ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲ ವರ್ಷಗಳ ಹಿಂದಷ್ಟೇ ಮದುವೆಗೆ ಮುಂಚೆಯೇ ಜೊತೆಯಾಗಿರುವ ಟ್ರೆಂಡ್ ಮಹಾ ನಗರಗಳಲ್ಲಿ ಶುರುವಾಗಿದೆ. ಇದನ್ನ ಲಿವ್ ಇನ್ ರಿಲೇಶನ್ಶಿಪ್ ಎಂದು ಕರೆಯಲಾಗುತ್ತದೆ.
ಆದರೆ ನಿಮ್ಗ ಗೊತ್ತಾ.? ಗ್ರಾಮೀಣ ಪ್ರದೇಶಗಳಲ್ಲಿಯೂ ಲಿವ್- ಇನ್ ಸಂಬಂಧಗಳು ಕಂಡು ಬರುತ್ತಿರುತ್ತವೆ.
ಇದನ್ನು ಓದಿ : Video : ಮಹಿಳಾ ಎಸ್ಐ ಜೊತೆ SI ಸರಸ ಸಲ್ಲಾಪ : ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ.!
ಅದರಲ್ಲಿಯೂ ಬುಡಕಟ್ಟು ಸಮುದಾಯವೊಂದರಲ್ಲಿ ಲಿವ್-ಇನ್ ಸಂಬಂಧವನ್ನು ಎಲ್ಲರೂ ಒಪ್ಪುತ್ತಾರಂತೆ. ಅಷ್ಟೇಯಲ್ಲದೇ ಮದುವೆಗೂ ಮೊದಲೇ ತಾಯಿಯಾಗಬಹುದಂತೆ.
ಜಗತ್ತಿನಲ್ಲಿರುವ ಕೆಲವು ಬುಡಕಟ್ಟು ಸಮುದಾಯದಲ್ಲಿ ಕೆಲವು ಸಂಪ್ರದಾಯವನ್ನು ಆಚರಿಸ್ತಾರೆ. ಈ ಸಂಪ್ರದಾಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದರೂ ಕೂಡ ಆ ಬುಡಗಟ್ಟಿನ ಜನರು ಆಚರಣೆ ಮಾಡುತ್ತಿರುತ್ತಾರೆ.
ಇದನ್ನು ಓದಿ : ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ 300 ಯುನಿಟ್ ವಿದ್ಯುತ್ ಫ್ರೀ ; ಡೈರೆಕ್ಟ್ Link ಇಲ್ಲಿದೆ.!
ಅದರಂತೆ ಭಾರತದ ಈ ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯವೊಂದು ಜಾರಿಯಲ್ಲಿದೆ. ರಾಜಸ್ಥಾನ ಮತ್ತು ಗುಜರಾತ್‌ನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಗರಾಸಿಯಾ ಬುಡಕಟ್ಟಿನ ಜನರಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯವಾಗಿ ಬಿಟ್ಟಿದೆ ಬಿಡಿ.
ಈ ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಗೆ ಮುಂಚೆಯೇ ತಾಯಾಗುತ್ತಾರಂತೆ. ಆ ಹುಡುಗ ಇಷ್ಟವಾದರೆ ಮದುವೆಯಾಗಿ ವೈವಾಹಿಕ ಜೀವನವನ್ನು ಆರಂಭಿಸುತ್ತಾರೆ.
ಇದನ್ನು ಓದಿ : ಮದುವೆಯೇ ಆಗಿಲ್ಲ ಎಂದ ಸಂಸದರು KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟರು ; ಪೋಟೋ ವೈರಲ್.!
ಗರಾಸಿಯಾ ಬುಡಕಟ್ಟಿನಲ್ಲಿ ಈ ಸಂಪ್ರದಾಯ ಜಾರಿಗೆ ಬರಲು ಕಾರಣವು ಇದೆ. ಕೆಲವು ವರ್ಷಗಳ ಹಿಂದೆ ಈ ಬುಡಕಟ್ಟಿನ ನಾಲ್ವರು ಸಹೋದರರು ಬೇರೆ ಬೇರೆ ಕಡೆ ವಾಸಿಸಲು ಹೋಗಿದ್ದರು. ನಾಲ್ವರಲ್ಲಿ ಮೂವರು ಮೊದಲು ಮದುವೆಯಾಗಿ ಸಂಸಾರ ಆರಂಭಿಸಿದರೆ, ಒಬ್ಬನು ಮಾತ್ರ ಮದುವೆಯಾಗದೇ ಲಿವ್- ಇನ್ ಸಂಬಂಧದಲ್ಲಿ ಇದ್ದನು.
ದಿನ ಕಳೆದಂತೆ ಮದುವೆಯಾಗಿದ್ದ ಮೂವರಿಗೆ ಮಕ್ಕಳು ಅಗಲಿಲ್ಲವಂತೆ. ಮದುವೆಯಾಗದೇ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದವನಿಗೆ ಮಾತ್ರ ಮಗು ಆಯಿತಂತೆ. ಅಂದಿನಿಂದ ಈ ಸಮುದಾಯದಲ್ಲಿ ಲಿವ್ ಇನ್ ಸಂಬಂಧ ಹಾಗೂ ಮದುವೆಗೂ ಮೊದಲು ತಾಯಿಯಾಗುವ ಸಂಪ್ರದಾಯ ಚಾಲ್ತಿಯಲ್ಲಿ ಬಂತು ಎನ್ನಲಾಗಿದೆ.
ಇದನ್ನು ಓದಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 215 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹೀಗಾಗಿ ಈ ಬುಡಕಟ್ಟಿನಲ್ಲಿ ಮದುವೆಗಾಗಿಯೇ ಎರಡು ದಿನಗಳ ಕಾಲ ಜಾತ್ರೆಯೂ ನಡೆಯುತ್ತದೆ. ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಭಾಗಿಯಾಗುತ್ತಾರೆ. ಈ ಮೇಳ ಆಯೋಜನೆಯ ಉದ್ದೇಶ ಸಂಗಾತಿಯ ಆಯ್ಕೆ ಅಂತೆ.
ಈ ಮೇಳದಲ್ಲಿ ಹುಡುಗಿಗೆ ಯಾರಾದ್ರೂ ಹುಡುಗನು ಇಷ್ಟವಾದರೆ ಆತನ ಜೊತೆಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇರಬಹುದು. ಇಷ್ಟವಾಗುವ ಹುಡುಗನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಮಗುವನ್ನು ಪಡೆಯಬಹುದು. ಆ ನಂತರದಲ್ಲಿ ಇಬ್ಬರಿಗೂ ಒಪ್ಪಿಗೆ ಇದ್ದರೆ ಹೆತ್ತವರು ಜೊತೆ ಸೇರಿ ಮಕ್ಕಳ ಮದುವೆಯನ್ನು ಮಾಡುತ್ತಾರಂತೆ.