Tuesday, September 17, 2024
spot_img
spot_img
spot_img
spot_img
spot_img
spot_img
spot_img

Health : ಈ ಸಮಸ್ಯೆ ಇರುವವರು ನಿಂಬೆ ಜ್ಯೂಸ್ ಕುಡಿಯಲೇಬಾರದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಿರಿಯರಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರು ತಂಪಾದ ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಅದರಲ್ಲೂ ಹೆಚ್ಚಿನವರು ನಿಂಬೆ ಹಣ್ಣಿನ ಜ್ಯೂಸ್‌ನ್ನು ಕುಡಿಯಲು ಇಷ್ಟ ಪಡುತ್ತಾರೆ.

ಇದನ್ನು ಓದಿ : Special news : ನೀವು ಇಷ್ಟಪಡುವ ಬಣ್ಣದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ.!

ಹೆಚ್ಚಿನ ಜನರು ಬೇಸಿಗೆಯಲ್ಲಿ ಶಾಖದಿಂದ ಪರಿಹಾರ ಪಡೆಯಲು ನಿಂಬೆ ಪಾನಕವನ್ನು ಸೇವಿಸಲು ಬಯಸುತ್ತಾರೆ ಏಕೆಂದರೆ ನಿಂಬೆ ಪಾನಕವನ್ನು ಕುಡಿಯುವುದರಿಂದ ನಿಮಗೆ ಬೆವರಿನಿಂದ ಮುಕ್ತಿ ಸಿಗುತ್ತದೆ. ನಿಮ್ಮ ಆಯಾಸವನ್ನು ನಿವಾರಿಸುತ್ತದೆ.

ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಈ ನಿಂಬೆ ಜ್ಯೂಸ್ ನ್ನು ಕುಡಿಯಬಾರದು. ಇದರಿಂದ ಆರೋಗ್ಯ ಹದಗೆಡುತ್ತದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು.!

* ಯಾವುದೇ ತರದ ಹಲ್ಲಿನ ಸಮಸ್ಯೆ ಇರುವವರು ನಿಂಬೆ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ. ನಿಂಬೆಯಲ್ಲಿರುವ ಆಮ್ಲವು ಹಲ್ಲಿನ ದಂತ ಕವಚವನ್ನು ಹಾನಿಗೊಳಿಸಬಹುದು.

* ಕಿಡ್ನಿ ಸಮಸ್ಯೆ ಇರುವವರು ಸಹ ಈ ಲೆಮೆನ್ ಜ್ಯೂಸ್ ಕುಡಿಯಬಾರದು. ಇದು ಮೂತ್ರಪಿಂಡದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಇದರಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!

* ಆ್ಯಸಿಡಿಟಿ ಸಮಸ್ಯೆ ಹೊಂದಿರುವವರು ಈ ನಿಂಬೆ ಜ್ಯೂಸ್ ಕುಡಿಯಬಾರದು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್ ಆಮ್ಲವಿದ್ದು, ಇದು ದೇಹದಲ್ಲಿ ಮತ್ತಷ್ಟು ಆಮ್ಲೀಯತೆ ಹೆಚ್ಚಿಸುತ್ತದೆ. ಅಲ್ಲದೇ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

* ಎದೆಯುರಿ ಸಮಸ್ಯೆ ಇರುವವರು ಈ ಜ್ಯೂಸ್ ಕುಡಿಯಬೇಡಿ. ಕುಡಿದರೆ ಪೆಪ್ಸಿನ್ ಎಂಬ ಕಿಣ್ವ ಕ್ರಿಯಾಶೀಲವಾಗುವುದು. ಇದು ಪೆಪ್ಟಿಕ್ ಅಲ್ಸರ್ ಸಮಸ್ಯೆಗೆ ಕಾರಣವಾಗುತ್ತದೆ.

* ಮೂಳೆ ಸಮಸ್ಯೆ ಇರುವವರು ಹೆಚ್ಚಾಗಿ ಈ ಜ್ಯೂಸ್ ಸೇವಿಸಬಾರದು. ಇದರಿಂದ ಮೂಳೆಗಳಿಗೆ ಹಾನಿಯಾಗುತ್ತದೆ. ನಿಂಬೆ ಜ್ಯೂಸ್ ಮೂಳೆಗಳಲ್ಲಿ ಸಂಗ್ರಹವಾಗುವ ಕ್ಯಾಲ್ಸಿಯಂ ಅನ್ನು ಬೇಗನೆ ನಾಶಪಡಿಸುತ್ತದೆ. ಇದು ಮೂತ್ರದ ಮೂಲಕ ಹೊರ ಬರುತ್ತದೆ. ಇದರಿಂದ ಮೂಳೆಗಳು ಬಲಹೀನಗೊಳ್ಳಬಹುದು.

ಇದನ್ನು ಓದಿ : Health : ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img