌ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿ ಗ್ರಾಮದಲ್ಲಿನ ಇತರರಿಗೆ ಹಂಚಿದ್ದಾನೆ ಎಂಬ ಆರೋಪವಿದೆ.

ಆತ ಎದುರಾದಾಗ ತನ್ನ ಫೋನ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದಳು. ಆಗ ಕೋಪಗೊಂಡ ಆರೋಪಿ ಆಕೆಯ (Girl) ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

ಇನ್ನು ಬಾಲಕಿಯ (Girl) ಚೀಕಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದಂತೆಯೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶಹಜಹಾನ್‌ಪುರ ಕಾಲುವೆ ರಸ್ತೆಯ ಬಳಿ ಭಾನುವಾರ ಬಂಧಿಸಿದ್ದಾರೆ.

ಪೊಲೀಸರು ಬಂಧಿಸಲು ತೆರಳಿದಾಗ “ಓಡಿಹೋಗಲು ಪ್ರಯತ್ನಿಸುತ್ತಿದ್ದ ಆರೋಪಿ ಹೊಂಡಕ್ಕೆ ಬಿದ್ದು ಬಲಗೈ ಮುರಿದುಕೊಂಡನು. ಅವನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಆರೋಪಿ ವಿರುದ್ಧ ಬಾಲಕಿಯ (Girl) ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆ (POCSO Act) ಮತ್ತು ಭಾರತೀಯ ದಂಡ ಸಂಹಿತೆಯ (IPC) ಅನ್ವಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ವಿಧಿವಿಜ್ಞಾನ ಮತ್ತು ಡಿಜಿಟಲ್ ಪರೀಕ್ಷೆಗಳು ನಡೆಯುತ್ತಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಬಾಲಕಿಯ (Girl) ಸುರಕ್ಷತೆ ಹಾಗೂ ತನಿಖೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡಿದ್ದಾರೆ.

ವಿಡಿಯೋ :


River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

River

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬ ಕಲಹದಿಂದ ಮಾನಸಿಕ ಒತ್ತಡಕ್ಕೊಳಗಾದ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನದಿ (River) ಗೆ ಹಾರಿರುವ ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಶಾಮ್ಲಿಯ ಕೈರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಖೇಲ್ ಕಲಾ ನಿವಾಸಿ 38 ವರ್ಷದ ಸಲ್ಮಾನ್ ಎಂಬವರು ತಮ್ಮ ಪತ್ನಿ ಖುಸ್ನುಮಾ ಅವರೊಂದಿಗೆ ಕಳೆದ 14 ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದರು. ದಂಪತಿಗೆ ಮೆಹಕ್ (12), ಶಿಫಾ (5), ಅಯಾನ್ (3), ಮತ್ತು ಕೇವಲ 8 ತಿಂಗಳ ಮಗು ಇನೈಶಾ ಎಂಬ ನಾಲ್ಕು ಮಕ್ಕಳು ಇದ್ದರು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಕುಟುಂಬದ ಸದಸ್ಯರ ಪ್ರಕಾರ, ಖುಸ್ನುಮಾ ಮನೆಯಿಂದ ಹೊರಡುವುದು ಇದು ಮೊದಲ ಬಾರಿಯಲ್ಲ. ಇತ್ತೀಚೆಗೆ ಕೂಡಾ ಆಕೆ ಕೆಲವು ಕಾರಣಗಳಿಂದ ಮನೆಯಿಂದ ಹೊರಟಿದ್ದಳು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಿಂದ ಮನೆಯೊಳಗಿನ ವಾತಾವರಣದಲ್ಲಿ ಒತ್ತಡ ಉಂಟಾಗಿದ್ದಿತು ಎಂದು ಕುಟುಂಬದವರು ಹೇಳಿದರು. ಮತ್ತೇ ಇತ್ತೀಚೆಗೆ ಸಲ್ಮಾನ್ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ, ಸಲ್ಮಾನ್ ತುಂಬಾ ಬೇಸರಗೊಂಡಿದ್ದರು ಎಂದು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸಲ್ಮಾನ್ ತನ್ನ ನಾಲ್ಕು ಮಕ್ಕಳೊಂದಿಗೆ ಹಳೆಯ ಯಮುನಾ ನದಿ (River) ಸೇತುವೆಯ ಕಡೆ ತೆರಳಿದ್ದಾನೆ. ಅಲ್ಲಿ ಮಕ್ಕಳಿಗೆ ತಿಂಡಿ ಕೊಟ್ಟ ನಂತರ ಆತ ನದಿ (River) ಯ ಕಡೆ ಮಕ್ಕಳೊಂದಿಗೆ ತೆರಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಸಂಜೆ ವೇಳೆಗೆ ಸಲ್ಮಾನ್ ಮತ್ತು ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತಕ್ಷಣ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೊನೆಯ ಬಾರಿ ಸಲ್ಮಾನ್ ಯಮುನಾ ನದಿ (River)  ಸೇತುವೆಯ ಬಳಿ ಇದ್ದ ಮಾಹಿತಿ ದೊರೆತಿದೆ.

ಘಟನೆಯ ಬಗ್ಗೆ ಮಾತನಾಡಿದ ಅತಿರಿಕ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ನಾವು ತಕ್ಷಣ ಡೈವರ್‌ಗಳ ತಂಡವನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದ್ದೇವೆ. ಈಗಲೂ ನದಿ (River) ಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ನಿಜಸ್ವರೂಪ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

ಘಟನೆಯ ಮೊದಲು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆ ವಿಡಿಯೋದಲ್ಲಿ ಆತ ತನ್ನ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಜೀವನದಲ್ಲಿ ಎದುರಿಸುತ್ತಿದ್ದ ವೈಯಕ್ತಿಕ ಕಷ್ಟಗಳನ್ನು ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಯ (River) ಕಡೆ ಹೋಗುವ ಮುನ್ನ ವಿಡಿಯೋ ಮಾಡಿದ ಪತಿ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments