Monday, October 7, 2024
spot_img
spot_img
spot_img
spot_img
spot_img
spot_img
spot_img

ನಿಧಾನವಾಗಿ ಕಾರು ಚಲಾಯಿಸಿ ಎಂದ‌ Police; ಮುಂದಾಗಿದ್ದೇನು.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್​ ಸಿಬ್ಬಂದಿಯೊಬ್ಬರು‌, ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ನಿಧಾನಕ್ಕೆ ಹೋಗಿ ಎಂದು ಹೇಳಿದ‌ ಪರಿಣಾಮ ಪೊಲೀಸ್ ಸಿಬ್ಬಂದಿಯನ್ನು ಕೊಲೆಗೈದ ಘಟನೆ ನಡೆದಿದೆ.

ತಡರಾತ್ರಿ ನಂಗ್ಲೋಯ್ ಪ್ರದೇಶದಲ್ಲಿ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದು, ಬಳಿಕ ಬೈಕ್ ಸಮೇತ ಎಳೆದೊಯ್ದ ಪರಿಣಾಮ 30 ವರ್ಷದ ಪೊಲೀಸ್ ಪೇದೆಯೊಬ್ಬರು ತಲೆಗೆ ಗಾಯಗೊಂಡು ಮೃತಪಟ್ಟಿದ್ದಾರೆ.

ಇದನ್ನು ಓದಿ : ರಾತ್ರಿ ವೇಳೆ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಅಪಾಯದ ಗಂಟೆ ಬಾರಿಸಿದಂತೆ.!

ಪೊಲೀಸ್ ಸಿಬ್ಬಂದಿ ಸಂದೀಪ್ ಅವರು ಸಿವಿಲ್ ಬಟ್ಟೆಯಲ್ಲಿ ಗಸ್ತು ಕರ್ತವ್ಯಕ್ಕೆ ತೆರಳಿದ್ದರು. ಅವರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ವ್ಯಾಗನಾರ್ ಕಾರು ಅವರನ್ನು ಹಿಂದಿಕ್ಕಲು ಪ್ರಯತ್ನಿಸಿತು. ಈ ವೇಳೆ ಸಂದೀಪ್ ಅವರು ಕಾರು ಚಾಲಕನಿಗೆ ನಿಧಾನವಾಗಿ ಕಾರು ಚಲಾಯಿಸಿ ಎಂದಿದ್ದಾರೆ.

ಈ ಮಾತಿಗೆ ಕಾರು ಚಾಲಕ ಆಕ್ರೋಶಗೊಂಡಿದ್ದಾನೆ. ಏಕಾಏಕಿ ಕಾರಿನ ವೇಗ ಹೆಚ್ಚಿಸಿ ಹಿಂದಿನಿಂದ ಸಂದೀಪ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪೇದೆ ಚಲಾಯಿಸುತ್ತಿದ್ದ ಬೈಕ್ ಸಮೇತ ಅವರನ್ನು ಸುಮಾರು 10 ಮೀಟರ್ ಎಳೆದುಕೊಂಡು ಹೋಗಿದ್ದಾನೆ.

ತೀವ್ರವಾಗಿ ಗಾಯಗೊಂಡ ಪೇದೆ ಸಂದೀಪ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಮತ್ತೊಂದು ಆಸ್ಪತ್ರೆಗೆ ಶಿಫ್ಟ್​​ ಮಾಡಲಾಯಿತು. ಆದರೆ ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಘೋಷಿಸಿದರು‌.

ಇದನ್ನು ಓದಿ : Special news : ರಾತ್ರಿ ಮೊಸರಿಗೆ ಈರುಳ್ಳಿ ಸೇರಿಸಿ ತಿನ್ನಬಹುದೇ.? ತಿಂದರೆ ಏನಾಗಬಹುದು.!

ಪೊಲೀಸರ ಪ್ರಕಾರ, ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಘಟನೆ ಬಳಿಕ ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರೊಬ್ಬರು ಅಕ್ರಮ ಮದ್ಯದ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ, ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img