Thursday, April 25, 2024
spot_img
spot_img
spot_img
spot_img
spot_img
spot_img

ವಿದ್ಯಾರ್ಥಿನಿಯರಿಗೆ ಎಂಥಾ ಫೋಟೋ ಕಳುಹಿಸುತ್ತಿದ್ದ ಗೊತ್ತೇ,? ಈ ಪ್ರೊಬೇಷನರಿ ಪಿಎಸ್ಐ.!

spot_img

ಜನಸ್ಪಂದನ ನ್ಯೂಸ್, ಚಾಮರಾಜನಗರ : ಚಾಮರಾಜನಗರದಲ್ಲಿ ಪ್ರೊಬೇಷನರಿ ಪಿಎಸ್ಐವೋರ್ವ ವಿದ್ಯಾರ್ಥಿನಿಯರನ್ನು (college students) ಮಂಚಕ್ಕೆ ಕರೆಯುತ್ತಾನೆ ಎಂದು ಆರೋಪಿಸಲಾಗಿದ್ದು, ಈ ಕುರಿತು ದೂರು ದಾಖಲಾಗಿದೆ.

ಪಿಎಸ್ಐ ಜಗದೀಶ್ ಎಂಬಾತ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂದು ಆರೋಪಿಸಲಾಗಿದೆ. ಈತ ಚಾಮರಾಜನಗರದ ಎಸ್ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಇದನ್ನು ಓದಿ : Video : ಆಟವಾಡಲು ಹೋಗಿ ಈಜುಕೊಳದಲ್ಲಿ ಮುಳುಗುತ್ತಿದ್ದ ಪುಟ್ಟ ತಂಗಿಯ ಪ್ರಾಣ ಉಳಿಸಿ ಅಣ್ಣ.!

ಪಿಎಸ್ಐ ಜಗದೀಶ್ ಫೇಸ್‍ಬುಕ್ ಮೂಲಕ ಮೈಸೂರು (Mysore) ಮೂಲದ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಈ ರೀತಿ ವರ್ತಿಸಿದ್ದಾನೆ.

ಮೊದಲು ಫೇಸ್‍ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ (friend request) ಕಳಿಸುತ್ತಿದ್ದ. ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದ ತಕ್ಷಣ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದ. ಬಳಿಕ ವಾಟ್ಸಪ್ ಮೂಲಕ ದಿನನಿತ್ಯ ವಿದ್ಯಾರ್ಥಿನಿಯರಿಗೆ ಟಾರ್ಚರ್ ಕೊಡುತ್ತಿದ್ದ ಎನ್ನಲಾಗಿದೆ.

ಲವ್ ಮಾಡು, ಹೊರಗೆ ಸುತ್ತಾಡಲು ಹೋಗೋಣ, ಮಜಾ ಮಾಡೋಣ ಅಂತ ಸಂದೇಶ (message) ಕಳಿಸುತ್ತಿದ್ದನಂತೆ. ನಾ ಹೇಳಿದ ಹಾಗೆ ಕೇಳದಿದ್ರೆ ಸರಿ ಇರೋಲ್ಲ ಅಂತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಂತೆ. ಈ ರೀತಿ ಹೇಳಿ ಹಣ ಸಹ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ : ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ; Video Viral.!

ಸದ್ಯ ಮೈ ಜಿ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದವರು ಮೈಸೂರಿನ ಐಜಿ ಕಚೇರಿಗೆ ವಿದ್ಯಾರ್ಥಿನಿಯರ ಪರ ದೂರು (complaint) ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆಗೆ ಆದೇಶಿಸಿದ್ದಾರೆ.

spot_img
spot_img
spot_img
- Advertisment -spot_img