Thursday, April 25, 2024
spot_img
spot_img
spot_img
spot_img
spot_img
spot_img

Girl : ಹೆಣ್ಣು ಮಗು ಹುಟ್ಟಿದರೆ ಸಾಕು ಸಂಭ್ರಮಾಚರಣೆಯನ್ನೇ ಮಾಡ್ತಾರೆ, ಏಕೆ ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ (Feticide) ಪ್ರಕರಣಗಳು ಹೆಚ್ಚುತ್ತಿವೆ. ಆದರೆ  ಅಲ್ಲೊಂದು ಸಮುದಾಯ ಇದೆ ಅಲ್ಲಿ ಹೆಣ್ಣು ಮಗು ಹುಟ್ಟಿದರೆ ಸಾಕು ಸಂಭ್ರಮಾಚರಣೆಯನ್ನೇ ಮಾಡುತ್ತಾರೆ.

ಇದು ಅಚ್ಚರಿಗೊಂಡ್ರೂ ಸಹ ಸತ್ಯವೇ ಆಗಿದೆ. ಆದರೆ ಇದು ಎಲ್ಲರಿಗೂ ಮಾದರಿ ಸಮುದಾಯ ಎಂದು ಭಾವಿಸಬೇಡಿ, ಇಲ್ಲಿ ನಿಮ್ಮ ಊಹೆ ತಪ್ಪುತ್ತದೆ. ಏಕೆಂದರೆ ಈ ಸಂಭ್ರಮಾಚರಣೆಯ ಹಿಂದೆ ಒಂದು ಕರಾಳ ಸತ್ಯವೂ ಸಹ ಅಡಗಿದೆ.

ಇದನ್ನು ಓದಿ : ನಡುರೋಡಲ್ಲೇ ಹಸ್ತಮೈಥುನ ಮಾಡಿ ಐಸ್‌ಕ್ರೀಂಗೆ ವೀರ್ಯ ಬೆರೆಸಿದ ಮಾರಾಟಗಾರ ; Video Viral.!

ಈಗ ನಾವು ಹೇಳುತ್ತಿರುವ ಘಟನೆ ಬೇರೆ ದೇಶದಲ್ಲಿ ಅಲ್ಲಾ, ಮೇಲಾಗಿ ನಮ್ಮ ದೇಶದ ಮಧ್ಯಪ್ರದೇಶದ (Madhya Pradesh) ಬಂಚದ ಸಮುದಾಯದಲ್ಲಿ ಈ ಆಚರಣೆ ಇದೆ. ಈ ಸಮುದಾಯದಲ್ಲಿ ಹೆಣ್ಣು ಮಗು ಜನಿಸಿದರೆ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ, ಆ ಸಂಭ್ರಮಾಚರಣೆಯು ಹುಟ್ಟಿದ  ಹೆಣ್ಣು ಮಗುವನ್ನು ಆದಷ್ಟು ಬೇಗ ಅವರನ್ನು ನರಕಕ್ಕೆ ದೂಡುತ್ತದೆ. ಏಕೆಂದರೆ, ಈ ಸಮುದಾಯದಲ್ಲಿ ಹಲವಾರು ಜನರು ಲೈಂಗಿಕ ಕಾರ್ಯಕರ್ತೆಯರು ಆಗಿದ್ದಾರೆ.

ವೇಶ್ಯಾವಾಟಿಕೆಯೇ (Prostitution) ಜೀವನದ ಆಧಾರವಾಗಿರುವ ಬಂಚದ ಸಮುದಾಯದಲ್ಲಿ ಹೆಣ್ಣು ಮಗುವಿನ ಜನನವನ್ನು ಆಚರಿಸಲಾಗುತ್ತದೆ.

ಮಧ್ಯಪ್ರದೇಶದ ರಾಟ್ಲಮ್​, ಮಂದಸೂರ್​ ಮತ್ತು ನೀಮುಚ್​ ಜಿಲ್ಲೆಗಳಲ್ಲಿ ಈ ಬಂಚದ ಸಮುದಾಯ ಕಂಡುಬರುತ್ತದೆ. ತಲೆಮಾರುಗಳಿಂದ ಜೀವನೋಪಾಯಕ್ಕಾಗಿ ಈ ಸಮುದಾಯ ವೇಶ್ಯಾವಾಟಿಕೆ ನಡೆಸುತ್ತಿದೆ.

ಇನ್ನೂ ಇಲ್ಲಿಯ ಗಂಡಸರ ತಮ್ಮ ಜೀವನಕ್ಕಾಗಿ ಹೆಣ್ಣಿನ ಆದಾಯವನ್ನೇ ಅವಲಂಬಿಸಿದ್ದಾರೆ. ವೇಶ್ಯಾವಾಟಿಕೆ ಅಪರಾಧವಾಗಿದ್ದರೂ, ಈ ವೃತ್ತಿಯನ್ನು ಇಲ್ಲಿನ ಸಮುದಾಯವು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಇದನ್ನು ಓದಿ : Strange Complaint : ಪಕ್ಕದ ಮನೆ ದಂಪತಿಗಳ ಸರಸ ಸಲ್ಲಾಪದಿಂದ ಕಿರಿಕಿರಿ ; ಪೊಲೀಸ್ ಠಾಣೆಗೆ ದೂರು.!

ಇಲ್ಲಿ ಲೈಂಗಿಕತೆಗಾಗಿ ಮಾನವ ಕಳ್ಳಸಾಗಣೆ ಕೂಡ ಸಕ್ರಿಯವಾಗಿದೆ. ಸಮುದಾಯದ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮಾರಾಟವಾಗುತ್ತಿರುವ ಬಗ್ಗೆ ವರದಿಗಳಿವೆ.

ಸಮುದಾಯದಲ್ಲಿ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ, ಈ ದುಷ್ಕೃತ್ಯಗಳನ್ನು ತೊಡೆದುಹಾಕಲು ಸಾಮಾಜಿಕ ಜಾಗೃತಿ ಅಗತ್ಯ ಎಂದು ಪೊಲೀಸರು ಹೇಳುತ್ತಾರೆ. (ಎಜೇನ್ಸಿಸ್)

spot_img
spot_img
spot_img
- Advertisment -spot_img