Friday, October 18, 2024
spot_img
spot_img
spot_img
spot_img
spot_img
spot_img
spot_img

ಸಲೂನ್​​​ನಲ್ಲಿ ತಲೆಗೆ massage ಮಾಡಿಕೊಂಡ ವ್ಯಕ್ತಿಗೆ ಲಕ್ವಾ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬಳ್ಳಾರಿ : 30 ವರ್ಷದ ವ್ಯಕ್ತಿಯೊಬ್ಬರು ತಲೆಗೆ ಮಸಾಜ್ ಮಾಡಿಕೊಂಡ ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿರುವ ಆಘಾತಕಾರಿ ಘಟನೆ ಇತ್ತೀಚಿಗೆ ಬಳ್ಳಾರಿಯ ಸಲೂನ್ ಒಂದರಲ್ಲಿ ನಡೆದಿದೆ.

ಈ ಘಟನೆ ನಡೆದು ಅವರು ಚೇತರಿಸಿಕೊಳ್ಳಲು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ತಿಂಗಳು.

ಇದನ್ನು ಓದಿ : Health : ಡೊಳ್ಳು ಹೊಟ್ಟೆಯನ್ನು 1 ತಿಂಗಳಿನಲ್ಲಿ ಚಪ್ಪಟೆಯಾಗಿ ಮಾಡುತ್ತದೆ ಈ ಪದಾರ್ಥ.!

ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೂ ಸೆಲೂನ್‌ಗೆ ಹೋಗಿದ್ದಾರೆ. ಈ ವೇಳೆ ಹೆಡ್‌ ಮಸಾಜ್‌ ಮಾಡಿಸಿಕೊಂಡಿದ್ದಾರೆ.

ಮಸಾಜ್‌ ಮಾಡುವ ವೇಳೆ ಅವರಿಗೆ ಕುತ್ತಿಗೆ ಭಾಗದಲ್ಲಿ ತೀವ್ರ ನೋವಿನ ಅನುಭವವಾಗಿದೆ. ಆದರೆ ಅದು ಕಡೆಗಣಿಸಿದ ವ್ಯಕ್ತಿ ಮನೆಗೆ ವಾಪಸ್ಸಾಗಿದ್ದಾರೆ.

ಇದನ್ನು ಓದಿ : ರಾತ್ರಿ ವೇಳೆ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಅಪಾಯದ ಗಂಟೆ ಬಾರಿಸಿದಂತೆ.!

ಆಬಳಿಕ ವ್ಯಕ್ತಿಗೆ ಮಾತನಾಡಲು ಕೂಡಾ ಆಗಲಿಲ್ಲ. ದೇಹದ ಎಡಭಾಗದಲ್ಲಿ ದೌರ್ಬಲ್ಯ ಗಮನಕ್ಕೆ ಬಂದಿದೆ. ಇದರಿಂದ ಆತಂಕಗೊಂಡ ಅವರು ತಕ್ಷಣ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ವೈದ್ಯರು ಅವರಿಗೆ ಪಾರ್ಶ್ವವಾಯು (ಲಕ್ವಾ) ಬಂದಿರುವುದಾಗಿ ಹೇಳಿದ್ದಾರೆ. ಕುತ್ತಿಗೆ ಭಾಗದಲ್ಲಿ ತಿರುಚಿದಂತಾಗಿ ಈ ಅಪಾಯ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ರೋಗಿಗೆ ಆಂಟಿಕೊಯಾಗುಲಂಟ್ ಚಿಕಿತ್ಸೆ ನೀಡಲಾಯಿತು. ಆದರೆ ಅವರು ಗುಣಮುಖರಾಗಲಿಲ್ಲ. ಸುಮಾರು ಎರಡು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಮಾರಣಾಂತಿಕ ಸಮಸ್ಯೆಯಿಂದ ಕೂದಲೆಳೆ ಅಂತರದಲ್ಲಿ ವ್ಯಕ್ತಿಯು ಪಾರಾಗಿ ಮನೆಗೆ ಮರಳಿದ್ದಾರೆ ಎಂದು ವರದಿ ತಿಳಿಸಿದೆ.

ವೈದ್ಯರ ಅಭಿಪ್ರಾಯ :
ಮಸಾಜ್ ಮಾಡುವ ಸಮಯದಲ್ಲಿ ಹೆಚ್ಚು ಒತ್ತಡ ಹಾಕುವುದರಿಂದ ಅಥವಾ ಕುತ್ತಿಗೆ ತಿರುಚುವುದರಿಂದ ರಕ್ತನಾಳಗಳ ಮೇಲೆ ಅತಿಯಾದ ಒತ್ತಡ ಉಂಟಾಗಿ, ಮೆದುಳಿಗೆ ರಕ್ತದ ಹರಿವು ಅಡ್ಡಿಯಾದಾಗ ಅಥವಾ ಕಡಿಮೆಯಾದಾಗ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಜೊತೆಗೆ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ಪಾರ್ಶ್ವವಾಯುವನ್ನು ಸಲೂನ್ ಸ್ಟ್ರೋಕ್ ಅಥವಾ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಅಂತ ಕರೆಯಬಹುದು ಎಂದು ಡಾ. ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.

ಮಸಾಜ್ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ :
* ಮಸಾಜ್ ಮಾಡುವವರು ಚೆನ್ನಾಗಿ ತರಬೇತಿ ಪಡೆದಿದ್ದು ಯಾವುದೇ ರೀತಿಯಲ್ಲಿಯೂ ಅಗತ್ಯಕ್ಕಿಂತ ಹೆಚ್ಚಾಗಿ ಒತ್ತಡ ಹಾಕಬಾರದು.

* ಮಸಾಜ್ ಮಾಡುವಾಗ ತಲೆನೋವು, ವಾಕರಿಕೆ, ವಾಂತಿ ಅಥವಾ ಕುತ್ತಿಗೆ ನೋವು ಕಾಣಿಸಿಕೊಂಡರೆ ಮಸಾಜ್ ಮಾಡುವುದನ್ನು ನಿಲ್ಲಿಸಲು ಹೇಳಬೇಕು.

* ಬಳಿಕ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಚಿಕಿತ್ಸೆ ವಿಳಂಬವಾದರೆ ಪಾರ್ಶ್ವವಾಯು ಅಥವಾ ಪ್ರಾಣಹಾನಿಯಾಗಬಹುದು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img