Saturday, September 21, 2024
spot_img
spot_img
spot_img
spot_img
spot_img
spot_img
spot_img

1 ಗಂಟೆಯಲ್ಲಿ ಬರೋಬ್ಬರಿ 6 ಮಕ್ಕಳಿಗೆ ಜನ್ಮ ನೀಡಿದ great mother.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾತಾಯಿಯೋರ್ವಳು 1 ಗಂಟೆಯಲ್ಲಿ 6 ಮಕ್ಕಳಿಗೆ (six babies) ಜನ್ಮ ನೀಡಿದ ಅಚ್ಚರಿಯ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

ರಾವಲ್ಪಿಂಡಿಯ ಆಸ್ಪತ್ರೆಯೊಂದರಲ್ಲಿ 27 ವರ್ಷದ ಮಹಿಳೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ (gave birth) ಎಂದು ವರದಿಯಾಗಿದೆ.

ಇದನ್ನು ಓದಿ : Health : ರಾತ್ರಿ ಈ ಸಮಸ್ಯೆಗಳು ಕಾಡುತ್ತಿವೆಯೇ.? ಹಾಗಿದ್ರೆ ಕಿಡ್ನಿ ಡ್ಯಾಮೇಜ್ ಆಗಿರಬಹುದು.!

ಮೊಹಮ್ಮದ್ ವಹೀದ್ ಅವರ ಪತ್ನಿ ಜೀನತ್ ವಹೀದ್ ( Zeenat Waheed) ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಜೀನತ್ ಒಂದು ಗಂಟೆಯ ಅವಧಿಯಲ್ಲಿ ಎಲ್ಲಾ ಆರು ಮಕ್ಕಳಿಗೆ ಒಂದರ ನಂತರ ಒಂದರಂತೆ ಜನ್ಮ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಜೀನತ್ ವಹೀದ್, ರಾವಲ್ಪಿಂಡಿಯ ಹಾಜಿರಾ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ.

ತಾಯಿ ಸೇರಿದಂತೆ ಎಲ್ಲಾ ಶಿಶುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ (The condition is stable). ಶಿಶುಗಳು ತಲಾ ಎರಡು ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇದು ಜೀನತ್‌ಗೆ ಮೊದಲ ಹೆರಿಗೆಯಾಗಿದ್ದು, ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : SSLC ಪಾಸಾಗಿದ್ದೀರಾ : ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಅಪ್ಲೈ ಮಾಡಿ.!

ಶಿಶುಗಳನ್ನು ಹೆರಿಗೆ ಮಾಡಿದ ನಂತರ ಜೀನತ್‌ಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ವೈದ್ಯರು ಹೇಳಿದ್ದು, ಕೆಲವೇ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img