Saturday, July 27, 2024
spot_img
spot_img
spot_img
spot_img
spot_img
spot_img

Water : ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯುತ್ತಿದ್ದೀರಾ.? ಹಾಗಿದ್ರೆ ಸೇವಿಸಿ ಈ ಆಹಾರ ಪದಾರ್ಥಗಳನ್ನ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಸಿಗೆ ಕಾಲದಲ್ಲಿ ಪ್ರತಿದಿನ ಸಾಕಷ್ಟು ನೀರು (water) ಸೇವಿಸುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹೆಚ್ಚಿನ ಜನರು ಪ್ರತಿದಿನ 6ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕು ಎಂದು ಹೇಳುತ್ತಾರೆ. ಆದರೆ, ಅಷ್ಟು ನೀರು ಕುಡಿಯಲು ಆಗದಿದ್ರೆ ನೀರಿನಂಶ ಹೆಚ್ಚಿರುವ ಆಹಾರದ ಮೂಲಕ, ಹಣ್ಣುಗಳ ಮೂಲಕ, ಪಾನೀಯಗಳ ಮೂಲಕ ನಮ್ಮ ದೇಹವನ್ನು ಹೈಡ್ರೇಟ್ (hydrated) ಮಾಡಿಕೊಳ್ಳಬಹುದು.

ಇದನ್ನು ಓದಿ : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ ; ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಹಾಗಾದ್ರೆ ಬನ್ನಿ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡುವ ಆಹಾರ ಪದಾರ್ಥಗಳು ಯಾವುವು ಅಂತ ತಿಳಿಯೋಣ.

* ಕಲ್ಲಂಗಡಿ ಹಣ್ಣಿನಲ್ಲಿ ಶೇ. 90ರಷ್ಟು ನೀರು ಇರುತ್ತದೆ. ಇದು ಬೇಸಿಗೆಯ ಅಜೀರ್ಣವನ್ನು (indigestion) ತಡೆಯುತ್ತದೆ.

* ಟೊಮ್ಯಾಟೋ ಹಣ್ಣುಗಳು ಆ್ಯಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ನೀರಿನಂಶ ಇರುವ ಸಮೃದ್ಧವಾದ ತರಕಾರಿಯಾಗಿದೆ.

* ಮೊಸರು ಒಂದು ರಿಫ್ರೆಶ್ ಪ್ರೋಬಯಾಟಿಕ್ ಆಗಿದ್ದು, ಇದು ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು (Gut health) ಹೆಚ್ಚಿಸುತ್ತದೆ.

* ಎಳನೀರು ಸಮೃದ್ಧವಾದ ಆಹಾರ ಎನ್ನಬಹುದು. ಬೇಸಿಗೆಯಲ್ಲಿ ತುಂಬಾ ಆರೋಗ್ಯಕರವಾಗಿದೆ.

* ಬೇಸಿಗೆಯಲ್ಲಿ ನಿಂಬೆ ಜ್ಯೂಸ್ (Lemon juice) ಕುಡಿಯುವುದರಿಂದ ಕರುಳಿನ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

* ಸೌತೆಕಾಯಿ (Cucumber) ರಿಫ್ರೆಶ್ ತರಕಾರಿಯಾಗಿದ್ದು, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುವ ನೀರು, ಫೈಬರ್ ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.

ಇದನ್ನು ಓದಿ : ಬೆಳಿಗ್ಗೆ ರಾಗಿ ಅಂಬಲಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

* ಹಸಿರು ಸೊಪ್ಪುಗಳು (Green vegetables) ನೀರು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿವೆ ಮತ್ತು ಉತ್ತಮ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img