ಜನಸ್ಪಂದನ ನ್ಯೂಸ್, ಡೆಸ್ಕ್ : ಸೆಲೆನಿಯಮ್, ಸತು ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ ಈ ಸೋಂಪು ಕಾಳುಗಳು. ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ನಿರ್ಣಾಯಕವಾಗಿವೆ.
ಇದನ್ನು ಓದಿ : ರಾತ್ರಿ ವೇಳೆ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಅಪಾಯದ ಗಂಟೆ ಬಾರಿಸಿದಂತೆ.!
ಡೊಳ್ಳು ಹೊಟ್ಟೆಯನ್ನು ಈ ಸೋಂಪು ಕಾಳು ಚಪ್ಪಟೆಯಾಗಿ ಹೇಗೆ ಮಾಡುತ್ತದೆ.?
* ಪ್ರತಿದಿನ ಕೇವಲ ಒಂದು ಚಮಚ ಸೋಂಪು ಕಾಳು ಸೇವಿಸುವ ಮೂಲಕ, ನಿಮ್ಮ ದೇಹದ ಚಯಾಪಚಯವನ್ನು ಹೆಚ್ಚಿಸಬಹುದು. ವ್ಯಾಯಾಮದ ಜೊತೆಗೆ ಸೋಂಪು ಕಾಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ವೇಗವಾಗಿ ಕರಗಿಸಲು ನಿಮಗೆ ಸಾಧ್ಯವಾಗುತ್ತದೆ.
* ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಬಯಸಿದರೆ, ಪ್ರತಿದಿನ ಒಂದು ಚಮಚ ಸೋಂಪು ಕಾಳನ್ನು ಸೇವಿಸಲು ಪ್ರಾರಂಭಿಸಬೇಕು. ನಿಯಮಿತವಾಗಿ ಸೋಂಪು ಕಾಳುಗಳನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ. ಮೂಳೆಗಳ ಆರೋಗ್ಯಕ್ಕೂ ಸಹ ಸೋಂಪು ಕಾಳುಗಳು ಸಹಕಾರಿಯಾಗಿವೆ.
* ಸೋಂಪು ಕಾಳಿನ ನೀರು ಕುಡಿಯುವುದರಿಂದ ಅಥವಾ ಸೋಂಪು ಕಾಳುಗಳನ್ನು ಸೇವಿಸುವುದರಿಂದ ಮುಖದಲ್ಲಿನ ಪಿಂಪಲ್ಸ್ ಅಥವಾ ಮೊಡವೆ ಕಡಿಮೆಯಾಗುತ್ತದೆ ಮತ್ತು ಮುಖದ ಹೊಳಪು ಹೆಚ್ಚಾಗುತ್ತದೆ. ಬಾಯಿಯ ದುರ್ವಾಸನೆಯಿಂದಲೂ ಮುಕ್ತಿ ದೊರೆಯುತ್ತದೆ.
* ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸೋಂಪು ಕಾಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಸೋಂಪು ಕಾಳಿನಲ್ಲಿರುವ ಎಲ್ಲಾ ಅಂಶಗಳು ನಿಮ್ಮ ಆರೋಗ್ಯಕ್ಕೆ ಅದ್ಭುತ ವರವನ್ನು ನೀಡುತ್ತದೆ.
ಇದನ್ನು ಓದಿ : ಈ ಊರಿನ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ; ಯಾಕೆ ಗೊತ್ತೇ.?
* ಸೋಂಪು ಕಾಳಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ & ಮ್ಯಾಂಗನೀಸ್ ಕಂಡುಬರುತ್ತದೆ. ಸೋಂಪು ಕಾಳು ನಿಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಲಪಡಿಸುತ್ತದೆ. ಹೆಚ್ಚುವರಿಯಾಗಿ ಸೋಂಪು ಕಾಳಿನಲ್ಲಿ ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.