ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯಕೀಯ ತಜ್ಞರು, ಅಧಿಕ ಕೊಲೆಸ್ಟ್ರಾಲ್ ಮಾರಣಾಂತಿಕ ಹೃದಯ ಕಾಯಿಲೆಗಳು, ಪಾರ್ಶ್ವವಾಯು ಅಪಾಯಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೊಲೆಸ್ಟ್ರಾಲ್ ಜೀವಕೋಶ ಪೊರೆಗಳಲ್ಲಿ ಕಂಡುಬರುವ ಕೊಬ್ಬಿನ, ಎಣ್ಣೆಯುಕ್ತ ಸ್ಟೀರಾಯ್ಡ್ ಆಗಿದೆ. ಇದು ರಕ್ತನಾಳಗಳಲ್ಲಿ ಪ್ಲೇಕ್ ಅನ್ನು ನಿರ್ಮಿಸಲು ಕಾರಣವಾಗಬಹುದು.
ಇದನ್ನು ಓದಿ : ಈ ಊರಿನ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ; ಯಾಕೆ ಗೊತ್ತೇ.?
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ರಕ್ತದೊತ್ತಡ, ಹೃದಯಾಘಾತ ಹಾಗೂ ಮೆದುಳಿನ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇನ್ನೂ ದೇಹದಲ್ಲಿ ಕೆಟ್ಟ LDL ಕೊಲೆಸ್ಟ್ರಾಲ್ ಹೆಚ್ಚಾದರೆ ರಾತ್ರಿ ವೇಳೆ ಕೆಲವು ಲಕ್ಷಣಗಳು ಕಂಡು ಬರುತ್ತವೆ. ಹಾಗಾದರೆ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ? ಅಂತ ತಿಳಿಯೋಣ.
ಇದನ್ನು ಓದಿ : Health : ಹೃದಯಾಘಾತ ನಿಮ್ಮ ಬಳಿ ಸುಳಿಯಬಾರದೆಂದರೆ ತಪ್ಪದೇ ಈ 5 ಕೆಲಸಗಳನ್ನು ಮಾಡಿ.
* ರಾತ್ರಿ ಮಲಗುವಾಗ ಉಸಿರಾಟದ ತೊಂದರೆ ಅಥವಾ ದಿನದಲ್ಲಿ ಯಾವಾಗಲಾದರು ಉಸಿರಾಟದ ತೊಂದರೆ ಉಂಟಾದರೆ ಖಂಡಿತವಾಗಿಯೂ ನಿಮ್ಮ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಿಕೊಳ್ಳಿ. ಅಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
* ರಾತ್ರಿಯಲ್ಲಿ ನಿಮ್ಮ ಪಾದಗಳಲ್ಲಿ ಉರಿಯುತ್ತಿರುವ ಅನುಭವವಾದರೆ ಅದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರ ಸಂಕೇತವಾಗಿರಬಹುದು. ರಾತ್ರಿಯಲ್ಲಿ ಪಾದಗಳು ತಣ್ಣಗಾಗುವುದು ಕೂಡ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ.
ಇದನ್ನು ಓದಿ : Video : ಬೃಹದಾಕಾರದ ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡೆಯಾಟ ಆಡಿದ ಪುಟ್ಟ ಮಕ್ಕಳು.!
* ನೀವು ದೀರ್ಘಕಾಲ ಮಲಗಿರುವಾಗ ಎದೆಯಲ್ಲಿ ನೋವು ಅನುಭವಿಸಿದರೆ ಅದನ್ನು ನಿರ್ಲಕ್ಷಿಸಬೇಡಿ ಅದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣವಾಗಿರಬಹುದು. ಅಲ್ಲದೆ, ಕೈಕಾಲುಗಳು ಜುಮ್ಮೆನ್ನುವುದು ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಲ್ಲಿ ಒಂದಾಗಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.