ಜನಸ್ಪಂದನ ನ್ಯೂಸ್, ಡೆಸ್ಕ್ : ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ಎಂಎಸ್ ಸಂದೇಶ (OTP) ನಿಯಂತ್ರಣಕ್ಕೆ TRAI ಮುಂದಾಗಿದೆ.
ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಸಮಸ್ಯೆ ಬಗೆಹರಿಸಲು TRAI ಅಂದರೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮುಂದಾಗಿದ್ದು, ವೈಟ್ಲಿಸ್ಟ್ನಲ್ಲಿ ಇಲ್ಲದ URL, OTT Link, APK ಫೈಲ್ಗಳು ಮತ್ತು ಕೆಲವು ಸಂಖ್ಯೆಗಳಿಂದ ಬರುವ ಎಸ್ಎಂಎಸ್ ನಿಯಂತ್ರಣಕ್ಕೆ ನಿರ್ಧರಿಸಿದೆ.
ಇದನ್ನೂ ಓದಿ : ಎಣ್ಣೆ ಹೊಡೆದು ಹಾರುವುದನ್ನೇ ಮರೆತ ಕಾಗೆ; ವಿಡಿಯೋ Viral.!
ಒನ್ ಟೈಮ್ ಪಾಸ್’ವರ್ಡ್ (OTP) :
ನಾವು ಯಾವುದೇ ಕಾರ್ಡ್‌ನಿಂದ ಹಣ ವರ್ಗಾವಣೆಗೆ ಅಥವಾ ಅನ್ಲೈನ್ನಲ್ಲಿ ಏನಾದರೂ ಖರೀದಿಗೆ ಒಟಿಪಿ ಬಹುಮುಖ್ಯ.
ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಒಟಿಪಿ ಬಗ್ಗೆ ಸರಿಯಾದ ಅರಿವು ಇಲ್ಲದ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ. ಜನರ ಮುಗ್ದತೆ ಬಳಸಿಕೊಂಡ ವಂಚಕರು, ನಿತ್ಯ ವಂಚಿಸುತ್ತಲೇ ಇದ್ದಾರೆ. ಹೀಗಾಗಿ ಇನ್ಮುಂದೆ ಮೋಸ ಹೋಗುವುದನ್ನು ತಪ್ಪಸಲು ಇದೀಗ ಒಟಿಪಿ ವಿಚಾರಕ್ಕೆ TRAI ಹೊಸ ನಿಯಮ ಜಾರಿ ಮಾಡುತ್ತಿದೆ.
ಇದನ್ನೂ ಓದಿ : ಬೆಳಗಾವಿ : ಕೊನೆಗೂ ಕಿತ್ತೂರು ಪ.ಪಂ. ಚುನಾವಣೆಗೆ ನ್ಯಾಯಾಲಯದಿಂದ ತಡೆ.!
ಏನಿದೆ ಒಟಿಪಿಯಲ್ಲಿ ಬದಲಾವಣೆ.?
ನಾವು ಈ ಹಿಂದೆ ಆನ್‌ಲೈನ್‌ನಲ್ಲಿ ಏನನ್ನಾದ್ರೂ ಖರೀದಿ ಮಾಡಿದ್ರೆ ಕ್ಷಣಗಳಲ್ಲೇ ನಮ್ಮ ಮೊಬೈಲ್ಗೆ ಒಟಿಪಿ (OTP) ಬರುತ್ತಿತ್ತು. ಆದರೆ ಇದೀಗ ಒಟಿಪಿ ಬರುವುದು ಕೊಂಚ ತಡವಾಗಲಿದೆ.
ಅಂದರೆ ಇನ್ಮುಂದೆ ನಮ್ಮ ಮೊಬೈಲ್ಗೆ OTP ಕೆಲ ನಿಮಿಷ ತಡವಾಗಿ ಬರಲಿದ್ದು, ಈ ನಿಯಮ ನಿನ್ನೆ ಅಂದರೆ ಸೆಪ್ಟೆಂಬರ್ 1 ರಿಂದ ಜಾರಿಗೆ ತರಲು ಟ್ರಾಯ್ ನಿರ್ಧರಿಸಿದೆ. ಒಟಿಪಿ ವಿಳಂಬದಿಂದ ಆನ್‌ಲೈನ್ ಶಾಪಿಂಗ್, ಬುಕ್ಕಿಂಗ್ಗಳಲ್ಲೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ : Special news : ನೀವು ಇಷ್ಟಪಡುವ ಬಣ್ಣದಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ.!
ಒಟಿಪಿ ವಿಳಂಬವಾಗಿ ಬರಲು ಕಾರಣ ಏನು?
ಟ್ರಾಯ್, ಗ್ರಾಹಕರ ಸುರಕ್ಷತೆ ದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಂಡಿದೆ. ಇದರಿಂದ ಸ್ವಲ್ಪ ಅಡಚಣೆ ಉಂಟಾಗಬಹುದಾದರೂ ಸಹ ಇತ್ತೀಚೆಗೆ ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ತಡೆಯಲು ಇದು ಸಹಕಾರಿಯಾಗಬಹುದು.
ಅಕ್ರಮ ಹಣ ವರ್ಗಾವಣೆ ತಪ್ಪಿಸುವುದೇ ಈ ನಯಮದ ಉದ್ದೇಶವಾಗಿದ್ದು, ಹೊಸ ನಿಯಮದಿಂದ ಆನ್‌ಲೈನ್ ಮೋಸ ಹಾಗೂ ವಂಚನೆ ತುಸು ಕಡಿಮೆಯಾಗಬಹುದು.
ಗೂಗಲ್ ಮಹತ್ವದ ನಿರ್ಧಾರ :
ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಕಡಿಮೆ ಗುಣಮಟ್ಟದ ಅಪ್ಲಿಕೇಶನ್ ವಿರುದ್ಧ ಕ್ರಮ ಕೈಗೊಂಡಿದೆ. ನಕಲಿ ಅಪ್ಲಿಕೇಶನ್ ತೆಗೆದು ಹಾಕಲು ಗೂಗಲ್ ನಿರ್ಧರಿಸಿದೆ. ಅದು ಕೂಡ ಇಂದಿನಿಂದಲೇ ಜಾರಿಯಾಗಲಿದೆ. ಇದರಿಂದ ಬಳಕೆದಾರರಿಗೆ ಸುರಕ್ಷಿತ ಮತ್ತು ಗೌಪ್ಯತೆ ಖಾತ್ರಿಪಡಿಸುತ್ತಿದೆ.