Sunday, September 8, 2024
spot_img
spot_img
spot_img
spot_img
spot_img
spot_img
spot_img

Miracle : ಜೈನ ಮುನಿಗಳ ಮಂತ್ರ ಪಠಣೆ, ಎದ್ದು ಕುಳಿತ ಗಾಯಗೊಂಡ ಬಸವ ; ಪವಾಡದ ವಿಡಿಯೋ ವೈರಲ್..!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ದಿನಮಾನದಲ್ಲಿ ದೇವರನ್ನೇ ನಂಬದ ಎಷ್ಟು ಜನ ನಮ್ಮ ಮಧ್ಯೆಯೇ ಇದ್ದಾರೆ. ಹೀಗಿರಬೇಕಾದರೆ ಮಂತ್ರದಿಂದ ರೋಗ ನಿವಾರಣೆ ಆಗುತ್ತದೆಂದರೇ ಯಾರಾದರೂ ನಂಬುತ್ತಾರಾ.?

ಖಂಡಿತಾ ನಂಬಲೇ ಬೇಕು ನೀವು.!

ಮಂತ್ರಗಳಿಗೆ  ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮಂತ್ರಗಳಿಗೆ ಅಸಾಧ್ಯವಾದದನ್ನು ಸಾಧ್ಯವಾಗಿಸುವ ಶಕ್ತಿ ಇದೆ. ಆದರೆ ಆ ಶಕ್ತಿಯನ್ನು ಪಡೆದುಕೊಳ್ಳುವ ಯೋಗ್ಯತೆ ನಮಗಿರದೇ, ಅದೆಲ್ಲಾ ಸುಳ್ಳು, ಮೂಢ ನಂಬಿಕೆ ಅಂತೆಲ್ಲಾ ಹೇಳಿ ಅಪಹಾಸ್ಯ ಮಾಡುವವರೇ ಬಹಳ. ಮಂತ್ರದಿಂದ ಮಾವಿನ ಕಾಯಿ ಉದರುತ್ತಾ.? ಅಂಥ ಕೇಳುವವರ ಮಧ್ಯ ಇಲ್ಲೊಂದು ಪವಾಡ ನಡೆದಿದೆ.

ಇದನ್ನೂ ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ಕಾಲಿಗೆ ಗಾಯವಾಗಿ ನರಳುತ್ತಾ ಬಿದ್ದಿದ್ದ ಹೋರಿ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ :

ಸದ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಲಿಗೆ ತೀವ್ರ ಗಾಯವಾಗಿ ಎದ್ದು ಕೂರಲು ಆಗದೆ ನಿಲ್ಲಲು ಆಗದೆ ಹೋರಿಯೊಂದು ನೆಲದಲ್ಲಿ ಬಿದ್ದು ಪರದಾಡುತ್ತಿತ್ತು.  ಅಲ್ಲಿಗೆ ಬಂದ ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ಆ ಹೋರಿ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ.

ಈ ಕುರಿತ ವಿಡಿಯೋವನ್ನು @ನಮ್ಮ ಮೋದಿ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ತಪಸ್ವಿ ಜೈನ ಮುನಿಗಳು ಮಂತ್ರ ಪಠಣ ಮಾಡುತ್ತಿದ್ದಂತೆ ಕಾಲಿಗೆ ಗಾಯವಾಗಿದ್ದ ಗೋ ಮಾತೆ ಹೇಗೆ ಏಳುತ್ತದೆ ನೋಡೊ; ಇದಲ್ಲವೆ ಸನಾತನ ಧರ್ಮದ ಶಕ್ತಿ”. ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಕಾಲಿಗೆ ಗಾಯವಾಗಿ ಎದ್ದು ಕೂರಲು ಆಗದೆ, ಹೋರಿಯೊಂದು ಅಲ್ಲೇ ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವ ದೃಶ್ಯವನ್ನು ಕಾಣಬಹುದು.   ಆ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಜೈನ ಮುನಿಗಳು ಹೋರಿಯ ಎದುರು ಮಂತ್ರ ಪಠಣ ಮಾಡುತ್ತಾರೆ. ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ನೆಲದ ಮೇಲೆ  ನರಳಾಡುತ್ತ ಬಿದ್ದಿದ್ದ ಹೋರಿ ಆ ತಕ್ಷಣ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ.

ಇದನ್ನೂ ಓದಿ : HAL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಈ ಕೂಡಲೇ ಅರ್ಜಿ ಸಲ್ಲಿಸಿ.!

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇ ಅಲ್ಲವೇ ಮಂತ್ರಗಳ ಶಕ್ತಿʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಸನಾತನ ಧರ್ಮದ ಶಕ್ತಿ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಂತ್ರಗಳ ಶಕ್ತಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img