Tuesday, October 14, 2025

Janaspandhan News

HomeGeneral NewsStudent : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!
spot_img
spot_img
spot_img

Student : ರಸ್ತೆ ಮಧ್ಯೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ದುಷ್ಕರ್ಮಿ ; ಸಿಸಿಟಿವಿ ದೃಶ್ಯ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಂಥಾಲಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿ (Student) ಯೊಬ್ಬಳಿಗೆ ರಸ್ತೆ ಮಧ್ಯೆ ಕಿರುಕುಳ ನೀಡಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ವಿದ್ಯಾರ್ಥಿನಿ (Student) ಗೆ ರಸ್ತೆ ಮಧ್ಯೆ ಕಿರುಕುಳ ನೀಡಿದ ಘಟನೆ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

15 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ : Swamiji ವಿರುದ್ಧ FIR ದಾಖಲು.!

ಮಾಹಿತಿಯ ಪ್ರಕಾರ, ಅಮನ್ ಅಲಿಯಾಸ್ ಶಹಬಾಜ್ ಎನ್ನುವ ದುಷ್ಕರ್ಮಿ ಯುವಕ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ ಆಕೆಯನ್ನು ತಬ್ಬಿಕೊಂಡಿದ್ದರಿಂದ ಹೆದರಿ ವಿದ್ಯಾರ್ಥಿನಿ (Student) ತಕ್ಷಣ ಗ್ರಂಥಾಲಯದ ಒಳಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ.

ಘಟನೆಯ ಸಂಪೂರ್ಣ ಘಟನೆ ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈ ವೈರಲ್ ದೃಶ್ಯಗಳನ್ನು ಆಧರಿಸಿ ವಿದ್ಯಾರ್ಥಿನಿ (Student) ಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!

ಲಖಿಂಪುರ ನಗರದ ಸಿಒ ವಿವೇಕ್ ತಿವಾರಿ ಅವರು ಈ ಪ್ರಕರಣವನ್ನು ದೃಢಪಡಿಸಿದ್ದು, ಸದರ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಕುಟುಂಬದಿಂದ ಬಂದ ದೂರು ಆಧರಿಸಿ ಆರೋಪಿಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಶಹಬಾಜ್‌ನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ಪ್ರಾರಂಭವಾಗಿದೆ.

ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!

ಈ ಘಟನೆ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿ (Student) ಯರ ಮತ್ತು ಮಹಿಳೆಯರ ಸುರಕ್ಷತೆಯ ಕ್ರಮಗಳನ್ನು ಅಳವಡಿಸುವಂತೆ ಹಾಗೂ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ವಿಡಿಯೋ :

 

View this post on Instagram

 

A post shared by BIO Saga (@biosaga.in)


ಟೀಚರ್ ಫೋನ್‌ನಲ್ಲಿ 2500ಕ್ಕೂ ಅಧಿಕ Private moments ವಿಡಿಯೋ ; ಮಹಿಳೆಯ ಗಂಭೀರ ಆರೋಪ.!

Private moments

ಜನಸ್ಪಂದನ ನ್ಯೂಸ್‌, ಬೆಂಗಳೂರು : ನಗರದಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ (Private moments) ಪ್ರಕರಣ ಹೊರಬಿದ್ದಿದೆ. ಖಾಸಗಿ ಶಾಲೆಯೊಂದರ ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ಆತ ತನ್ನ ಬಳಿ ಅನೇಕ ಅಶ್ಲೀಲ ವಿಡಿಯೋ (Video) ಗಳನ್ನು ಸಂಗ್ರಹಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಮಹಿಳೆಯ ಆಕ್ಷೇಪಣೆ :

ದೂರು ನೀಡಿದ ಮಹಿಳೆಯ ಪ್ರಕಾರ, ಮ್ಯಾಥ್ಯೂ ಎಂಬ ಶಿಕ್ಷಕ ತನ್ನೊಂದಿಗೆ ವೈಯಕ್ತಿಕವಾಗಿ ವಾಸಿಸುತ್ತಿದ್ದ ವೇಳೆ ಹಲವಾರು ಖಾಸಗಿ ಕ್ಷಣಗಳನ್ನು (Private moments) ರಹಸ್ಯವಾಗಿ ವಿಡಿಯೋ ಮಾಡಿ ಸಂಗ್ರಹಿಸಿದ್ದಾನೆ.

ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!

ಸಂತ್ರಸ್ತೆಯ ಪ್ರಕಾರ, ಮ್ಯಾಥ್ಯೂ ಕೇವಲ ತನ್ನದ್ದೇ ಅಲ್ಲ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನೂ (Private moments) ದಾಖಲು ಮಾಡಿಕೊಂಡಿದ್ದು, ಸುಮಾರು 25 ಸಾವಿರಾರು ವಿಡಿಯೋಗಳು ಆತನ ಬಳಿ ಇವೆ ಎಂಬುದು ಮಹಿಳೆಯ ಆರೋಪ.

