Monday, October 7, 2024
spot_img
spot_img
spot_img
spot_img
spot_img
spot_img
spot_img

ಎಚ್ಚರಿಕೆ : ಗುಣಮಟ್ಟದ ಟೆಸ್ಟ್​ನಲ್ಲಿ Fail ಆದ ಜನಪ್ರಿಯ ಔಷಧಗಳಿವು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದ ಔಷಧ ನಿಯಂತ್ರಕ ಸಂಸ್ಥೆ ಇತ್ತೀಚೆಗೆ ನಡೆಸಿದ ಗುಣಮಟ್ಟ ಪರೀಕ್ಷೆಯಲ್ಲಿ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಹಲವಾರು ಪ್ರಮುಖ ಔಷಧಗಳು ವಿಫಲವಾಗಿವೆ.

ಟೆಲ್ಮಿಸಾರ್ಟನ್, ಕ್ಯಾಲ್ಸಿಯಂ ಸಪ್ಲಿಮೆಂಟ್ ಶೆಲ್ಕಾಲ್, ಆಂಟಾಸಿಡ್ ಪ್ಯಾನ್ ಡಿ, ಆಂಟಿ ಡಯಾಬಿಟಿಕ್ ಡ್ರಗ್ ಗ್ಲಿಮೆಪಿರೈಡ್ ಸೇರಿದಂತೆ ಹಲವು ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು ಇವುಗಳನ್ನು ಬಳಸುವುದು ಬಹಳ ಅಪಾಯಕಾರಿ ಎಂದು ತಿಳಿಸಿದೆ.

ಇದನ್ನು ಓದಿ : Job alert : ರೆವಿನ್ಯೂ ಇಲಾಖೆಯಲ್ಲಿ ಉದ್ಯೋಗಾವಕಾಶ; ಇಲ್ಲಿದೆ ಡೈರೆಕ್ಟ್ Link.!

ಪಟ್ಟಿಯಲ್ಲಿ, ಹಿಂದೂಸ್ತಾನ್ ಆಯಂಟಿಬಯೋಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್ ಮತ್ತು ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ ಹಲವಾರು ಉನ್ನತ ಫಾರ್ಮಾ ಸಂಸ್ಥೆಗಳು ತಯಾರಿಸಿದ ಔಷಧಗಳು ಸೇರಿವೆ.

ಹೊಟ್ಟೆಯ ಸೋಂಕಿನ ಚಿಕಿತ್ಸೆಗೆ ನೀಡುವ ಮೆಟ್ರೋನಿಡಜೋಲ್ ಅನ್ನು PSU ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ (HAL) ತಯಾರಿಸುತ್ತದೆ. ಇದು ವಿಫಲವಾಗಿದೆ.

ಟೊರೆಂಟ್ ಫಾರ್ಮಾಸ್ಯುಟಿಕಲ್ಸ್‌ನಿಂದ ಮಾರಾಟವಾದ ಉತ್ತರಾಖಂಡ ಮೂಲದ ಪ್ಯೂರ್ & ಕ್ಯೂರ್ ಹೆಲ್ತ್‌ಕೇರ್ ತಯಾರಿಸಿದ ಶೆಲ್ಕಾಲ್ ಕೂಡ ಪರೀಕ್ಷೆಯಲ್ಲಿ ವಿಫಲವಾಗಿದೆ. ಇನ್ನೂ ಅಧಿಕ ರಕ್ತದೊತ್ತಡಕ್ಕೆ ಬಳಸುವ ಟೆಲ್ಮಿಸಾರ್ಟನ್‌ನ ಔಷಧಗಳನ್ನು ಹರಿದ್ವಾರ ಮೂಲದ ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರೀಸ್​ನಲ್ಲಿ ತಯಾರಿಸಲಾಗುತ್ತದೆ. ಇದು ಕೂಡ ವಿಫಲವಾಗಿದೆ.

ಗಂಟಲು, ಶ್ವಾಸಕೋಶ, ಮೂತ್ರನಾಳ ಅಥವಾ ಬ್ಯಾಕ್ಟೀರಿಯಾ ಸೋಂಕಿಗಾಗಿ ಮಕ್ಕಳಿಗೆ ನೀಡುವ ಔಷಧವಾದ, ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರಾಸಿಟಮಾಲ್ ಮಾತ್ರೆಗಳು, ಫಾರ್ಮಾ ಸಂಸ್ಥೆ ಅಲ್ಕೆಮ್ ಹೆಲ್ತ್ ಸೈನ್ಸ್‌ನ ಆಯಂಟಿಬಯೋಟಿಕ್ ಡ್ರಗ್ Clavam 625 ಮತ್ತು Pan D ಕೋಲ್ಕತಾದ ಡ್ರಗ್-ಟೆಸ್ಟಿಂಗ್ ಪ್ರಯೋಗಾಲಯದಲ್ಲಿ ನಕಲಿ ಎಂದು ಕಂಡುಬಂದಿದೆ.

ಇದನ್ನು ಓದಿ : ಕುಳಿತುಕೊಳ್ಳಲು ಸೀಟ್ ಇಲ್ಲದೇ ಬಸ್‌ನಿಂದ ಕೆಳಗೆ ಇಳಿದ ಡ್ರೈವರ್.? Video ನೋಡಿ.

Pan D : ಜಠರಗರುಳಿನ ಸಮಸ್ಯೆಗಳಿಗೆ ಬಳಸುವ ಆಂಟಾಸಿಡ್, Shelcal : ಕ್ಯಾಲ್ಸಿಯಂಗಾಗಿ ಬಳಸುವ ಔಷಧ, Glimepiride : ಮಧುಮೇಹ ವಿರೋಧಿ ಔಷಧ.
Telmisartan : ಅಧಿಕ ರಕ್ತದೊತ್ತಡಕ್ಕೆ ಬಳಸುವ ಔಷಧ. ಇವು ಸಹ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img