Tuesday, October 14, 2025

Janaspandhan News

HomeInternational NewsKing :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಆಫ್ರಿಕನ್...
spot_img
spot_img
spot_img

King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!

- Advertisement -

ಜನಸ್ಪಂದನ ನ್ಯೂಸ್‌, ಅಬುಧಾಬಿ : ಯಾವುದೇ ರಾಷ್ಟ್ರದ ಮುಖ್ಯಸ್ಥರು ತಮ್ಮ ನೆರೆಯ ದೇಶಕ್ಕೆ ಭೇಟಿ ನೀಡಿದಾಗ ಅದು ಸಾಮಾನ್ಯವಾಗಿ ಅದ್ದೂರಿಯೇ ಆಗಿರುತ್ತದೆ. ಆದರೆ ಈ ಬಾರಿ ಆಫ್ರಿಕಾದ ರಾಜ (KIng) ಮ್ಸ್ವಾಟಿ III ಅವರ ಆಗಮನವೇ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಏಕೆಂದರೆ ಈ King ಖಾಸಗಿ ಜೆಟ್‌ನಲ್ಲಿ ತನ್ನ 15 ಪತ್ನಿಯರು, 30 ಮಕ್ಕಳು ಮತ್ತು 100ಕ್ಕೂ ಹೆಚ್ಚು ಸೇವಕರೊಂದಿಗೆ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ದೃಶ್ಯ ಇದೀಗ ವೈರಲ್ ಆಗಿದೆ.

River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

ಇನ್‌ಸ್ಟಾಗ್ರಾಂನಲ್ಲಿ Fun Factorss ಎಂಬ ಖಾತೆಯಲ್ಲಿ ಹಂಚಲಾದ ವಿಡಿಯೋದಲ್ಲಿ, ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ನಿಂದ King ಮ್ಸ್ವಾಟಿ III ಇಳಿಯುತ್ತಿರುವ ದೃಶ್ಯ ಸ್ಪಷ್ಟವಾಗಿ ಕಾಣಬಹುದು.

ಸಾಂಪ್ರದಾಯಿಕ ಚಿರತೆ ಚರ್ಮದ ವಿನ್ಯಾಸದ ಉಡುಗೆಯನ್ನು ತೊಟ್ಟಿದ್ದ ಈ ಆಫ್ರಿಕನ್ ರಾಜ (King) ನಿಗೆ ಸ್ಥಳೀಯ ಅಧಿಕಾರಿಗಳು ಗೌರವಪೂರ್ವಕವಾಗಿ ಸ್ವಾಗತ ಕೋರುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅವರ ಪತ್ನಿಯರು ಸಹ ಆಕರ್ಷಕವಾದ ಆಫ್ರಿಕನ್ ಉಡುಪುಗಳನ್ನು ಧರಿಸಿ ಆಗಮಿಸಿದ್ದರಿಂದ ದೃಶ್ಯ ಇನ್ನಷ್ಟು ಗಮನ ಸೆಳೆದಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಾಟಕೀಯ ಘಟನೆ ; CJI ಮೇಲೆ ಶೂ ತೂರಲು ಯತ್ನಿಸಿದ ವಕೀಲ.!
ಭದ್ರತಾ ಸಿಬ್ಬಂದಿಗೆ ಸವಾಲಾದ ಆಗಮನ :

ಮ್ಸ್ವಾಟಿ III ಅವರ ಈ ಭೇಟಿಯ ಪ್ರಮುಖ ಉದ್ದೇಶ ಯುಎಇ ದೇಶದೊಂದಿಗೆ ಆರ್ಥಿಕ ಒಪ್ಪಂದಗಳ ಕುರಿತು ಮಾತುಕತೆ ನಡೆಸುವುದಾಗಿತ್ತು. ಆದರೆ ರಾಜ (King) ನೊಂದಿಗೆ ಬಂದಿದ್ದ ಪತ್ನಿಯರು, ಮಕ್ಕಳು ಹಾಗೂ ಸೇವಕರ ಸಂಖ್ಯೆಯು ಅತಿಯಾಗಿ ಹೆಚ್ಚಿರುವುದರಿಂದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮೂರು ಟರ್ಮಿನಲ್‌ಗಳನ್ನು ಮುಚ್ಚಿ ತಾತ್ಕಾಲಿಕ ಲಾಕ್‌ಡೌನ್ ಜಾರಿಗೊಳಿಸುವಂತಾಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

“KEA – 2025 ಅಧಿಸೂಚನೆ ಪ್ರಕಟ ; ಯಾವೆಲ್ಲಾ ಇಲಾಖೆ? ಎಷ್ಟೇಷ್ಟು ಹುದ್ದೆ?”
ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ ವಿಡಿಯೋ :

ಈ ವಿಡಿಯೋ ಇದೀಗ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

  • “ರಾಜನ ಸರಳತೆ ಮನಸೆಳೆಯುತ್ತದೆ, ಅವರ ಸಾಂಪ್ರದಾಯಿಕ ಉಡುಗೆಯು ವಿಶಿಷ್ಟವಾಗಿದೆ” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು,
  • “15 ಪತ್ನಿಯರನ್ನು ಹೇಗೆ ಸಂಭಾಳಿಸುತ್ತಾರೆ?” ಎಂದು ಕೆಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.
  • ಮತ್ತೊಬ್ಬರು “ಈ ವ್ಯಕ್ತಿ ಇಡೀ ಪುರುಷರಿಗೆ ಮಾದರಿ” ಎಂದು ಹಾಸ್ಯಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.
ರಾಜ (KIng) ಮ್ಸ್ವಾಟಿ III ಆಗಮನದ ವಿಡಿಯೋ :

