ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಬೈಕ್ ಸವಾರರಿಂದ ಗುಂಡಿ (shoot) ನ ದಾಳಿ ನಡೆದಿರುವ ಭಯಾನಕ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಹೆಲ್ಮೆಟ್ ಇಲ್ಲದೇ ಬಂದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನೀಡುವುದನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ.
ಶನಿವಾರ ಬೆಳಗಿನ ಜಾವ, ತೇಜ್ ನಾರಾಯಣ ನರ್ವಾರಿಯಾ (55) ಅವರು ಭಿಂಡ್–ಗ್ವಾಲಿಯರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಾವಿತ್ರಿ ಲೋಧಿ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಹೆಲ್ಮೆಟ್ ಧರಿಸಿರಲಿಲ್ಲ.
Police : ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!
ಜಿಲ್ಲಾಧಿಕಾರಿಯ ಆದೇಶದ ಪ್ರಕಾರ ಹೆಲ್ಮೆಟ್ ಇಲ್ಲದ ಸವಾರರಿಗೆ ಇಂಧನ ತುಂಬಬಾರದೆಂದು ಸೂಚನೆ ಇದ್ದುದರಿಂದ ಸಿಬ್ಬಂದಿ ಪೆಟ್ರೋಲ್ ನೀಡಲು ನಿರಾಕರಿಸಿದರು. ಸಿಬ್ಬಂದಿ ತಮ್ಮ ಅಸಹಾಯಕತೆ ವಿವರಿಸಿದರೂ ಕೂಡಾ ಕೋಪಗೊಂಡ ಸವಾರರು ವಾಗ್ವಾದಕ್ಕೆ ಇಳಿದು ಗುಂಡು (shoot) ಹಾರಿಸಿದರು.
ನರ್ವಾರಿಯಾ ಅವರ ಕೈಗೆ ಗುಂಡು (shoot) ತಗುಲಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಗ್ವಾಲಿಯರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
ಸಿಸಿಟಿವಿ ದೃಶ್ಯಗಳಲ್ಲಿ ಒಬ್ಬ ಆರೋಪಿಯು ಪಿಸ್ತೂಲಿನಿಂದ ಹಾಗೂ ಮತ್ತೊಬ್ಬನು ರೈಫಲ್‌ನಿಂದ ಗುಂಡು (shoot) ಹಾರಿಸಿರುವುದು ದಾಖಲಾಗಿದೆ. ಹಲವು ಸುತ್ತು ಗುಂಡು ಹಾರಿಸಿದ ಪರಿಣಾಮ, ಬಂಕ್ ಸಿಬ್ಬಂದಿ ಭೀತಿಯಿಂದ ಅಡಗಿಕೊಳ್ಳುವ ಪರಿಸ್ಥಿತಿ ಉಂಟಾಯಿತು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
ವಿಡಿಯೋ :
बिना हेलमेट पेट्रोल नही दिया,तो कर दी अंधाधुंध फायरिंग,
गोली लगने से पंप मालिक हुआ घायल।
मध्य प्रदेश में कानून व्यवस्था ध्वस्त हो चुकी है अभी कुछ दिन पूर्व विधायक जी द्वारा कलेक्टर बंगले पर उत्पात मचाया गया था माननीय मुख्यमंत्री जी ध्यान दें मध्य प्रदेश में आज इन स्थितियों को… pic.twitter.com/Thv6o1kWXy— Ashok Sharma(Bade Bhaiya) (@AshokKSharmaBLS) August 30, 2025
Southern Railway ಯಲ್ಲಿ 3518 ಅಪ್ರೆಂಟಿಸ್ ಹುದ್ದೆಗಳ ಭರ್ತಿ.!
ಜನಸ್ಪಂದನ ನ್ಯೂಸ್, ನೌಕರಿ : ಸೌಥೆರ್ನ್ ರೈಲ್ವೆ (Southern Railway) ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 3518 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Southern Railway ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
Southern Railway ಹುದ್ದೆಗಳ ವಿವರ :
- ಇಲಾಖೆ ಹೆಸರು : ದಕ್ಷಿಣ ರೈಲ್ವೆ (SR).
- ಹುದ್ದೆಗಳ ಸಂಖ್ಯೆ : 3518.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಕೇರಳ.
- ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳ / ಸ್ಟೈಪೆಂಡ್ :
ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 6,000/- ರಿಂದ 7,000/- ಸ್ಟೈಪೆಂಡ್ ನೀಡಲಾಗುತ್ತದೆ.
ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ವಯೋಮಿತಿ :
- ಕನಿಷ್ಠ : 15 ವರ್ಷ.
- ಗರಿಷ್ಠ : 24 ವರ್ಷ.
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು 10ನೇ ತರಗತಿ / 12ನೇ ತರಗತಿ / ITI ಪಾಸಾಗಿರಬೇಕು.
ಅರ್ಜಿ ಶುಲ್ಕ
- SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ.
- ಇತರ ಅಭ್ಯರ್ಥಿಗಳಿಗೆ : ರೂ.100/-
PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ Southern Railway ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ಬೇಡಿಕೆಯಿದ್ದಲ್ಲಿ ಶುಲ್ಕ ಪಾವತಿಸಿ.
- ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಪ್ರಾರಂಭಿಸುವ ದಿನಾಂಕ : 25 ಆಗಸ್ಟ್ 2025.
- ಅರ್ಜಿಯ ಕೊನೆಯ ದಿನಾಂಕ : 25 ಸೆಪ್ಟೆಂಬರ್ 2025.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್ ಸಾವು.!
ಪ್ರಮುಖ ಲಿಂಕುಗಳು :
- ಅಧಿಕೃತ ಅಧಿಸೂಚನೆ (PDF) : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿ ಸಲ್ಲಿಸಲು ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ ವೆಬ್‌ಸೈಟ್ : sr.indianrailways.gov.in