Thursday, April 25, 2024
spot_img
spot_img
spot_img
spot_img
spot_img
spot_img

ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಚಲಿಸುತ್ತಿರುವ ಸ್ಕೂಟರ್​ನಲ್ಲಿಯೇ (scooter) ಅಸಭ್ಯವಾಗಿ ನಡೆದುಕೊಂಡಿರುವ ಇಬ್ಬರು ಯುವತಿಯರ ವೈರಲ್ ಆಗಿರೋ ವಿಡಿಯೋಗೆ ಮತ್ತೇ ಫೈನ್‌ ಬಿದ್ದಿರುವ ಬಗ್ಗೆ ವರದಿಯಾಗಿದೆ. ಆ ವಿಡಿಯೋದಲ್ಲಿ ಯುವತಿಯರು ತುಂಬಾ ಅಂದರೆ ತುಂಬಾನೇ ಅಸಹ್ಯವಾಗಿ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು.

ನೋಯ್ಡಾದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಓರ್ವ ಯುವಕ ಸ್ಕೂಟರ್ ಚಾಲನೆ (drive) ಮಾಡುತ್ತಿದ್ದರೆ, ಇತ್ತ ಯುವತಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ಮತ್ತು ಅಸಹ್ಯವಾಗಿ ನೃತ್ಯ ಮಾಡಿದ್ದಾರೆ. ಹಾಗು ಇನ್ನೊಬ್ಬ ವ್ಯಕ್ತಿ ಆ ಯುವತಿಯರ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದನು.

ಇದನ್ನೂ ಓದಿ : ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

ಯಾವಾಗ ಈ ವಿಡಿಯೋ ವೈರಲ್ ಆಯಿತೋ ಕೂಡಲೇ ನೋಯ್ಡಾ (Noida) ಸಂಚಾರ ಪೊಲೀಸರು 33 ಸಾವಿರ ರೂ. ದಂಡ (penalty) ವಿಧಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ “X ” ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ದೂರನ್ನು ಪರಿಗಣಿಸಿ ನಿಯಮಗಳ ಪ್ರಕಾರ ಇ-ಚಲನ್ (ರೂ.33,000/-) ನೀಡಿದ್ದರು.

ಆದರೆ ಯಾವಾಗ ಈ ಹಿಂದೆಯೂ ಕೂಡ ಇದೇ ರೀತಿಯ ಅಸಭ್ಯವಾಗಿ ಮತ್ತು ಅಪಾಯಕಾರಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಹಿತಿ ಟ್ರಾಫಿಕ್ ಪೊಲೀಸರಿಗೆ ತಿಳಿಯಿತ್ತೋ, ಮತ್ತೆ 47,500 ರೂಪಾಯಿ ದಂಡವನ್ನು ಹಾಕಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಎರಡು ಘಟನೆಯಿಂದ ಸ್ಕೂಟಿಯ ಮಾಲೀಕರಿಗೆ 80,500 ರೂಪಾಯಿ ದಂಡದ ಬರೆ ಬಿದ್ದಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ (ಟ್ರಾಫಿಕ್) ಅನಿಲ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ದೂರು ನೀಡಲು ಬಂದ 23ರ ಯುವತಿಯನ್ನು ಬಲೆಗೆ ಬೀಳಿಸಿಕೊಂಡ 53ರ ASI.!

ಐಪಿಸಿ ಸೆಕ್ಷನ್ 279 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕರಿಗೆ ತೊಂದರೆ), 336 ಮತ್ತು 337 (ಇತರರ ಜೀವಕ್ಕೆ ಹಾನಿಯುಂಟು ಮಾಡುವ) ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ.

Kann

spot_img
spot_img
spot_img
- Advertisment -spot_img