ಸೋಮವಾರ, ಫೆಬ್ರವರಿ 2, 2026

Janaspandhan News

HomeCrime Newsಇನ್‌ಸ್ಟಾಗ್ರಾಂ ಪ್ರೇಮಿಗಾಗಿ ನಿದ್ರಾಜನಕ ಇಂಜೆಕ್ಷನ್ ನೀಡಿ ಪೋಷಕರನ್ನೇ ಕೊಂದಳಾ ನರ್ಸ್.!
spot_img
spot_img

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ ನಿದ್ರಾಜನಕ ಇಂಜೆಕ್ಷನ್ ನೀಡಿ ಪೋಷಕರನ್ನೇ ಕೊಂದಳಾ ನರ್ಸ್.!

ಜನಸ್ಪಂದನ ನ್ಯೂಸ್‌, ಹೈದರಾಬಾದ್‌ : ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ತನ್ನ ವೃತ್ತಿಪರ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಿದ್ರಾಜನಕ ಇಂಜೆಕ್ಷನ್ (A sedative injection) ನೀಡಿ ತಂದೆ-ತಾಯಿಯನ್ನು ಕೊಂದ ಆರೋಪದ ಮೇಲೆ 25 ವರ್ಷದ ನರ್ಸ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಕ್ಕಲ ಸುರೇಖಾ ಎಂದು ಗುರುತಿಸಲಾಗಿದ್ದು, ಆಕೆ ಸಂಗಾರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಆರೋಪದ ಪ್ರಕಾರ, ಸುರೇಖಾ ತನ್ನ ತಾಯಿ ಲಕ್ಷ್ಮೀ (54) ಮತ್ತು ತಂದೆ ದಶರಥ್ (58) ಅವರಿಗೆ ಆರ್ಟಾಸಿಲ್ (Artacil) ಎಂಬ ನಿದ್ರಾಜನಕ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್ ಮಾಡಿ ಹತ್ಯೆ ಮಾಡಿದ್ದಾಳೆ.

ಸಂಬಂಧವೇ ಕಾರಣವಾಯಿತೇ?

ಪೊಲೀಸರ ತನಿಖೆಯ ಪ್ರಕಾರ, ಸುರೇಖಾ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಆತ ಬೇರೆ ಜಾತಿಗೆ ಸೇರಿದವನಾಗಿದ್ದ ಕಾರಣ, ಆಕೆಯ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆಯಲ್ಲಿ ನಿರಂತರ ಕಲಹ ಉಂಟಾಗುತ್ತಿದ್ದು, ಈ ವೈಮನಸ್ಸೇ ಕೊಲೆಗಾಗಿಯೇ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕ್ರೈಂ ಸುದ್ದಿ ಓದಿ :‌ ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ವೈದ್ಯಕೀಯ ಜ್ಞಾನವೇ ಅಪರಾಧಕ್ಕೆ ಉಪಯೋಗ :

ನರ್ಸಿಂಗ್ ತರಬೇತಿ ಪಡೆದಿದ್ದ ಸುರೇಖಾ, ತನ್ನ ಮೇಲೆ ಅನುಮಾನ ಬರದಂತೆ ಕೊಲೆ ಮಾಡಬಹುದು ಎಂಬ ಭ್ರಮೆಯಲ್ಲಿ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 24ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ತಾಯಿ ಲಕ್ಷ್ಮಿಗೆ ಮೊದಲು ನಿದ್ರಾಜನಕ ಇಂಜೆಕ್ಷನ್ ನೀಡಲಾಗಿದೆ. ನಂತರ ಕೃಷಿ ಕೆಲಸದಿಂದ ದಣಿದು ಬಂದ ತಂದೆ ದಶರಥ್‌ಗೂ ಅದೇ ಇಂಜೆಕ್ಷನ್ ನೀಡಲಾಗಿದೆ.

ಇಂಜೆಕ್ಷನ್ ನಂತರ ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬೆಳಗಿನ ಜಾವ ಅವರು ಎಚ್ಚರವಾಗದಿರುವುದನ್ನು ಗಮನಿಸಿದ ಸುರೇಖಾ, ಸಹೋದರ ಅಶೋಕ್‌ಗೆ ವಿಷಯ ತಿಳಿಸಿದ್ದಾಳೆ.

ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ :

ಅಶೋಕ್ ಇಬ್ಬರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆರಂಭದಲ್ಲಿ ಸಾವಿನ ಬಗ್ಗೆ ಅನುಮಾನ ಇಲ್ಲದಂತೆ ಕಂಡರೂ, ಮನೆಯ ಪರಿಶೀಲನೆಯ ವೇಳೆ ಬಳಸಿದ ಸಿರಿಂಜ್‌ಗಳು ಮತ್ತು ಔಷಧಿಗಳು ಪತ್ತೆಯಾಗಿದ್ದು ಪ್ರಕರಣಕ್ಕೆ ತಿರುವು ನೀಡಿತು.

ಮರಣೋತ್ತರ ವರದಿಯಿಂದ ಸತ್ಯ ಬಹಿರಂಗ :

ಮರಣೋತ್ತರ ಪರೀಕ್ಷೆಯಲ್ಲಿ ನಿದ್ರಾಜನಕ ಔಷಧಿ ಮಿತಿಮೀರಿದ ಪ್ರಮಾಣದಲ್ಲಿದ್ದ ಕಾರಣವೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ. ಇದರಿಂದ ಅನುಮಾನ ಗಟ್ಟಿಯಾಗಿದ್ದು, ಸುರೇಖಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿರೋಧಾಭಾಸದ ಹೇಳಿಕೆಗಳ ನಂತರ, ಕೊನೆಗೆ ಸುರೇಖಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನ :

ಸುರೇಖಾಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನು ಓದಿ : Nurse : ರೋಗಿ ಮುಂದೆಯೇ ಬಟ್ಟೆ ಬಿಚ್ಚಿದ ನರ್ಸ್‌ ; ವಿಡಿಯೋ.!

ಕುಟುಂಬ ಹಿನ್ನೆಲೆ :

ಮೃತರಾದ ದಶರಥ್ ಮತ್ತು ಲಕ್ಷ್ಮೀ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದ ರೈತರು. ಇವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದು, ಕಿರಿಯ ಪುತ್ರಿ ಸುರೇಖಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.

Source : Agences


DISCLAIMER : ಈ ವರದಿಯಲ್ಲಿರುವ ಮಾಹಿತಿ ಪೊಲೀಸ್ ತನಿಖೆ ಹಾಗೂ ಅಧಿಕೃತ ಮೂಲಗಳ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣವು ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಆರೋಪಿಗಳು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ನಿರಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಈ ಸುದ್ದಿ ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿಲ್ಲ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments