Monday, October 7, 2024
spot_img
spot_img
spot_img
spot_img
spot_img
spot_img
spot_img

Belagavi : ಮೊಬೈಲ್​​ನಲ್ಲಿ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಪೋಟೋ; ಶಿಕ್ಷಕ ಅರೆಸ್ಟ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಚಿಕ್ಕೋಡಿಯ ಸರ್ಕಾರಿ ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದು, ಪೊಲೀಸರು ಆತನನ್ನು ಅರೆಸ್ಟ್ ಮಾಡಿದ ಘಟನೆ ನಡೆದಿದೆ.

ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.

ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್ ಇಂತಹ ನೀಚ ಕೃತ್ಯವೆಸಗಿದ್ದು, ಈತ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತಿ ಮೆರದಿದ್ದಾನೆ.

ಬಂಧಿತ ಶಿಕ್ಷಕ ಮೊಹಮ್ಮದ್​ ಸಾದಿಕ್ ಮೊಬೈಲ್​ನಲ್ಲಿ 300ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ಇದನ್ನು ಓದಿ : ಪೊಲೀಸ್ ಕೆಲಸ ಬಿಟ್ಟು ಹುಡುಗಿಯರನ್ನು ಪಟಾಯಿಸೋ training ಕೊಡ್ತಾಳೆ ಈ ಲೇಡಿ.!

ಅಲ್ಲದೇ ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗಳ ಫೋಟೋಗಳು ಕೂಡ ಪತ್ತೆಯಾಗಿವೆ. ಶಿಕ್ಷಕ ಮೊಹಮ್ಮದ್​ ಸಾದಿಕ್ ಮೊಬೈಲ್​ನಲ್ಲಿ 100ಕ್ಕೂ ಹೆಚ್ಚು ಫೋಟೋಗಳು ಪತ್ತೆಯಾಗಿವೆ.

ಈತ ಶೌಚಕ್ಕೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಖಾಸಗಿ ಅಂಗಾಂಗದ ಫೋಟೋ ತೆಗೆದುಕೊಂಡು ಬರುವಂತೆ ಹೇಳುತ್ತಿದ್ದನು. ಈ ಫೋಟೋಗಳನ್ನು ತನ್ನ ಮೊಬೈಲ್​ನಲ್ಲಿ ಸೇವ್​​ ಮಾಡಿಕೊಂಡಿದ್ದನು.

ಶಿಕ್ಷಕ ಕಳೆದ ಒಂದು ವರ್ಷದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ. ಓರ್ವ ವಿದ್ಯಾರ್ಥಿನಿ ತಾಯಿಯ ಮುಂದೆ ದೌರ್ಜನ್ಯದ ಬಗ್ಗೆ ಹೇಳಿದಾಗ, ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನು ಓದಿ : Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

ಆರೋಪಿ ಶಿಕ್ಷಕನ ​ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತ ಶಿಕ್ಷಕ ಮೊಹಮ್ಮದ್​ ಸಾದಿಕ್ ಮಿಯಾ ಬೇಗ್ ಸೇವೆಯಿಂದ ಅಮಾನತ್ತು ಮಾಡಿ ಚಿಕ್ಕೋಡಿ ಡಿಡಿಪಿಐ ಬಿ.ಎ ಮೇಕನಮರಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img