ಜನಸ್ಪಂದನ ನ್ಯೂಸ್, ಡೆಸ್ಕ್ : ಎಲ್ಲಾ ಕಾಲದಲ್ಲೂ ದೊರೆಯುವ ಹಣ್ಣು ಎಂದರೆ ಬಾಳೆ ಹಣ್ಣು. ಕೈಗೆಟಕುವ ದರದಲ್ಲಿ ಸಿಗುವ ಬಾಳೆ ಹಣ್ಣು ಕಬ್ಬಿಣಂಶ, ಪ್ರೋಟೀನ್, ಪೊಟಾಷಿಯಮ್, ಲವಣ ಸೇರಿದಂತೆ ವಿವಿಧ ಬಗೆಯ ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತದೆ. ಒಂದು ಬಾಳೆಹಣ್ಣು ಸೇವಿಸುವುದರಿಂದ ತಾತ್ಕಾಲಿಕವಾಗಿ ಹಸಿವೆಯನ್ನು ತಡೆಯಬಹುದು.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಆರೈಕೆ ಮಾಡುವುದು. ಇದರಲ್ಲಿರುವ ಪೋಷಕಾಂಶ ಗುಣವು ಮಕ್ಕಳಿಂದ ಹಿಡಿದು ವೃದ್ಧರಿಗೂ ಸಹ ಅತ್ಯುತ್ತಮವಾದದ್ದು. ಆದರೆ ಬಾಳೆಹಣ್ಣು ಈಗ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ತರುವಂತಹ ಮಾರಕ ವಸ್ತುವಾಗಿ ಮಾರಾಟವಾಗುತ್ತಿದೆ.
ಕಾಯಿ ತಾನಾಗಿಯೇ ಹಣ್ಣಾಗಬೇಕು, ತಾನಾಗಿಯೇ ಮಾಗಬೇಕು. ಈಗ ಬಾಳೆಹಣ್ಣನ್ನು ಅದು ಹಣ್ಣಾಗುವ ಅವಧಿ ಪೂರ್ವ ರಾಸಾಯನಿಕ ಪದಾರ್ಥಗಳನ್ನು ಬಳಸಿ ಹಣ್ಣು ಮಾಡಲಾಗುತ್ತಿದೆ. ಕ್ಯಾಲ್ಸಿಯಂ ಕಾರ್ಬೈಡ್ ಕೆಮಿಕಲ್ ಮೂಲಕ ಬಾಳೆ ಕಾಯಿಗಳನ್ನು ಅವಧಿ ಪೂರ್ಣವೇ ಹಣ್ಣುಗಳನ್ನಾಗಿ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.
ಕ್ಯಾಲ್ಸಿಯಂ ಕಾರ್ಬೈಡ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಕೆಮಿಕಲ್ ಎಂದೇ ಗುರುತಿಸಲಾಗುತ್ತೆ.
ಇದು ದೇಹದೊಳಗೆ ಹೋಗುವುದರಿಂದ ಕ್ಯಾನ್ಸರ್ ಮತ್ತು ಹಲವು ಅಪಾಯಕಾರಿ ರೋಗಗಳಿಗೆ ತುತ್ತಾಗುವ ಸಂಭವವಿದೆ. ಆದರೆ ಕ್ಯಾಲ್ಸಿಯಂ ಕಾರ್ಬೈಡ್ ಕೆಮಿಕಲ್ ಮೂಲಕವೇ ಬಾಳೆ ಕಾಯಿಗಳು ಈಗ ಹಣ್ಣಾಗುವಂತೆ ಮಾಡುತ್ತಿದ್ದಾರೆ.
ಇದನ್ನು ಓದಿ : ಸಿನಿಮೀಯ ಶೈಲಿಯಲ್ಲಿ ಕಾರು ಸುತ್ತುವರೆದು 2.5 KG ತೂಕದ ಚಿನ್ನಾಭರಣ ದರೋಡೆ ; ವಿಡಿಯೋ Viral.!
ಚೋಟುದ್ದ ಇರುವ ಬಾಳೆಹಣ್ಣನ್ನು ಕೆಮಿಕಲ್ಗಳನ್ನು ಬಳಸಿ ಇಷ್ಟೂದ್ದದ ಹಣ್ಣಾಗಿ ಮಾಡಲಾಗುತ್ತದೆ. ಗ್ರಾಹಕರನ್ನು ಸೆಳೆಯಲು ಅಂತ ಬಾಳೆಹಣ್ಣಿನ ಗಾತ್ರವನ್ನು ದೊಡ್ಡದಾಗಿ ಮಾಡಿಟ್ಟು ಮಾಡಲಾಗುತ್ತಿದೆ.
ವ್ಯಾಪಾರಿಗಳು ಈ ಮೂಲಕ ಜನರಲ್ಲಿ ಒಂದು ಸ್ಲೋ ಪಾಯ್ಸನ್ನ್ನು ತಿನ್ನಿಸುತ್ತಿದ್ದಾರೆ.