Tuesday, September 17, 2024
spot_img
spot_img
spot_img
spot_img
spot_img
spot_img
spot_img

Lokayukta trap : ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್‌ ಲೋಕಾಯುಕ್ತ ಬಲೆಗೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ‌ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಲಂಚ ಪಡೆಯುತ್ತಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್‌ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೆಟ್ರೋಲ್‌ ಬಂಕ್‌ಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಮಾಡಿಸಿಕೊಡಲು ₹ 1 ಲಕ್ಷಕ್ಕೆ ಬೇಡಿಕೆ ಇಟ್ಟು ₹ 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು.

ಜಿಲ್ಲಾ ಅಗ್ನಿಶಾಮಕ ತುರ್ತು ಸೇವೆಗಳ ಅಧಿಕಾರಿ ಗುರುರಾಜ್ ಹಾಗೂ ಕಾನ್‌ಸ್ಟೆಬಲ್ ಸೋಪನ್ ರಾವ್ ಲಂಚ ಪಡೆದ ಆರೋಪಿಗಳು ಎಂದು ತಿಳಿದು ಬಂದಿದೆ.

ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!

ಇನ್ನೂ ಚಿತ್ತಾಪುರದ ರಾಜರಾಮಪ್ಪ ನಾಯಕ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ರಾಜರಾಮಪ್ಪ ಅವರ ಪೆಟ್ರೋಲ್ ಬಂಕ್‌ಗೆ ಎನ್‌ಒಸಿ ಪ್ರಮಾಣಪತ್ರ ಕೊಡಲು ಸಾಕಷ್ಟು ಬಾರಿ ಕಚೇರಿಗೆ ಅಲೆದಾಡುವಂತೆ ಮಾಡಿದ್ದರು.

ಅಲ್ಲದೇ ₹ 1 ಲಕ್ಷ ಲಂಚ ಕೊಟ್ಟರೆ ಎನ್‌ಒಸಿ ಮಾಡಿಸಿಕೊಡುವುದಾಗಿ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್‌ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : PUC ಪಾಸಾದವರಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳ ನೇಮಕಾತಿ.!

ಕಚೇರಿಯಲ್ಲಿ ಲಂಚದ ಹಣ ಪಡೆಯುವ ವೇಳೆ ಗುರುರಾಜ್ ಹಾಗೂ ಸೋಪನ್‌ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಡಿಎಸ್‌ಪಿ ಮಂಜುನಾಥ್ ಗಂಗಲ್, ಇನ್‌ಸ್ಪೆಕ್ಟರ್‌ ಧ್ರುವತಾರಾ ಸಿ. ತಿಗಡಿ, ಸಿಬ್ಬಂದಿ ಮಲ್ಲಿನಾಥ್, ಮಸೂದ್ ಅವರು ದಾಳಿ ನಡೆಸಿದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img