Thursday, April 25, 2024
spot_img
spot_img
spot_img
spot_img
spot_img
spot_img

A/C : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ.?

spot_img

ಜನಸ್ಪಂದನ ನ್ಯೂಸ್, ವಿಶೇಷ : ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಅಕೌಂಟ್ (Bank Account) ಇರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೂಡ ಇದಕ್ಕೆ ನೆರವಾಗಲಿ ಎಂದು ಜೀರೋ ಅಕೌಂಟ್ ಯೋಜನೆ (Zero Account Scheme) ಕೂಡ ಘೋಷಿಸಿದ್ದರು.

ವಿದ್ಯಾರ್ಥಿಗಳಿಂದ ಹಿಡಿದು ಪಿಂಚಣಿ ಪಡೆಯುವ ವೃದ್ಧರವರೆಗೆ, ರೈತರಿಂದ ಹಿಡಿದು ಗೃಹಣಿ ಕಾರ್ಮಿಕರವರೆಗೂ ಪ್ರತಿಯೊಬ್ಬರಿಗೂ ವ್ಯಾಪಾರ ವ್ಯವಹಾರ ಮಾಡಲು ಅಥವಾ ಸಂಬಳ ಪಡೆಯಲು, ಪಿಂಚಣಿ ಪಡೆಯಲು, ವಿದ್ಯಾರ್ಥಿ ವೇತನ ಪಡೆಯಲು ಹೀಗೆ ಹಲವಾರು ಕಾರಣಗಳಿಗಾಗಿ ಪ್ರತಿಯೊಬ್ಬರಿಗೂ ಬ್ಯಾಂಕ್ ಅಕೌಂಟ್ ಬೇಕೇ ಬೇಕು.

ಹಾಗಾದರೆ ಒಬ್ಬರಿಗೆ ಎಷ್ಟು ಬ್ಯಾಂಕ್ ಖಾತೆ ಇರಬೇಕು.?

ಒಬ್ಬರು ಎಷ್ಟು ಬ್ಯಾಂಕ್‌ ಹೋದಬಹುದು.? ಹೆಚ್ಚಿಗೆ ಬ್ಯಾಂಕ್ ಅಕೌಂಟ್ ಇದ್ದರೆ ಸಮಸ್ಯೆ ಆಗುತ್ತದೆಯೇ.? ಈ ಬಗ್ಗೆ RBI ನಿಯಮ ಏನು ಹೇಳಿದೆ.? ಎನ್ನುವುದರ ಬಗ್ಗೆ ಎಲ್ಲರಿಗೂ ಮಾಹಿತಿ ಗೊತ್ತಿರಬೇಕು. ಆ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ : ಬೆನ್ನು ನೋವಿನಿಂದ ಬಳಲುತ್ತಿದ್ದಿರಾ.? : ನಿರ್ಲಕ್ಷ್ಯ ಬೇಡ: ಇಲ್ಲಿದೆ ಸುಲಭ ವಿಧಾನ! 

ಮೊದಲಿಗೆ ಒಂದು ಬ್ಯಾಂಕ್ ಅಕೌಂಟ್ ಇರುವುದರಿಂದ ಏನು ಉಪಯೋಗ, ಹೆಚ್ಚಿಗೆ ಬ್ಯಾಂಕ್ ಅಕೌಂಟ್ ಇರುವುದರಿಂದ ಏನು ಉಪಯೋಗ, ಹಾಗೆ ಇದರ ಅನಾನುಕೂಲತೆಗಳು ಏನು.? ಎನ್ನುವುದನ್ನು ಕೂಡ ತಿಳಿದುಕೊಂಡರೆ ಇದರ ಬಗ್ಗೆ ನಾವೇ ನಿರ್ಧಾರ ಮಾಡಬಹುದು. RBI ಆಗಲಿ ಅಥವಾ ಸರ್ಕಾರವೇ ಆಗಲಿ ಇದರ ಬಗ್ಗೆ ಯಾವುದೇ ಕಂಡೀಶನ್ ಹಾಕಿಲ್ಲ. ಯಾರು ಎಷ್ಟು ಬೇಕಾದರೂ ಬ್ಯಾಂಕ್ ಅಕೌಂಟ್ ತೆರೆಯಬಹುದು.

ಅನುಕೂಲತೆಗಳು ಮತ್ತು ಅನಾನುಕೂಲತೆಗಳು:-

* ನಮ್ಮ ಬಳಿ ಒಂದೇ ಒಂದು ಬ್ಯಾಂಕ್ ಅಕೌಂಟ್ ಇದ್ದರೆ ಈಗ ಎಲ್ಲಾ ಕಡೆ UPI ಟ್ರಾನ್ಸಾಕ್ಷನ್ ಆಗಿರುವುದರಿಂದ ಅದರ ಮೇಲೆ ಡಿಪೆಂಡ್ ಆಗಿ ನಾವು ಕ್ಯಾಶ್ ತೆಗೆದುಕೊಳ್ಳದೆ ಎಲ್ಲಾದರೂ ಶಾಂಪಿಂಗ್ ಮಾಡಿದಾಗ ಸರ್ವರ್ ಡೌನ್ ಇದ್ದರೆ ಸಮಸ್ಯೆ ಆಗುತ್ತದೆ ಆದರೆ ನಮ್ಮ ಬಳಿ ಮಲ್ಟಿಪಲ್ ಅಕೌಂಟ್ ಇದ್ದರೆ ಬೇರೆ ಅಕೌಂಟ್‌ನಿಂದ ಟ್ರಾನ್ಸಾಕ್ಷನ್ ಮಾಡಬಹುದು.

