Sunday, September 15, 2024
spot_img
spot_img
spot_img
spot_img
spot_img
spot_img
spot_img

Health : ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ತಿನ್ನುವುದರಿಂದ ಆಗುವ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಡ್ರೈ ಪ್ರೂಟ್ಸ್ ಗಳಲ್ಲಿ ಕಪ್ಪು ಒಣ ದ್ರಾಕ್ಷಿಯಲ್ಲಿ ವಿಟಮಿನ್‌, ಖನಿಜ, ಆಂಟಿಆಕ್ಸಿಡೆಂಟ್‌, ಫೈಟೋನ್ಯೂಟ್ರಿಯೆಂಟ್‌, ಡಯಟರಿ ಫೈಬರ್‌ ಸೇರಿದಂತೆ ನಾನಾ ಪೋಷಕಾಂಶಗಳನ್ನು ಹೊಂದಿದ್ದು, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಲಾಭಗಳಿವೆ.

ಕಪ್ಪು ಒಣ ದ್ರಾಕ್ಷಿಯನ್ನು ಖಾಲಿ ಹೊಟ್ಟೆಯಲ್ಲಿ ನೀವು ಆರೋಗ್ಯಕರ ಲಘು ಆಯ್ಕೆಯಾಗಿ ಸೇವಿಸಬಹುದು. ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುವುದಲ್ಲದೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಇದು ನೀಡುತ್ತದೆ.

ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTubeನಲ್ಲಿದೆ ಈ ಮೂವಿ.!

ಇನ್ನೂ ಕಪ್ಪು ದ್ರಾಕ್ಷಿಯನ್ನು ಒಣಗಿಸಿ ಕಪ್ಪು ಒಣ ದ್ರಾಕ್ಷಿ ತಯಾರಿಸಲಾಗುತ್ತದೆ. ಇದನ್ನು ಕೇಕ್, ಖೀರ್ ಮತ್ತು ಬರ್ಫಿ ಮುಂತಾದ ಹಲವು ಬಗೆಯ ಸಿಹಿತಿಂಡಿಗಳಲ್ಲಿಯೂ ಬಳಸಲಾಗುತ್ತದೆ.

* ನಮ್ಮ ದೇಹದ ಶಕ್ತಿಗಾಗಿ ಕಬ್ಬಿಣಾಂಶವು ಅಗತ್ಯ. ಕಪ್ಪು ದ್ರಾಕ್ಷಿಯಲ್ಲಿ ಕಬ್ಬಿಣಾಂಶವು ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ತುಂಬಾ ಲಾಭಕಾರಿ. ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಅಥವಾ ರಕ್ತಹೀನತೆ ಸಮಸ್ಯೆ ಇದ್ದರೆ ಆಗ ಒಣದ್ರಾಕ್ಷಿ ಸೇವಿಸಿದರೆ ಒಳ್ಳೆಯದು.

* ವಿಟಮಿನ್ ಸಿ ಉತ್ತಮವಾಗಿರುವ ಕಪ್ಪು ದ್ರಾಕ್ಷಿಯಲ್ಲಿ ಇದು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಾಗಿ ಇರುವ ಒಣ ಹಣ್ಣುಗಳು ರೋಗಗಳನ್ನು ದೂರವಿಡುವಲ್ಲಿ ಸಹಾಯಕವಾಗಿವೆ.

ಇದನ್ನು ಓದಿ : ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು ; ವಿಡಿಯೋ Viral.!

ಅಲ್ಲದೇ ಕಪ್ಪು ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವು ಸಮೃದ್ಧವಾಗಿದ್ದು, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆಗ ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಈ ಆ್ಯಂಟಿಆಕ್ಸಿಡೆಂಟ್ ಚರ್ಮದ ಆರೋಗ್ಯ ಕಾಪಾಡಿ, ಹೃದಯದ ಕಾಯಿಲೆಗಳನ್ನು ದೂರವಿಡುವುದು.

* ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಈ ಕಪ್ಪು ದ್ರಾಕ್ಷಿ ತುಂಬಾ ಒಳ್ಳೆಯದು. ಇದರಲ್ಲಿ ಆಹಾರದ ನಾರಿನಾಂಶವಿದ್ದು, ಇದು ಮಲಬದ್ಧತೆ ನಿವಾರಣೆ ಮಾಡಿ, ಆರೋಗ್ಯ ಕಾಪಾಡುವುದು. ಇದರಲ್ಲಿ ನಾರಿನಾಂಶವು ಹೆಚ್ಚಿರುವ ಕಾರಣ ದಿನವಿಡಿ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

* ಕ್ಯಾಲ್ಸಿಯಂ ಅಂಶವು ಸಹ ಈ ಒಣ ದ್ರಾಕ್ಷಿಯಲ್ಲಿದೆ. ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಅಸ್ಥಿರಂಧ್ರತೆ ಸಮಸ್ಯೆಯನ್ನು ಎದುರಿಸುವಂತಹ ಮಹಿಳೆಯರಿಗೆ ಇದು ಒಳ್ಳೆಯ ಪರಿಹಾರ ಎನ್ನಬಹುದು. ಯಾಕೆಂದರೆ ಇದರಲ್ಲಿನ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುವುದು.

ಇದನ್ನು ಓದಿ : Job : 10ನೇ ತರಗತಿ ಆಗಿದ್ರೆ ಸಾಕು ; ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ದೋಗಾವಕಾಶ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img