 

View this post on Instagram

 

A post shared by FUN FACTORSS 1M™ (@fun_factorss)

ವೈದ್ಯಕೀಯ Student ಮೇಲೆ ದೌರ್ಜನ್ಯ ; ವಿಡಿಯೋ ರೆಕಾರ್ಡ್ ಆರೋಪ.!
ಹಿನ್ನೆಲೆ :

King ಮ್ಸ್ವಾಟಿ III ಅವರು ಆಫ್ರಿಕಾ ಖಂಡದ ಇಸ್ವಾತಿನಿ (Eswatini) ದೇಶದ ಪ್ರಸ್ತುತ ರಾಜರಾಗಿದ್ದು, ತಮ್ಮ ವಿಶಿಷ್ಟ ಜೀವನ ಶೈಲಿಯಿಂದ ವಿಶ್ವದಾದ್ಯಂತ ಸುದ್ದಿಯಾಗುತ್ತಿರುತ್ತಾರೆ. ಅವರು ತಮ್ಮ ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸಕ್ರಿಯ ಪಾತ್ರವಹಿಸುತ್ತಿದ್ದಾರೆ.

Mswati III (born Makhosetive Dlamini; 19 April 1968) is the Ngwenyama (King) of Eswatini and head of the Swazi royal family. He heads an absolute monarchy, as he has veto power over all branches of government and is constitutionally immune from prosecution.

Mswati was born in Manzini in the Protectorate of Swaziland to King Sobhuza II and one of his younger wives


River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

River

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬ ಕಲಹದಿಂದ ಮಾನಸಿಕ ಒತ್ತಡಕ್ಕೊಳಗಾದ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನದಿ (River) ಗೆ ಹಾರಿರುವ ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಶಾಮ್ಲಿಯ ಕೈರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಖೇಲ್ ಕಲಾ ನಿವಾಸಿ 38 ವರ್ಷದ ಸಲ್ಮಾನ್ ಎಂಬವರು ತಮ್ಮ ಪತ್ನಿ ಖುಸ್ನುಮಾ ಅವರೊಂದಿಗೆ ಕಳೆದ 14 ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದರು. ದಂಪತಿಗೆ ಮೆಹಕ್ (12), ಶಿಫಾ (5), ಅಯಾನ್ (3), ಮತ್ತು ಕೇವಲ 8 ತಿಂಗಳ ಮಗು ಇನೈಶಾ ಎಂಬ ನಾಲ್ಕು ಮಕ್ಕಳು ಇದ್ದರು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಕುಟುಂಬದ ಸದಸ್ಯರ ಪ್ರಕಾರ, ಖುಸ್ನುಮಾ ಮನೆಯಿಂದ ಹೊರಡುವುದು ಇದು ಮೊದಲ ಬಾರಿಯಲ್ಲ. ಇತ್ತೀಚೆಗೆ ಕೂಡಾ ಆಕೆ ಕೆಲವು ಕಾರಣಗಳಿಂದ ಮನೆಯಿಂದ ಹೊರಟಿದ್ದಳು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಿಂದ ಮನೆಯೊಳಗಿನ ವಾತಾವರಣದಲ್ಲಿ ಒತ್ತಡ ಉಂಟಾಗಿದ್ದಿತು ಎಂದು ಕುಟುಂಬದವರು ಹೇಳಿದರು. ಮತ್ತೇ ಇತ್ತೀಚೆಗೆ ಸಲ್ಮಾನ್ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ, ಸಲ್ಮಾನ್ ತುಂಬಾ ಬೇಸರಗೊಂಡಿದ್ದರು ಎಂದು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸಲ್ಮಾನ್ ತನ್ನ ನಾಲ್ಕು ಮಕ್ಕಳೊಂದಿಗೆ ಹಳೆಯ ಯಮುನಾ ನದಿ (River) ಸೇತುವೆಯ ಕಡೆ ತೆರಳಿದ್ದಾನೆ. ಅಲ್ಲಿ ಮಕ್ಕಳಿಗೆ ತಿಂಡಿ ಕೊಟ್ಟ ನಂತರ ಆತ ನದಿ (River) ಯ ಕಡೆ ಮಕ್ಕಳೊಂದಿಗೆ ತೆರಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಸಂಜೆ ವೇಳೆಗೆ ಸಲ್ಮಾನ್ ಮತ್ತು ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತಕ್ಷಣ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೊನೆಯ ಬಾರಿ ಸಲ್ಮಾನ್ ಯಮುನಾ ನದಿ (River)  ಸೇತುವೆಯ ಬಳಿ ಇದ್ದ ಮಾಹಿತಿ ದೊರೆತಿದೆ.

ಘಟನೆಯ ಬಗ್ಗೆ ಮಾತನಾಡಿದ ಅತಿರಿಕ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ನಾವು ತಕ್ಷಣ ಡೈವರ್‌ಗಳ ತಂಡವನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದ್ದೇವೆ. ಈಗಲೂ ನದಿ (River) ಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ನಿಜಸ್ವರೂಪ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

ಘಟನೆಯ ಮೊದಲು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆ ವಿಡಿಯೋದಲ್ಲಿ ಆತ ತನ್ನ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಜೀವನದಲ್ಲಿ ಎದುರಿಸುತ್ತಿದ್ದ ವೈಯಕ್ತಿಕ ಕಷ್ಟಗಳನ್ನು ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಯ (River) ಕಡೆ ಹೋಗುವ ಮುನ್ನ ವಿಡಿಯೋ ಮಾಡಿದ ಪತಿ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments