ಜನಸ್ಪಂದನ ನ್ಯೂಸ್, ಡೆಸ್ಕ್ : ಲಾಡ್ಜ್, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಸೆಕ್ಸ್ ದಂಧೆ ಪ್ರಕರಣಗಳು ಹೆಚ್ಚುತ್ತಿವೆ. ಹಣ ಸಂಪಾದನೆಗಾಗಿ ಹಲವರು ಈ ದಂಧೆಯಲ್ಲಿ ತೊಡಗುತ್ತಾರೆ. ಇದೀಗ ಇಂತಹದ್ದೇ ಘಟನೆ ವಾರಾಣಾಸಿಯ ಹೋಟೆಲ್‍ವೊಂದರಲ್ಲಿ ನಡೆದಿದೆ.
ವಾರಣಾಸಿ ಪೊಲೀಸ್ ಕಮಿಷನರೇಟ್ ರಂಜಿತ್ ಹೋಟೆಲ್‍ನಲ್ಲಿ ಸೆಕ್ಸ್ ದಂಧೆಯನ್ನು ಪತ್ತೆಹಚ್ಚಿದ್ದು, ಅಲ್ಲಿದ್ದ 20 ಮಂದಿ ಯುವಕ, ಯುವತಿಯರನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ : Video : ಟವೆಲ್ ಸುತ್ತಿಕೊಂಡು ಬೀದಿ ಬೀದಿ ಸುತ್ತಾಟ ; ಎಲ್ಲರ ಮುಂದೆ ಬಿಚ್ಚೆಬಿಟ್ಳು ಯುವತಿ.!
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಹೋಟೆಲ್‍ನ ಮೇಲೆ ದಾಳಿ ನಡೆಸಿದರು. ಆಗ ಅಲ್ಲಿ ದಂಧೆಯಲ್ಲಿ ತೊಡಗಿದ್ದ 10 ಮಂದಿ ಯುವಕರು ಹಾಗೂ 10 ಮಂದಿ ಯುವತಿಯರು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾದ ಎಡಿಸಿಪಿ ನೀತು ಕುಮಾರಿ ಅವರು, ರಂಜಿತ್ ಹೋಟೆಲ್‍ನಲ್ಲಿ ಯುವಕರು ಮತ್ತು ಯುವತಿಯರು ಸೆಕ್ಸ್ ರಾಕೆಟ್‍ನಲ್ಲಿ ಭಾಗಿಯಾಗಿರಬಹುದು ಎಂದು ನಮಗೆ ಮಾಹಿತಿ ಬಂದಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ, ರೂಂನಲ್ಲಿ ಕನಿಷ್ಠ 10 ಹುಡುಗಿಯರು ಮತ್ತು ಅಷ್ಟೇ ಸಂಖ್ಯೆಯ ಹುಡುಗರು ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಇದನ್ನು ಓದಿ : Lokayukta trap : ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ.!
ಅಲ್ಲದೇ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದರಿಂದ ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದವರನ್ನು ಎಚ್ಚರಿಸಲು ಅವಕಾಶ ಸಿಗಲಿಲ್ಲ. ಆದರೆ ಹೋಟೆಲ್ ಸಿಬ್ಬಂದಿ ತಕ್ಷಣ ಎಲ್ಲಾ ರೂಂಗಳಿಗೆ ಬೀಗ ಹಾಕಿದ್ದಾರೆ.
ಆದರೆ ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಪೊಲೀಸರು ಹೋಟೆಲ್ ಸಿಬ್ಬಂದಿಗೆ ಆ ರೂಂಗಳನ್ನು ತೆರೆಯಲು ಹೇಳಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ನೆಟ್‍ವರ್ಕ್ ಡಿವಿಆರ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದೇ ರೀತಿಯ ಪ್ರಕರಣ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಆರೋಪದ ಮೇಲೆ 23 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನು ಓದಿ : Special news : ಇಲ್ಲಿ ಮದುವೆಗೂ ಮುಂಚೆಯೇ ತಾಯಿ ಆಗ್ತಾರೆ ಹೆಣ್ಣು ಮಕ್ಕಳು ; ಭಾರತದ ಈ ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ.!
ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಭಿವಾಂಡಿಯ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಶಂಕಿತನನ್ನು ಬಂಧಿಸಿದ್ದು, 22 ಮತ್ತು 28 ವರ್ಷದ ಇತರ ಇಬ್ಬರು ಮಹಿಳೆಯರನ್ನು ರಕ್ಷಿಸಿ ಅವರನ್ನು ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