Saturday, July 27, 2024
spot_img
spot_img
spot_img
spot_img
spot_img
spot_img

ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ ; ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹದಲ್ಲಿ ಯಾವುದೇ ಕಾಯಿಲೆ ಕಾಣಿಸಿಕೊಂಡಾಗ ದೇಹ ಅದರ ಮುನ್ಸೂಚನೆಯನ್ನು (forecast) ನೀಡಲು ಆರಂಭಿಸುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು.

ಡಯಾಬಿಟಿಸ್ ಕಾಯಿಲೆ ನಮ್ಮನ್ನು ಬಾಧಿಸಲು ಆರಂಭವಾದರೆ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ (care) ವಹಿಸಬೇಕಾಗುತ್ತದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತದೆ.?

ಮಧುಮೇಹದ ಆರಂಭದ ಹಂತದಲ್ಲಿಯೇ ಪಾದಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಚರ್ಮ ಗಟ್ಟಿಯಾಗುವುದು :
ಪಾದಗಳು ಮತ್ತು ಅಡಿಭಾಗದ ಚರ್ಮವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಚಪ್ಪಲಿ ಕಾರಣದಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪಾದಗಳ ಮತ್ತು ಅಡಿಭಾಗದ ಚರ್ಮ ಗಟ್ಟಿಯಾಗುತ್ತಿದ್ದರೆ (strong) ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಿಸುವುದು ಸೂಕ್ತ .

ಪಾದಗಳಲ್ಲಿ ನೋವು :
ನರಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ಕಾಲುಗಳು ಊದಿಕೊಳ್ಳಬಹುದು. ಕೆಲವೊಮ್ಮೆ ಕಾಲುಗಳು ಮರಗಟ್ಟಿದರೆ, ಕೆಲವೊಮ್ಮೆ ಇದ್ದಕ್ಕಿದ್ದಂತೆ ಬಲ ಇಲ್ಲದಂತೆ ಆಗಿ ಬಿಡುತ್ತದೆ.

ಪಾದಗಳಲ್ಲಿ ಹುಣ್ಣು :
ಫುಟ್ ಅಲ್ಸರ್ (ulcer) ಕಾಣಿಸಿಕೊಂಡಾಗ ಪಾದಗಳಲ್ಲಿ ಗಾಯಗಳು ಏಳಲು ಶುರುವಾಗುತ್ತದೆ. ಹೀಗಾದಾಗ ಕೆಲವೊಮ್ಮೆ ಚರ್ಮವು ಕೂಡಾ ಕಿತ್ತು ಬರುತ್ತದೆ.

ಈ ರೋಗವು ಮಿತಿ ಮೀರಿ ಮುಂದುವರಿದರೆ, ಕಾಲು ಕತ್ತರಿಸಬೇಕಾದ ಪ್ರಮೇಯ ಕೂಡ ಎದುರಾಗಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ಮಧುಮೇಹವನ್ನು ಗುರುತಿಸುವುದು ಬಹಳ ಮುಖ್ಯ.

ಉಗುರಿನ ಬಣ್ಣದಲ್ಲಿ ಬದಲಾವಣೆ :
ಮಧುಮೇಹ ಬಂದಾಗ, ಕಾಲ್ಬೆರಳ ಉಗುರುಗಳ ಬಣ್ಣ ಬದಲಾಗುತ್ತದೆ. ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುವ ನಮ್ಮ ಉಗುರುಗಳು (nail’s) ಇದ್ದಕ್ಕಿದ್ದಂತೆ ಕಪ್ಪಾಗಲು ಪ್ರಾರಂಭಿಸುತ್ತವೆ. ಉಗುರಿನ ಬಣ್ಣ ಬದಲಾಗುತ್ತಿದ್ದರೆ ಈ ಲಕ್ಷಣವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.

ಇದನ್ನು ಓದಿ : ಬೆಳಿಗ್ಗೆ ಎಷ್ಟು ನಿಮಿಷ ವಾಕಿಂಗ್ ಮಾಡುವುದು ಒಳ್ಳೆಯದು.?

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img