Thursday, April 25, 2024
spot_img
spot_img
spot_img
spot_img
spot_img
spot_img

Strange Complaint : ಪಕ್ಕದ ಮನೆ ದಂಪತಿಗಳ ಸರಸ ಸಲ್ಲಾಪದಿಂದ ಕಿರಿಕಿರಿ ; ಪೊಲೀಸ್ ಠಾಣೆಗೆ ದೂರು.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ (Bangalore) ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪಕ್ಕದ ಮನೆಯ ದಂಪತಿ ಸರಸ ಸಲ್ಲಾಪದಿಂದ ಕಿರಿಕಿರಿಯಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ನೀಡಿರುವ ವಿಚಿತ್ರ ಘಟನೆ ಜರುಗಿದೆ.

ಆವಲಹಳ್ಳಿ, ಬಿಡಿಎ ಲೇಔಟ್​ ನಲ್ಲಿ ವಾಸವಾಗಿರುವ 44 ವರ್ಷದ ಮಹಿಳೆಯೊಬ್ಬರು ದೂರು ದಾಖಲಸಿದ್ದಾರೆ.

ಇದನ್ನು ಓದಿ : Tea ಕುಡಿಸಿಕೊಂಡು ಬರೋದಾಗಿ ಹೇಳಿ ಹಾಸ್ಟೆಲ್‌ನ​ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ.!

ಮಹಿಳೆಯ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್​ ರೂಮ್​ ಇದೆ. ಪಕ್ಕದ ಮನೆಯಲ್ಲಿ ವಾಸವಾಗಿರುವ ದಂಪತಿ ಬೆಡ್ ರೂಮ್ ಕಿಟಕಿ (window) ತೆರೆದು ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ.

ಇದರಿಂದಾಗಿ ಬಹಳ ಮುಜುಗರಕ್ಕೆ (Embarrassingly) ಒಳಗಾಗಿ ಮಹಿಳೆ, ದಯವಿಟ್ಟು ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಿಂದಿಸಿದ್ದಾನೆ ಎನ್ನಲಾಗಿದೆ.

ಅಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಕೊಲೆ, ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕೆಲವು ಯುವಕರನ್ನು ಕರೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ‌ ಹಾಗೂ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ಇವರಿಂದ ಸೂಕ್ತ ರಕ್ಷಣೆ ನೀಡಿ ಮತ್ತು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲಾಗಿದೆ.

spot_img
spot_img
spot_img
- Advertisment -spot_img