Tuesday, October 14, 2025

Janaspandhan News

HomeGeneral NewsWoman : “ನನ್ನ ಗೆಳತಿಯಾಗು” ಎಂದು ಮಧ್ಯರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಎಳೆದಾಡಿದ ಯುವಕ.!
spot_img
spot_img
spot_img

Woman : “ನನ್ನ ಗೆಳತಿಯಾಗು” ಎಂದು ಮಧ್ಯರಸ್ತೆಯಲ್ಲೇ ಮಹಿಳೆಯನ್ನು ತಬ್ಬಿಕೊಂಡು ಎಳೆದಾಡಿದ ಯುವಕ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಚೀನಾದ ಹಾಂಗ್‌ಕಾಂಗ್ ನಗರದಲ್ಲಿ ಸಾರ್ವಜನಿಕವಾಗಿ ನಡೆದ ಶಾಕಿಂಗ್ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. 41 ವರ್ಷದ ಮಹಿಳೆ (Woman) ಯೊಬ್ಬಳನ್ನು ನಡುಬೀದಿಯಲ್ಲೇ ಯುವಕನೋರ್ವ ಬಲವಂತವಾಗಿ ತಬ್ಬಿಕೊಂಡು, “ನನ್ನ ಗರ್ಲ್‌ ಫ್ರೆಂಡ್” (My Girl friend) ಎಂದು ಹೇಳುತ್ತಾ ಸುಮಾರು 10 ಮೀಟರ್‌ವರೆಗೆ ಎಳೆದಾಡಿದ ಘಟನೆ ನಡೆದಿದೆ.

ಈ ಘಟನೆ ಸೆಪ್ಟೆಂಬರ್ 28 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಹಾಂಗ್‌ಕಾಂಗ್‌ನ ಕಾಸ್‌ವೇ ಬೇ ಪ್ರದೇಶದ ಪ್ಯಾಟರ್ಸನ್ ಸ್ಟ್ರೀಟ್ ನಲ್ಲಿ ನಡೆದಿದೆ. ರಸ್ತೆಯಲ್ಲಿ ಜನಜಂಗುಳಿಗಳಿಂದ ತುಂಬಿಕೊಂಡಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಪಕ್ಕದಲ್ಲಿದ್ದ ಜನರು ಈ ಕೃತ್ಯವನ್ನು ಕಂಡು ತಕ್ಷಣ ಮಧ್ಯಪ್ರವೇಶಿಸಿ ಮಹಿಳೆ (Woman) ಯನ್ನು ರಕ್ಷಿಸಿದ್ದಾರೆ.

“ನನ್ನ ಗೆಳತಿಯಾಗು” ಎಂದು ತಬ್ಬಿಕೊಂಡು ಎಳೆದಾಡಿದ ಯೂಟ್ಯೂಬರ್ :

ಘಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಮೋಕ್ (Mok) ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೋಕ್ ಚೀನಾದಲ್ಲಿ ಸಕ್ರಿಯವಾಗಿರುವ ಯೂಟ್ಯೂಬರ್ ಆಗಿದ್ದಾನೆ. ಸಾಮಾಜಿಕ ಪ್ರ್ಯಾಂಕ್‌ಗಳ ಹೆಸರಿನಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದ ಈತನಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೋಕ್ ಮಹಿಳೆ (Woman) ಯನ್ನು ಹಿಂದಿನಿಂದ ಬಂದು ಬಲವಂತವಾಗಿ ತಬ್ಬಿಕೊಂಡಿದ್ದು, “ನನ್ನ ಗರ್ಲ್‌ ಫ್ರೆಂಡ್, ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ” ಎಂದು ಹೇಳುತ್ತಿದ್ದಾನೆ. ಮಹಿಳೆ ಬೆಚ್ಚಿಬಿದ್ದು ಸಹಾಯಕ್ಕಾಗಿ ಕೂಗಿಕೊಂಡಿದ್ದರೂ, ಆತ ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡು ಸುಮಾರು 10 ಮೀಟರ್‌ವರೆಗೆ ಎಳೆದೊಯ್ದಿದ್ದಾನೆ.

