ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸೋಮವಾರ ಬಾಂಗ್ಲಾದೇಶದ ಸಾವಿರಾರು ಪ್ರತಿಭಟನಾಕಾರರು ಢಾಕಾದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದರು.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಇನ್ನೂ ಹಸೀನಾ ರಾಜೀನಾಮೆ ನೀಡಿ ಸೇನಾ ಹೆಲಿಕಾಪ್ಟರ್‌ನಲ್ಲಿ ನವ ದೆಹಲಿಗೆ ಆಗಮಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಪ್ರತಿಭಟನಾಕಾರರು ಹಸೀನಾ ಅವರ ಅಧಿಕೃತ ನಿವಾಸ ‘ಗಣಬಧನ್’ ಒಳಹೊಕ್ಕು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ದೋಚುತ್ತಿದ್ದಾರೆ.
ತರಕಾರಿಗಳನ್ನು ತಿನ್ನುತ್ತಿರುವುದು, ರೆಫ್ರಿಜರೇಟರ್‌ನಲ್ಲಿ ಇಡಲಾಗಿದ್ದ ಮೀನು, ಕೋಳಿ, ಅಲ್ಲಿದ್ದ ಪೀಠೊಪಕರಣಗಳ ಮೇಲೆ ಹತ್ತಿ ಕುಣಿದಾಡುತ್ತಿರುವುದು, ಬೆಡ್ ರೂಂನಲ್ಲಿನ ಮಂಚದ ಮೇಲೆ ಮಲಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು, ಕೆಲವರಂತೂ ತಮಗೆ ಸಿಕ್ಕ ವಸ್ತುಗಳನ್ನೆಲ್ಲ ಹೊತ್ತೊಯ್ಯುತ್ತಿದ್ದಾರೆ.
ಇದನ್ನು ಓದಿ : ಕಾನ್ಸ್‌ಟೇಬಲ್ ಪತಿ ಮಾಡಿದ ಈ ನೀಚ ಕೃತ್ಯಕ್ಕೆ Police ಠಾಣೆ ಮೆಟ್ಟಿಲೇರಿದ ಪತ್ನಿ.!
ಇನ್ನೂ ಕೆಲವು ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಹಾಸಿಗೆಯ ಮೇಲೆ ಮಲಗಿ ಸಂಭ್ರಮಿಸಿದ್ದಾರೆ. ಢಾಕಾದಿಂದ ಬರುತ್ತಿರುವ ವಿಡಿಯೋಗಳಲ್ಲಿ ಹಸೀನಾ ಸರ್ಕಾರದ ಪತನವನ್ನು ಸಂಭ್ರಮಿಸುವ ಆಚರಣೆಗಳು ಹಾಗೂ ಘೋಷಣೆಗಳನ್ನು ಕೂಗಿ ಜನರು ಬೀದಿಯಲ್ಲಿ ಸಂಭ್ರಮಿಸಿದ್ದಾರೆ.
ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಸೋಶಿಯಲ್ ಮೀಡಿಯಾದ ವಿಡಿಯೋಗಳ ಪ್ರಕಾರ, ಗಣಭಬನ ಡ್ರಾಯಿಂಗ್ ರೂಮ್‌ಗಳಲ್ಲಿ ಸಾಕಷ್ಟು ಜನರು ಸೇರಿದ್ದಾರೆ. ದೇಶದ ಅತ್ಯಂತ ಸಂರಕ್ಷಿತ ಕಟ್ಟಡಗಳಲ್ಲಿ ಒಂದಾದ ಪ್ರಧಾನಿ ಅಧಿಕೃತ ನಿವಾಸದ ಟಿವಿ, ಖುರ್ಚಿ ಹಾಗೂ ಮೇಜುಗಳನ್ನು ಕದ್ದುಕೊಂಡು ಹೋಗುತ್ತಿರುವುದು ಕಂಡಿದೆ.
ಇದನ್ನು ಓದಿ : Belagavi : ದೇವಸ್ಥಾನದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮಹಿಳೆಯರ ಸಾವು.!
ಪ್ರಧಾನಿಯ ಅಧಿಕೃತ ನಿವಾಸದಿಂದ ದರೋಡೆ ಮಾಡಿದ ಆರೋಪದ ಮೇಲೆ ಪ್ರತಿಭಟನಾಕಾರನೊಬ್ಬ ನಾಚಿಕೆಯಿಲ್ಲದೆ ಕೈಯಲ್ಲಿ ಬ್ರಾಗಳನ್ನು ಹಿಡಿದಿರುವುದನ್ನು ತೋರಿಸಿದೆ.
ಬ್ರಾಗಳನ್ನು ಹಿಡಿದಿರುವ ಮತ್ತು ಪ್ರದರ್ಶಿಸುತ್ತಿರುವ ವ್ಯಕ್ತಿಯ ಚಿತ್ರವು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಪ್ರಸಾರವಾಗಿದೆ.
#Bangladesh: What’s in the bag?
It has sarees of Sheikh Hasina, will make my wife Prime Minister. pic.twitter.com/Q4oYqweiMS
— Pooja Mehta (@pooja_news) August 5, 2024