Thursday, April 25, 2024
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ಒಣ ಕೊಬ್ಬರಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಎಲ್ಲರೂ ನೀರಿರುವ ತೆಂಗಿನಕಾಯಿ ತಿನ್ನಲು ಇಷ್ಟಪಡುತ್ತಾರೆ. ಒಣ ಕೊಬ್ಬರಿ ತಿನ್ನಲು ಹಿಂಜರಿಯುತ್ತಾರೆ. ಆದರೆ ಒಣ ಕೊಬ್ಬರಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ (health benefits).

ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೇನಿಯಂ ಎನ್ನುವ ಪೋಷಕಾಂಶಗಳಿವೆ. ಇದು ಆರೋಗ್ಯ ವರ್ಧನೆಗೆ ನೆರವಾಗುತ್ತದೆ. ದಿನವೊಂದಕ್ಕೆ 20ರಿಂದ 25 ಗ್ರಾಂನಷ್ಟು ಕೊಬ್ಬರಿಯನ್ನು ಚಿಕ್ಕ ತುಂಡುಗಳನ್ನಾಗಿ ಜಗಿದು (chew) ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡರೆ, ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

ಹಾಗಾದ್ರೆ ಬನ್ನಿ ಬೆಳಿಗ್ಗೆ ಒಣ ಕೊಬ್ಬರಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ.

ಇದನ್ನು ಓದಿ : ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

* ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಫೈಬರ್‌ನಲ್ಲಿ (fiber) ಒಣ ಕೊಬ್ಬರಿ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

* ಒಣ ಕೊಬ್ಬರಿ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚುವುದಲ್ಲದೆ, ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

* ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕ.

* ಜೀರ್ಣಕಾರಿ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

* ಒಣ ಕೊಬ್ಬರಿ ಸೇವನೆಯಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿ ಹೇರಳವಾಗಿ ಕಬ್ಬಿಣಾಂಶ (iron content) ಇದ್ದು, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

* ಇದು ಮೂಳೆಗಳನ್ನು ಬಲಪಡಿಸುತ್ತದೆ. ಒಣ ಕೊಬ್ಬರಿ ತಿನ್ನುವುದರಿಂದ ಕೀಲು ನೋವು ಮತ್ತು ಊತವನ್ನು ಸಹ ಕಡಿಮೆ ಮಾಡಬಹುದು.

* ಒಣ ಕೊಬ್ಬರಿಯಲ್ಲಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುತ್ತವೆ. ಜೊತೆಗೆ ಫೀನಾಲಿಕ್ ಸಂಯುಕ್ತಗಳನ್ನು (phenolic compounds) ಹೊಂದಿರುತ್ತದೆ. ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ತಡೆಯುತ್ತದೆ.

ಇದನ್ನು ಓದಿ : Water : ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯುತ್ತಿದ್ದೀರಾ.? ಹಾಗಿದ್ರೆ ಸೇವಿಸಿ ಈ ಆಹಾರ ಪದಾರ್ಥಗಳನ್ನ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img