ಸಾರ್ವಜನಿಕರ ಪ್ರತಿಕ್ರಿಯೆ :

ಬೀದಿಯಲ್ಲಿದ್ದ ಜನರು ಈ ಘಟನೆ ನೋಡುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ್ದಾರೆ. ಅವರು ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದ್ದು, ಮಹಿಳೆಯನ್ನು ಬಿಡುವಂತೆ ಆಗ್ರಹಿಸಿದ್ದಾರೆ. ಜನರ ಒತ್ತಾಯದ ನಂತರ ಮೋಕ್ ಆಕೆಯನ್ನು ಬಿಟ್ಟಿದ್ದಾನೆ. ತಕ್ಷಣ ಮಹಿಳೆ (Woman) ಪೊಲೀಸರಿಗೆ ಮಾಹಿತಿ ನೀಡಿದ್ದು, ಹಾಂಗ್‌ಕಾಂಗ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಮೋಕ್‌ನನ್ನು ಬಂಧಿಸಿದ್ದಾರೆ.

ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಘಟನೆ :

ಘಟನೆಯ ನಂತರ ಆ ಮಹಿಳೆ (Woman) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದು, “ನಾನು ಸೂಪರ್‌ ಮಾರ್ಕೆಟ್‌ಗೆ ಹೋಗುತ್ತಿದ್ದೆ. ಆ ವ್ಯಕ್ತಿಯನ್ನು ನಾನು ಮೊದಲು ಎಂದೂ ನೋಡಿರಲಿಲ್ಲ. ಆಕಸ್ಮಿಕವಾಗಿ ಹಿಂದಿನಿಂದ ಬಂದು ತಬ್ಬಿಕೊಂಡು ಎಳೆಯಲು ಶುರುಮಾಡಿದ” ಎಂದು ಹೇಳಿದ್ದಾರೆ.

ಅವರು ತಮಗೆ ಸಹಾಯ ಮಾಡಿದ ನಾಗರಿಕರಿಗೆ ಧನ್ಯವಾದ ಹೇಳಿದ್ದು, ವಿಶೇಷವಾಗಿ “ಪೊಲೀಸರು ಬರುವವರೆಗೆ ನನ್ನೊಂದಿಗೆ ನಿಂತಿದ್ದ ನಾಲ್ವರು ವಿದೇಶಿಗಳು ನನಗೆ ಜೀವ ಉಳಿಸಿದರು” ಎಂದು ಹೇಳಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭ :

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ ಯೂಟ್ಯೂಬ್ ಚಾನೆಲ್‌ಗಾಗಿ ‘ಸಾಮಾಜಿಕ ಪ್ರ್ಯಾಂಕ್’ ಎಂಬ ನೆಪದಲ್ಲಿ ಈ ಕೃತ್ಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಪೊಲೀಸರ ಪ್ರಕಾರ, ಈ ರೀತಿಯ ಕೃತ್ಯ ಸಾರ್ವಜನಿಕ ಕಿರುಕುಳ ಮತ್ತು ಮಹಿಳೆ (Woman) ಯ ಗೌರವ ಹರಣದ ಪ್ರಯತ್ನ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆ ಬಳಿಕ ಸ್ಥಳೀಯರು ಮಹಿಳೆಯರ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಹಾಂಗ್‌ಕಾಂಗ್ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಿಡಿಯೋ ತೆಗೆಯುವುದು ಅಥವಾ ಕಿರುಕುಳ ನೀಡುವುದಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸುರಕ್ಷತೆ ಕುರಿತು ಚರ್ಚೆ ಹೆಚ್ಚಳ :

ಈ ಘಟನೆ ಬಳಿಕ ಹಾಂಗ್‌ಕಾಂಗ್ ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ಮಹಿಳೆಯರ ರಕ್ಷಣೆ ಕುರಿತು ಚರ್ಚೆ ಜೋರಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು “ಇದು ಪ್ರ್ಯಾಂಕ್ ಅಲ್ಲ, ಹಲ್ಲೆ” ಎಂದು ಕಿಡಿಕಾರಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿಡಿಯೋ :

 

View this post on Instagram

 

A post shared by SuaraBMI (@suarabmi)


School ದಸರಾ ರಜೆ ವಿಸ್ತರಣೆ ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಹೀಗಿದೆ.!

School

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಮೀಕ್ಷೆ (Backward Class Survey) ಕಾರ್ಯ ಪೂರ್ಣಗೊಳಿಸಲು ಶಿಕ್ಷಕರಿಗೆ ಅಗತ್ಯವಾದ ಸಮಯ ನೀಡುವ ಉದ್ದೇಶದಿಂದ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ (School) ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ ಕೆಲ ದಿನಗಳು ಬೇಕು ಎಂಬ ಮನವಿಯನ್ನು ಶಿಕ್ಷಕರ ಸಂಘಗಳು ಸಲ್ಲಿಸಿದ್ದರಿಂದ, ಸರ್ಕಾರವು School ರಜೆ ವಿಸ್ತರಿಸಲು ತೀರ್ಮಾನಿಸಿದೆ,” ಎಂದು ಹೇಳಿದರು.

