Saturday, July 12, 2025

Janaspandhan News

HomeBelagavi NewsKSRTC ಬಸ್-Car ಅಪಘಾತ : 3 ಜನ ಸ್ಥಳದಲ್ಲೇ ಸಾವು.!
spot_img
spot_img

KSRTC ಬಸ್-Car ಅಪಘಾತ : 3 ಜನ ಸ್ಥಳದಲ್ಲೇ ಸಾವು.!

- Advertisement -

ಜನಸ್ಪಂದನ ನ್ಯೂಸ್‌, ಅಥಣಿ (ಬೆಳಗಾವಿ) : ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು ವಾಪಸ್ ಹೊರಟಾಗ ಕಾರಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮುರಗುಂಡಿ ಗ್ರಾಮದ ಬಳಿ ರವಿವಾರ ದಿನವಾದ ಜುಲೈ 6 ರಂದು ಕಾರಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ನಿವಾಸಿಗಳಾದ ಗಿರೀಶ್ ಬಳ್ಳೂರ್ಗಿ, ರಾಹುಲ್ ಮತ್ತು ಸಂಗು ಅಮರಗೊಂಡ ಎಂದು ಗುರುತಿಸಲಾಗಿದೆ.

ಇದನ್ನು ಓದಿ : Petrol worth Rs.120 : ಕೈ ಮಾಡಿದ ಪಿಎಸ್‌ಐ : ಮರಳಿ ಕೊಟ್ಟ ಸಿಬ್ಬಂದಿ.!

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಮಹಿಳೆ, ರಾಧಿಕಾ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ರಸ್ತೆ ಸಾರಿಗೆ ನಿಗಮ (KSRTC) ಗೆ ಸೇರಿದ ಬಸ್ ಹಾಗೂ ಖಾಸಗಿ ಕಾರು ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಕಾರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವ್ಯಕ್ತಿಗಳ ಪೈಕಿ ಮೂವರು ಸ್ಥಳದಲ್ಲೇ ಪ್ರಾಣಕಳೆದುಕೊಂಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 06 ರ ದ್ವಾದಶ ರಾಶಿಗಳ ಫಲಾಫಲ.!

ಈ ದುರ್ಘಟನೆ ವಿಜಯಪುರ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಥಣಿ ಮತ್ತು ಕಾಗವಾಡ ನಡುವಿನ ರಸ್ತೆಯಲ್ಲಿ ನಡೆದಿದೆ. ಇತ್ತೀಚೆಗಿನ ದಿನಗಳಲ್ಲಿ ಈ ಭಾಗದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿರುವ ವಿಷಯ ಗಂಭೀರವಾಗಿವೇ.

ಘಟನೆ ತಿಳಿಯುತ್ತಿದಂತೆಯೇ ಸ್ಥಳಕ್ಕೆ ಅಥಣಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಕಾರಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಿಂದ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

Liver : ಈ ತರಕಾರಿಗಳನ್ನು 3 ತಿಂಗಳು ತಿನ್ನಿರಿ ; ಡ್ಯಾಮೇಜ್ ಆಗಿರುವ ಲಿವರ್‌ನಿಂದ ಮುಕ್ತಿ ಪಡೆಯಿರಿ.!

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮ್ಮ ಲಿವರ್‌ ಡ್ಯಾಮೇಜ್‌ (Liver damage) ಆಗಿದೇಯೇ.? ಹಾಗಾದ್ರೆ ಈ ತರಕಾರಿ 3 ತಿಂಗಳು ತಿನ್ನಿರಿ, ಡ್ಯಾಮೇಜ್ ಆಗಿರುವ ಲಿವರ್‌ (Liver) ಸರಿಯಾಗುತ್ತೇ.!

Liver

ಕೊಬ್ಬಿನ ಪಿತ್ತಜನಕಾಂಗ ಎಂದರೆ ಯಕೃತ್ತಿ (Liver) ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಮಧುಮೇಹ ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗವು ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಫ್ಯಾಟಿ ಲಿವರ್ (Liver) ರೋಗವು ಎರಡು ರೀತಿಯಲ್ಲಿ ಸಂಭವಿಸುತ್ತದೆ. ಮೊದಲನೆಯದಾಗಿ, ಅತಿಯಾದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಇದನ್ನು ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ. ಎರಡನೆಯದಾಗಿ, ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುವ ಫ್ಯಾಟಿ ಲಿವರ್. ಇದನ್ನು ನಾನ್-ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!

ಫ್ಯಾಟಿ ಲಿವರ್ (Fatty liver) ರೋಗವನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಲಿವರ್ ಸಿರೋಸಿಸ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ಆರಂಭಿಕ ಹಂತದಲ್ಲಿದ್ದ ಫ್ಯಾಟಿ ಲಿವರ್ (Fatty liver)ಕಾಯಿಲೆಯನ್ನು ಯಾವುದೇ ಔಷಧಿಗಳಿಲ್ಲದೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಈ ಬಗ್ಗೆ ಇತ್ತೀಚೆಗೆ, ಪ್ರಸಿದ್ಧ ಆಯುರ್ವೇದ ವೈದ್ಯ ಸಲೀಂ ಜೈದಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪುಟದ ವಿಡಿಯೋದಲ್ಲಿ ಅವರು 3 ಜೀವನಶೈಲಿಯ ಬದಲಾವಣೆಗಳನ್ನು ಆಯುರ್ವೇದ ವೈದ್ಯ ಸಲೀಂ ಜೈದಿ ಉಲ್ಲೇಖಿಸಿದ್ದಾರೆ. ಇದನ್ನು ನಿರಂತರವಾಗಿ ಅನುಸರಿಸಿದರೆ ಫ್ಯಾಟಿ ಲಿವರ್ ಸಮಸ್ಯೆ ಕೇವಲ 3 ತಿಂಗಳಲ್ಲಿ ಗುಣವಾಗುತ್ತದೆ ಎಂದು ಹೇಳಲಾಗಿದೆ.

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಫ್ಯಾಟಿ ಲಿವರ್ ಗುಣಪಡಿಸಲು ಅನುಸರಿಸಬೇಕಾದ ಅಂಶ :

ಸಂಸ್ಕರಿಸಿದ ಆಹಾರ, ಸಕ್ಕರೆ, ಪಿಷ್ಟಯುಕ್ತ ಆಹಾರಗಳು, ಹುರಿದ ಆಹಾರಗಳಿಂದ ಸಂಪೂರ್ಣವಾಗಿ ದೂರವಿದ್ದರೆ, ನಮ್ಮ ಕೆಟ್ಟು ಹೋದ ಯಕೃತ್ತು (liver) ಮತ್ತೆ ತನ್ನ ಮೊದಲಿನ ಸ್ಥಿತಿಗೆ ಮರಳುತ್ತದೆ.

ಆಹಾರದಲ್ಲಿ ಇರಲೇಬೇಕಾದ ವಸ್ತುಗಳು :

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ಕುಂಬಳಕಾಯಿ ಅಥವಾ ಬೀಟ್‌ರೂಟ್ ರಸವನ್ನು ಕುಡಿದರೆ, ನಿಮಗೆ ಕೊಬ್ಬಿನ ಯಕೃತ್ತು (liver) ಕಡಿಮೆಯಾಗುತ್ತದೆ.

ಹಾಗೇಯೇ ಮಧ್ಯಾಹ್ನ ಊಟಕ್ಕೆ ಬೇಳೆ, ಗಂಜಿ ಮತ್ತು ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಬೇಕು. ಇದೆಲ್ಲದರ ಜೊತೆಗೆ, ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಅಂದರೆ ಯಕೃತ್ತಿನ ಮೇಲೆ ಹೊರೆಯಾಗದಂತೆ ಹಗುರವಾದ ಆಹಾರವನ್ನೇ ಸೇವಿಸಬೇಕು.

ದೈಹಿಕ ಚಟುವಟಿಕೆ :

ದೇಹದಿಂದ ವಿಷವನ್ನು ತೆಗೆದುಹಾಕುವ ಅಂಗವಾಗಿ ಈ ಯಕೃತ್ತು (liver) ಕೆಲಸ ಮಾಡುತ್ತದೆ. ಒಂದು ವೇಳೆ ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಿಂದ ವಿಷವನ್ನು ತೆಗೆದುಹಾಕುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಆದ್ದರಿಂದ, ದಿನಕ್ಕೆ ಕನಿಷ್ಠ 30 – 45 ನಿಮಿಷಗಳ ಕಾಲ ವಾಕ್ ಮಾಡಬೇಕು. ಯೋಗವನ್ನು ಕೂಡಾ ಮರೆಯದೇ ಮಾಡಬೇಕು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!

ಯಕೃತ್ತ (liver) ನ್ನು ಸಕ್ರಿಯವಾಗಿಡಲು ಹೊಟ್ಟೆಯ ಮೇಲೆ ಲಘು ಮಸಾಜ್ ಮಾಡಿ, ಇದೆಲ್ಲವೂ ತುಂಬಾ ಸಹಾಯಕವಾಗಿದೆ.

ನೈಸರ್ಗಿಕ ಗಿಡಮೂಲಿಕೆ :

ಯಕೃತ್ತಿನ ಕೊಬ್ಬನ್ನು ಕರಗಿಸುವಲ್ಲಿ ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳ ಔಷಧಿಗಳು ಪರಿಣಾಮಕಾರಿ ಎಂದು  (ಪ್ರಯೋಜನಕಾರಿ) ಪರಿಗಣಿಸಲಾಗಿದೆ. ರಾತ್ರಿ ಮಲಗುವ ಮುನ್ನ ತ್ರಿಫಲ ಪುಡಿಯನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ, ನೆಲ್ಲಿಕಾಯಿ ಚಹಾ ಕುಡಿಯಿರಿ. ತ್ರಿಫಲ ಪುಡಿ ಮತ್ತು ನೆಲ್ಲಿಕಾಯಿ ಗಿಡಮೂಲಿಕೆಗಳು ಯಕೃತ್ತಿ (liver) ನ ಉರಿಯೂತ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತವೆ.

ಒಟ್ಟಿನಲ್ಲಿ ಹೇಳುವುದೇನೆಂದರೇ, ಈ ಫ್ಯಾಟಿ ಲಿವರ್ ಗುಣಪಡಿಸಲಾಗದ ಕಾಯಿಲೆಯಲ್ಲ. ಸರಿಯಾದ ಸಮಯದಲ್ಲಿ ಗಮನಹರಿಸಿ ಔಷಧಿಗಳ ಬದಲಿಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿದರೆ ಕಂಡಿತ ಈ ರೋಗದಿಂದ ಮುಕ್ತಿ ಪಡೆಯಬಹುದು.

ಈ ಮೇಲೆ ನೀಡಲಾದ ಜೀವನಶೈಲಿಯನ್ನು ವರ್ಷಾನುಗಟ್ಟಲೇ ಮಾಡಬೇಕೆಂದಿಲ್ಲ, ಕೇವಲ 3 ತಿಂಗಳ ಕಾಲ ಮಾಡಿದರೆ ಸಾಕು ಈ ಸಮಸ್ಯೆಯನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು.

Disclaimer : This article is based on reports and information available on the internet. Janaspandhan News is not affiliated with it and is not responsible for it.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments