Thursday, April 25, 2024
spot_img
spot_img
spot_img
spot_img
spot_img
spot_img

ನಡುರೋಡಲ್ಲೇ ಹಸ್ತಮೈಥುನ ಮಾಡಿ ಐಸ್‌ಕ್ರೀಂಗೆ ವೀರ್ಯ ಬೆರೆಸಿದ ಮಾರಾಟಗಾರ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಮ್‌ ಮಾರಾಟ ಮಾಡುವ ವ್ಯಾಪಾರಿಯೊಬ್ಬ ಹಸ್ತಮೈಥುನ (masturbation) ಮಾಡಿ ವೀರ್ಯವನ್ನು ಐಸ್‌ಕ್ರೀಮ್‌ಗೆ ಮಿಕ್ಸ್‌ ಮಾಡಿದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ ಜಿಲ್ಲೆಯ ನೆಕ್ಕೊಂಡಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಆಘಾತಕಾರಿ ಘಟನೆಯ (shocking incident) ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮರೆಯಲ್ಲಿ ನಿಂತು ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ದೃಶ್ಯ ನೋಡಿದವರು ಒಂದು ಕ್ಷಣ ದಂಗಾಗಿದ್ದಾರೆ. ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನು ಓದಿ : ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಚಾಲನೆಯಲ್ಲಿವೆ ಗೊತ್ತೇ.? ಹೀಗೆ ಪರಿಶೀಲಿಸಿ.!

ರಸ್ತೆ ಬದಿಯಲ್ಲೇ ಇರುವ ವ್ಯಾಪಾರಿ ಹಸ್ತಮೈಥುನ ಮಾಡಿ ವೀರ್ಯವನ್ನು ಐಸ್‌ಕ್ರೀಮ್‌ಗೆ ಮಿಕ್ಸ್‌ ಮಾಡುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ.

ಈ ಅಸಹ್ಯಕರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ (public) ಆರೋಗ್ಯವನ್ನು ಕಾಪಾಡುವ ಭರವಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಈಗಾಗಲೇ ಐಸ್‌ಕ್ರೀಮ್‌ ಮಾರಾಟಗಾರನ ಕುರಿತು ದೂರು (complaint) ದಾಖಲಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಐಸ್‌ಕ್ರೀಮ್ ಸ್ಟಾಲ್ ಮೇಲೆ ದಾಳಿ ನಡೆಸಿದ್ದಾರೆ. ಮಾರಾಟಗಾರನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ : Health : ಕೈಯಿಂದ ಊಟ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಅಲ್ಲದೇ ಕಲುಷಿತ ಐಸ್‌ಕ್ರೀಮ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದ ಹಲವರನ್ನು ಬಂಧಿಸಲಾಗಿದೆ. ಅಧಿಕಾರಿಗಳು ಅವರ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
spot_img
- Advertisment -spot_img