ಶಾಲಾ (School) ಶಿಕ್ಷಕರ ಸಂಘದ ಮನವಿ ಸ್ವೀಕರಿಸಿದ ಸಿಎಂ :

ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ (Government school teachers) ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, “ಒಂದೇ ವೇಳೆ ಪಾಠ ಬೋಧನೆ ಮತ್ತು ಸಮೀಕ್ಷಾ ಕಾರ್ಯ ನಿರ್ವಹಿಸುವುದು ಶಿಕ್ಷಕರಿಗೆ (School Teacher) ದ್ವಿತೀಯ ಹೊರೆ ಆಗುತ್ತಿದೆ. ಕನಿಷ್ಠ 10 ದಿನಗಳ ಕಾಲಾವಕಾಶ ನೀಡಬೇಕು,” ಎಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿದ ನಂತರವೇ ಸರ್ಕಾರವು ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಲು ಆದೇಶ ಹೊರಡಿಸಿದೆ.

Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!
ಸಮೀಕ್ಷೆ ಪ್ರಗತಿ ನಿರೀಕ್ಷೆಗೂ ಕಡಿಮೆ :

ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಮೀಕ್ಷೆ ಸೆಪ್ಟೆಂಬರ್ 22 ರಂದು ಆರಂಭಗೊಂಡಿತ್ತು. ಅದನ್ನು ಅಕ್ಟೋಬರ್ 7ರೊಳಗೆ ಪೂರ್ಣಗೊಳಿಸುವ ಗುರಿ ಇತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಿರೀಕ್ಷೆಯಂತೆ ಮುಂದುವರಿಯದೆ ವಿಳಂಬವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅವರ ಪ್ರಕಾರ, ಕೊಪ್ಪಳ ಜಿಲ್ಲೆಯಲ್ಲಿ ಶೇ.97 ರಷ್ಟು ಪ್ರಗತಿ ಸಾಧಿಸಲ್ಪಟ್ಟಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಶೇ.60ರಷ್ಟು ಕಾರ್ಯವೇ ಪೂರ್ಣಗೊಂಡಿದೆ. ಈ ಹಿನ್ನೆಲೆ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕಾಗಿದೆ ಎಂದು ಸರ್ಕಾರ ಹೇಳಿದೆ.

1.60 ಲಕ್ಷ ಮಂದಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ :

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷಾ ಕಾರ್ಯದಲ್ಲಿ ಸುಮಾರು 1.20 ಲಕ್ಷ ಶಿಕ್ಷಕರು (School Teacher) ಮತ್ತು 40 ಸಾವಿರ ಇತರ (Others) ಸಿಬ್ಬಂದಿ ಸೇರಿ ಒಟ್ಟು 1.60 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಶಿಕ್ಷಣ ಇಲಾಖೆ ಮತ್ತು ಶಾಶ್ವತ ಹಿಂದುಳಿದ ಆಯೋಗದ ಸಂಯುಕ್ತ ಚರ್ಚೆಯ ಬಳಿಕ ರಜೆ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಹೊಸ ಆದೇಶದ ಪ್ರಕಾರ, ಅಕ್ಟೋಬರ್ 8 ರಿಂದ ಅಕ್ಟೋಬರ್ 18 ರವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ (school) ರಜೆ ಮುಂದುವರಿಯಲಿದೆ.

King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!
ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಶಿಕ್ಷಕರಿಗೆ ವಿನಾಯಿತಿ :

ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಮದ್ಯಂತರ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಸಮೀಕ್ಷಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಅವರು ಪರೀಕ್ಷಾ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಉಳಿದ ಶಿಕ್ಷಕರು ಈ ಅವಧಿಯಲ್ಲಿ ಸಮೀಕ್ಷೆ ಕಾರ್ಯವನ್ನು ವೇಗಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಸರ್ಕಾರ ತಿಳಿಸಿದೆ.

Order copy

ಸರ್ಕಾರದ ಈ ನಿರ್ಧಾರದಿಂದ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಸಂಪೂರ್ಣಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments