Thursday, April 25, 2024
spot_img
spot_img
spot_img
spot_img
spot_img
spot_img

Tea ಕುಡಿಸಿಕೊಂಡು ಬರೋದಾಗಿ ಹೇಳಿ ಹಾಸ್ಟೆಲ್‌ನ​ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ.!

spot_img

ಜನಸ್ಪಂದನ ನ್ಯೂಸ್, ರಾಮನಗರ : ರಾಮನಗರ ಜಿಲ್ಲೆಯ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಸ್ಟೆಲ್‌ನಿಂದ (hostels) ಕರೆದೊಯ್ದು 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 36 ವರ್ಷದ ಕಾಮುಕ ಲೈಂಗಿಕ ಕಿರುಕುಳ ನೀಡಲಾಗಿರುವ ಘಟನೆ ನಡೆದಿದೆ.

ಟೀ ಕುಡಿಸಿಕೊಂಡು ಬರುತ್ತೇನೆ ಅಂತ ಹೇಳಿ ಅಪ್ರಾಪ್ತೆಯನ್ನು ಹಾಸ್ಟೆಲ್​ನಿಂದ ಕರೆದುಕೊಂಡು ಹೋಗಿ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ (sexual harassment) ನೀಡಿದ್ದಾನೆ ಎನ್ನಲಾಗಿದೆ.

Apex : ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನು ಅಪರಿಚಿತ ವ್ಯಕ್ತಿ ಬಾಲಕಿಯನ್ನು ಕರೆದುಕೊಂಡು ಹೋಗಿ ಬಹಳ ಹೊತ್ತಾದರೂ ವಾಪಸ್ಸಾಗದ ಹಿನ್ನೆಲೆ ಹಾಸ್ಟೆಲ್ ಸಿಬ್ಬಂದಿ ಕುಟುಂಬಸ್ಥರಿಗೆ ಕರೆ (call) ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲದೆ ವ್ಯಕ್ತಿಯ ಹಾವಭಾವ ಕಂಡು ಸಿಬ್ಬಂದಿಗೆ ಸಂಶಯ ಬಂದಿದೆ.

ಸದ್ಯ ಪೋಷಕರು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆರೋಪಿ ಅಪ್ರಾಪ್ತಳನ್ನು ಮಾವಿನ‌ ತೋಪಿಗೆ ಕರೆದೊಯ್ದಿದ್ದ. ಕೃತ್ಯ ನಡೆದ ಸ್ಥಳಕ್ಕೆ ತೆರಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Accident : ಭೀಕರ ರಸ್ತೆ ಅಪಘಾತ : ಜೀವನ್ಮರಣ ಹೋರಾಟದಲ್ಲಿ ಖ್ಯಾತ ನಟಿ.!

ಆರೋಪಿ ಬಾಲಕಿಯನ್ನು ಒಂದು ವರ್ಷದಿಂದ ಲೈಂಗಿಕ‌ವಾಗಿ ಬಳಸಿಕೊಂಡಿರುವ ಆರೋಪ ಬೇರೆ ಕೇಳಿ ಬಂದಿದೆ.

ರಾಮನಗರ ಮಹಿಳಾ‌ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ‌ ಪ್ರಕರಣ (POCSO case) ದಾಖಲಿಸಲಾಗಿದೆ.

spot_img
spot_img
spot_img
- Advertisment -spot_img