ಜನಸ್ಪಂದನ ನ್ಯೂಸ್, ಡೆಸ್ಕ್ : ಹಳ್ಳಿಯೊಂದರಲ್ಲಿ ಮೂಢನಂಬಿಕೆಗೆ ಸಂಬಂಧಿಸಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸತ್ತ ಮಗನನ್ನು ಉಳಿಸಿಕೊಳ್ಳಲು ತಂದೆಯೋರ್ವ ವಿಫಲ ಪ್ರಯತ್ನ ಮಾಡಿ ನಿರಾಶೆಯಾದ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನೌಜಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಬೆಳಗಾವಿ : ಕೊನೆಗೂ ಕಿತ್ತೂರು ಪ.ಪಂ. ಚುನಾವಣೆಗೆ ನ್ಯಾಯಾಲಯದಿಂದ ತಡೆ.!
ಮಿಟ್ಟೋಲಿ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ಎಂಬವರ ಮಗ 11 ವರ್ಷದ ಕಿಶೋರ್ ಮಯಾಂಕ್ ಎಂದು ವರದಿ ತಿಳಿಸಿದೆ.
ಗ್ರಾಮದ ಬಾಲಕ ಹಾವು ಕಚ್ಚಿ ತೀವ್ರ ಅಸ್ವಸ್ಥನಾಗಿದ್ದನು. ಕೂಡಲೇ ಪೋಷಕರು ಬಾಲಕನನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಆದ್ರೆ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?
ಆದರೆ ಪೋಷಕರು ಬಾಲಕ ಬದುಕಿರಬಹುದು ಎಂದು ಭಾವಿಸಿ ಸ್ಥಳೀಯ ಮಂತ್ರವಾದಿಯನ್ನು ಪೋಷಕರು ಕರೆಸಿದ್ದಾರೆ. ಮಂತ್ರವಾದಿ ಮೃತ ಮಗನ ಜೀವ ಉಳಿಸುವುದಾಗಿ ಹೇಳಿದ್ದಾನೆ. ಚಿಕಿತ್ಸೆಯ ನೆಪದಲ್ಲಿ ಮೃತದೇಹವನ್ನು ಸಗಣಿಯಲ್ಲಿ ಮುಚ್ಚಿದ್ದಾನೆ. ಆದರೆ ಬಾಲಕ ಬದುಕಿ ಬರಲಿಲ್ಲ.
ಗಾಢ ನಿದ್ದೆಯಲ್ಲಿದ್ದರಿಂದ ಬಾಲಕ ಕಿಶೋರ್‌ಗೆ ಹಾವು ಕಚ್ಚಿರೋದು ಗೊತ್ತಾಗಿಲ್ಲ. ಬೆಳಗ್ಗೆ ಆಗುತ್ತಿದ್ದಂತೆಯೇ ಕಿಶೋರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕುಟುಂಬಸ್ಥರು ಮೊದಲು ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಕ್ಷಣ ಕ್ಷಣಕ್ಕೂ ಕಿಶೋರ್ ಆರೋಗ್ಯ ಹದಗೆಡುತ್ತಾ ಬಂತು.
ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!
ಹೀಗಾಗಿ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋದಾಗ ಇಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಗರ ಪ್ರದೇಶದ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಪೋಷಕರು ಕಿಶೋರ್‌ನನ್ನು ಅಲಿಘರ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಹಾವು ಕಡಿತದಿಂದ ಬಾಲಕ ಸಾವಿಗೀಡಾಗಿದ್ದಾನೆ ಎಂದು ಖಚಿತಪಡಿಸಿದ್ದಾರೆ.
ಕಿಶೋರ್ ಮಲಗಿದ್ದ ಕೊಠಡಿಯಲ್ಲಿ ಹುಡುಕಾಡಿದಾಗ ಹಾವು ಸಹ ಸಿಕ್ಕಿದೆ. ಹಾವನ್ನು ಹಿಡಿಯಲಾಗಿದೆ. ನೀಮ್‌ಗಾಂವ್ ಗ್ರಾಮದಲ್ಲಿರುವ ಮಂತ್ರವಾದಿ ಹಾವು ಕಚ್ಚಿದವರನ್ನ ಬದುಕಿಸುತ್ತಾನೆ ಎಂದು ಕಿಶೋರ್ ಪೋಷಕರಿಗೆ ಯಾರೋ ಹೇಳಿದ್ದಾರೆ.
ಇದನ್ನು ಓದಿ : ತಾನೇ ಮುಂದೆ ನಿಂತು ಪತಿಗೆ 2ನೇ Marriage ಮಾಡಿಸಿದ ಪತ್ನಿ; ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ.?
ಈ ಮಾತನ್ನು ನಂಬಿದ ಪೋಷಕರು ಮಗನ ಶವವನ್ನು ಮಂತ್ರವಾದಿಯ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ. ಮಂತ್ರವಾದಿ ಬಾಲಕ ಶವವನ್ನು ಹಸುವಿನ ಸಗಣಿಯಲ್ಲಿಯೇ ಸಂಪೂರ್ಣವಾಗಿ ಮುಚ್ಚಿದ್ದಾನೆ.
ಸುಮಾರು ಎರಡೂವರೆ ಮೂರು ಗಂಟೆಗಳ ಕಾಲ ಹಸುವಿನ ಸಗಣಿಯಲ್ಲಿಯೇ ಶವವನ್ನು ಇರಿಸಲಾಗಿತ್ತು. ಈ ವೇಳೆ ಇಡೀ ಗ್ರಾಮಸ್ಥರು ಕುತೂಹಲದಿಂದ ಅಲ್ಲಿಯೇ ಕುಳಿತಿದ್ದರು. ಸುಮಾರು ಮೂರು ಗಂಟೆ ಬಳಿಕ ನಿರಾಸೆ ಭಾವನೆಯಿಂದ ಪೋಷಕರು ಶವವನ್ನು ತೆಗೆದುಕೊಂಡು ವಾಪಸ್ಸು ತಮ್ಮೂರಿಗೆ ಮರಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.