ಹೇಗೆ ಪರಿಚಯ ಬೆಳೆದಿತು?

ಮಹಿಳೆ ತನ್ನ ಮಗಳನ್ನು ಓದುವ ಖಾಸಗಿ ಶಾಲೆಯ ಮೂಲಕ ಮ್ಯಾಥ್ಯೂ ಅವರನ್ನು ಪರಿಚಯಿಸಿಕೊಂಡಿದ್ದರು. ಅಲ್ಲಿ ಆತ ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹೀಗೆ ಪರಿಚಯ ಬೆಳೆದು, ಇಬ್ಬರು ಬಳಿಕ ಒಟ್ಟಿಗೆ ವಾಸಿಸಲು ಶುರುಮಾಡಿದರು.

Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

ಸಂತ್ರಸ್ತೆಯ ಪ್ರಕಾರ, ಇಬ್ಬರು ಚರ್ಚ್‌ನಲ್ಲಿ ಮದುವೆಯಾದ ನಂತರ, ಮ್ಯಾಥ್ಯೂ ತನ್ನ ನಿಜಸ್ವರೂಪ ತೋರಿಕೊಂಡನು. ಆ ಸಮಯದಲ್ಲಿ ಖಾಸಗಿ ಕ್ಷಣಗಳನ್ನು (Private moments) ಆತ ವಿಡಿಯೋ ಮಾಡಿ ಸಂಗ್ರಹಿಸುತ್ತಿದ್ದಾನೆ ಎಂಬುದರ ಅರಿವು ಆಕೆಗೆ ಬಂದಿತು ಎಂದು ಆಕೆ ಹೇಳಿಕೊಂಡಿದ್ದಾಳೆ.

ಸಂತ್ರಸ್ತೆಯ ಸಾಕ್ಷ್ಯ ಮತ್ತು ಎಫ್‌ಐಆರ್ :

ಮಹಿಳೆಯ ಪ್ರಕಾರ, ಮ್ಯಾಥ್ಯೂ ತನ್ನ ಖಾಸಗಿ ವಿಡಿಯೋಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಸಂಗ್ರಹಿಸಿದ್ದನು. ಇದರಲ್ಲಿ ಕೆಲವು ಭಾಗಗಳನ್ನು ಸಂತ್ರಸ್ತೆ ಆತನ ಬಾರದಂತೆ ತನ್ನ ಮೊಬೈಲ್‌ಗೆ ಕಾಪಿ ಮಾಡಿಕೊಂಡಿದ್ದರು. ಇವುಗಳನ್ನು ಆತ ಮಾಡಿದ ಕೃತ್ಯಗಳಿಗೆ ಸಾಕ್ಷ್ಯವಾಗಿ ಉಳಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಆದರೆ ಸಂತ್ರಸ್ತೆಯ ಮೊಬೈಲ್‌ನಲ್ಲಿ ಆ ವಿಡಿಯೋಗಳ ‘ನಗ್ನ ರಹಸ್ಯ’ ಮ್ಯಾಥ್ಯೂ ಗಮನಕ್ಕೆ ಬಂದ ನಂತರ, ಆತ ತಕ್ಷಣ ಆಕೆಯ ಮೊಬೈಲ್‌ ಸಹಿತ ಪರಾರಿಯಾದನು. ಈ ವಿಷಯದ ಆಧಾರದ ಮೇಲೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

ಸಂತ್ರಸ್ತೆಯ ಪ್ರಕಾರ, ಆ ಮೊಬೈಲ್‌ನಲ್ಲಿ ಸಾಕಷ್ಟು ಪ್ರಮುಖ ಸಾಕ್ಷ್ಯಗಳಿದ್ದು, ತನಿಖೆ ವೇಳೆ ಅವುಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ. ಪ್ರಸ್ತುತ ಪ್ರಕರಣದ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!

👉 ಮುಖ್ಯ ಸೂಚನೆ (Disclaimer):
ಈ ಲೇಖನದಲ್ಲಿ ಉಲ್ಲೇಖಿಸಿರುವ ಆರೋಪಗಳು (Private moments) ದೂರುದಾರೆಯ ಹೇಳಿಕೆ ಆಧಾರಿತವಾಗಿದ್ದು, ಅಧಿಕೃತ ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ. ಈ ವರದಿ ಮಾಹಿತಿ ಹಂಚುವ ಉದ್ದೇಶಕ್ಕಾಗಿ ಮಾತ್ರ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments