Tuesday, September 17, 2024
spot_img
spot_img
spot_img
spot_img
spot_img
spot_img
spot_img

ಮೊಬೈಲ್ ಬಳಸಿದ್ರೆ ಬರುತ್ತದೆಯೇ ಬ್ರೈನ್ Cancer.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಹಿಂದೆ ಊಟ, ಬಟ್ಟೆ ಮತ್ತು ಮನೆ ಪ್ರಮುಖ ಮೂಲಭೂತ ಅವಶ್ಯಕತೆಗಳಾಗಿದ್ದವು. ಇಂದು ಮೊಬೈಲ್ ಕೂಡ ಇದಕ್ಕೆ ಸೇರ್ಪಡೆಯಾಗಿದೆ.

ಆದರೆ ಸ್ಮಾರ್ಟ್‌ ಫೋನ್‌ಗಳ ಬಳಕೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ತಜ್ಞರು ಹೇಳುತ್ತಾರೆ.

ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

1994 ಮತ್ತು 2022 ರ ನಡುವೆ ನಡೆಸಿದ 63 ಅಧ್ಯಯನಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ, ಸಂಶೋಧನೆಯ ಭಾಗವಾಗಿ, ಆಸ್ಟ್ರೇಲಿಯಾ ಸರ್ಕಾರದ ವಿಕಿರಣ ಸಂರಕ್ಷಣಾ ಪ್ರಾಧಿಕಾರದ ತಜ್ಞರು ಸೇರಿದಂತೆ ಹತ್ತು ದೇಶಗಳ 11 ಸಂಶೋಧಕರು ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ.

ಮೊಬೈಲ್ ಫೋನ್‌ಗಳು, ಟಿವಿಗಳು, ಬೇಬಿ ಮಾನಿಟರ್‌ಗಳು ಮತ್ತು ರೇಡಾರ್‌ಗಳಂತಹ ಸಾಧನಗಳಲ್ಲಿ ಬಳಸುವ ರೇಡಿಯೊಫ್ರೀಕ್ವೆನ್ಸಿ ವಿಕಿರಣದ ಪರಿಣಾಮಗಳ ಮೇಲೆ ಸಂಶೋಧಕರು ಕೇಂದ್ರೀಕರಿಸಿದರು.

ಇದನ್ನು ಓದಿ : Special news : ನಿಮಗೆ ಗೊತ್ತೇ ಕಪ್ಪು ಹಾಲು ಕೊಡುವ ಪ್ರಾಣಿ ಯಾವುದು ಅಂತಾ.?

ಮೊಬೈಲ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧ ಬಹಿರಂಗವಾಗಿಲ್ಲ. ಹೀಗಾಗಿ ಮೊಬೈಲ್ ಫೋನ್ ಬಳಕೆ ಮತ್ತು ಮೆದುಳಿನ ಕ್ಯಾನ್ಸರ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯೂ ಇದೇ ವಿಷಯವನ್ನು ಬಹಿರಂಗಪಡಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದರೂ, ಮಿದುಳಿನ ಕ್ಯಾನ್ಸರ್ ಪ್ರಕರಣಗಳು ಅದೇ ಮಟ್ಟದಲ್ಲಿ ಹೆಚ್ಚಿಲ್ಲ.

ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?

ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಮೊಬೈಲ್ ಬಳಸುತ್ತಿರುವವರು, ಮೊಬೈಲ್ ಫೋನ್​​ನೊಂದಿಗೆ ಹೆಚ್ಚು ಸಮಯ ಕಳೆಯುವವರಲ್ಲಿ ಮೆದುಳಿನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.

ಇನ್ನೂ ಮನುಷ್ಯರ ಮೇಲೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳು ಇದಕ್ಕೆ ಕೆಲವೊಂದು ಸಂಬಂಧವನ್ನು ಒದಗಿಸಿಕೊಟ್ಟಿದೆ. ಆದರೆ ಕೆಲವು ಸಾಕ್ಷ್ಯಗಳು ಇಲ್ಲವಾಗಿದೆ. ಮೆದುಳಿನ ಗಡ್ಡೆಗೆ ಒಳಗಾಗಿರುವಂತಹ ಜನರು ಬೇರೆ ಜನರಷ್ಟು ಮೊಬೈಲ್ ಫೋನ್ ನ್ನು ಬಳಕೆ ಮಾಡಿದವರಲ್ಲ ಮತ್ತು ಮೆದುಳಿನ ಗಡ್ಡೆಯು ಮೊಬೈಲ್ ಫೋನ್ ಹಿಡಿಯು ಬದಿಯಲ್ಲೇ ಬೆಳೆಯುವುದು ಎನ್ನುವುದಕ್ಕೆ ಕೂಡ ಯಾವುದೇ ಸಾಕ್ಷ್ಯಗಳು ಇಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img