Thursday, April 25, 2024
spot_img
spot_img
spot_img
spot_img
spot_img
spot_img

ಹೆಣ್ಣು ವೇಷದಲ್ಲಿ ಲೇಡಿಸ್ ಹಾಸ್ಟೆಲ್​​​ಗೆ ನುಗ್ಗಿದ ಯುವಕನಿಗೆ ಬಿತ್ತು ಗೂಸಾ ; Video ವೈರಲ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಉಡಾಳ (ಪೋಲಿ) ಹುಡುಗರು ರಸ್ತೆಯಲ್ಲಿ ಸುಮ್ಮನೇ ಹೋಗುವ ಜನರಿಗೆ ತೊಂದರೆ ಕೊಡ್ತಿರ್ತಾರೆ. ಆದರೆ ಇಲ್ಲೋರ್ವ ಪೋಲಿ ಯುವಕ ಒಂದ್ ಹೆಜ್ಜೆ ಮುಂದೆ ಹೋಗಿದ್ದಾನೆ.

ಅದೇನೆಂದರೆ ಯುವಕ ಹೆಣ್ಣಿನ ವೇಷ (female get up) ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದಾನೆ. ಹೀಗೆ ಹಾಸ್ಟೆಲ್ ಗೆ ನುಗ್ಗಿದ ಈತ ಸ್ವಲ್ಪ ಹೊತ್ತಿನಲ್ಲೇ ಅಲ್ಲಿನ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಇದನ್ನು ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆದಿದ್ದು ಎಂಬ ಮಾಹಿತಿ ತಿಳಿದು ಬಂದಿಲ್ಲ.

@gharkalesh ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹೆಣ್ಣಿನ ವೇಷ ಧರಿಸಿ ಹುಡುಗಿಯರ ಹಾಸ್ಟೆಲ್ ಗೆ ನುಸುಳಿದ ವ್ಯಕ್ತಿ ಹಾಸ್ಟೆಲ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಶೀರ್ಷಿಕೆ (heading) ನೀಡಲಾಗಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಹೆಣ್ಣಿನ ವೇಷ ಹಾಕ್ಕೊಂಡು ಹುಡುಗಿಯರ ಹಾಸ್ಟೆಲ್​​​ಗೆ ಬಂದ ಯುವಕನನ್ನು ರೆಡ್ ಹ್ಯಾಂಡ್ ಹಿಡಿದು, ಹಾಸ್ಟೆಲ್ ಅಧಿಕಾರಿಗಳು (hostel officer’s) ವಿದ್ಯಾರ್ಥಿನಿಯರ ಮುಂದೆಯೇ ಆತನಿಗೆ ಸರಿಯಾಗಿ ಗೂಸಾ ಕೊಡುತ್ತಿರುವ ದೃಶ್ಯವನ್ನು ಕಾಣಬಹುದು.

ನಂತರ ಆ ಯುವಕ ಧರಿಸಿದ್ದ ಸೀರೆಯನ್ನು (saree) ಆತನ ಕೊರಳಿಗೆ ಸುತ್ತಿ, ಅಧಿಕಾರಿಗಳು ಆತನನ್ನು ಹೊರಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸಹ ನೋಡಬಹುದು.

ಇದನ್ನು ಓದಿ : Test : ವ್ಯಕ್ತಿ ಕೈಗಳನ್ನು ಹೇಗೆ ಹಿಡಿಯುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವ ಗುರುತಿಸಬಹುದು.!

ಸದ್ಯ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಇಂತವರನ್ನು ಜೈಲಿಗೆ ಕಳುಹಿಸಬೇಕು ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೋರ್ವ ನನ್ನ ಕಾಲೇಜಿನಲ್ಲಿ ಹುಡುಗಿಯರು ಹುಡುಗರ ಹಾಸ್ಟೆಲ್ ಗೆ ಬಂದು ಕೂರುತ್ತಿದ್ದರು, ಅವರಿಗೇಕೆ ಯಾರು ಏನು ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

spot_img
spot_img
spot_img
- Advertisment -spot_img