* ಪ್ರತಿಯೊಂದು ಬ್ಯಾಂಕ್ ಅಕೌಂಟ್‌ನಲ್ಲೂ ಕೂಡ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು ಎನ್ನುವ ನಿಯಮ ಇದೆ. 2000 ಯಿಂದ 10,000 ದವರೆಗೆ ಮಿನಿಮಮ್ ಬ್ಯಾಲೆನ್ಸ್ ಮೈನ್ಟೈನ್ ಮಾಡಬೇಕು. ನಮ್ಮ ಬಳಿ ಒಂದು ಅಕೌಂಟ್ ಇದ್ದರೆ ಇದು ಸುಲಭ. ಆದರೆ 6-7 ಅಕೌಂಟ್ ಇದ್ದು ಮಿನಿಮಮ್ ಬ್ಯಾಲೆನ್ಸ್ ರೂ.10,000 ಇದ್ದರೆ ಅದೇ ಕಷ್ಟವಾಗುತ್ತದೆ.

ಇದನ್ನೂ ಓದಿ : ಹೊಸ ರೇಷನ್ ಕಾರ್ಡ್ ವಿತರಣೆಗೆ DATE ಫಿಕ್ಸ್‌ ; ಈಗಲೇ ಅರ್ಜಿ ಸಲ್ಲಿಸಿ.!

* ನಾವು ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡದೆ ಇದ್ದಾಗ ಫೈನ್ ಬೀಳುತ್ತದೆ. ಆಗಲು ನಾವು ಗಮನಿಸದೇ ಮರೆತಾಗ ನಾಲ್ಕೈದು ವರ್ಷ ಬಿಟ್ಟು ಹಣ ಹಾಕಿದರೆ ಬಡ್ಡಿ ಸಮೇತ ಹಣ ಕಟ್ ಆಗಿ ಬಿಡುತ್ತದೆ. ಹಾಗಾಗಿ ಬೇಡದ ಅಕೌಂಟ್‌ಗಳನ್ನು ಅರ್ಜಿ ಕೊಟ್ಟು ಕ್ಲೋಸ್ ಮಾಡಿಸಲೇಬೇಕು.

* ಮಲ್ಟಿಪಲ್ ಬ್ಯಾಂಕ್ ಅಕೌಂಟ್ ಓಪನ್ ಮಾಡುವುದಕ್ಕೆ ಇರುವ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಡೆಬಿಟ್ ಕಾರ್ಡ್‌ಗಳಲ್ಲಿ ನೀಡುವ ಆಫರ್‌ಗಳು. ಒಂದೊಂದು ಬ್ಯಾಂಕ್ ಒಂದೊಂದು ರೀತಿ ಆಫರ್ ನೀಡುವುದರಿಂದ ಹೆಚ್ಚಿನ ಸೌಲಭ್ಯ ಸಿಗಲಿ ಎಂದು ಈ ರೀತಿ ಮಲ್ಟಿಪಲ್ ಅಕೌಂಟ್ ಓಪನ್ ಮಾಡುತ್ತಾರೆ.

* ಆದರೆ ಈ ಡೆಬಿಟ್ ಕಾರ್ಡ್‌ಗಳಿಗೂ ಕೂಡ ವರ್ಷಕ್ಕೆ ಒಮ್ಮೆ ಬ್ಯಾಂಕ್ ವತಿಯಿಂದ ಸರ್ವೀಸ್ ಚಾರ್ಜಸ್ ಕಟ್ ಆಗುತ್ತದೆ. ಒಂದು ಬ್ಯಾಂಕ್ ಚಾರ್ಜಸ್ ರೂ.800 ಇದ್ದರೂ 6 ಅಕೌಂಟಿಗೆ ರೂ.4,800 ಆಗುತ್ತದೆ ಮತ್ತು ನಾವು ಎಲ್ಲಾ ಅಕೌಂಟ್ ಬಳಸದೆ ಇದ್ದರೆ ಇದು ಅನಾವಶ್ಯಕ ಖರ್ಚಾಗುತ್ತದೆ ಹಾಗಾಗಿ ಇದರ ಬಗ್ಗೆ ಗಮನ ವಹಿಸಿ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಕೊಡುಗೆ ; ಅರ್ಜಿ ಸಲ್ಲಿಸಿದವರಿಗೆ 20,000 ರೂ.

* ಎಲ್ಲದಕ್ಕಿಂತ ಮುಖ್ಯವಾದ ವಿಚಾರ ಏನೆಂದರೆ, ನಾವು ಬ್ಯಾಂಕ್‌ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಎಷ್ಟೇ ಹಣ ಇಟ್ಟರು, ಒಂದು ವೇಳೆ ಬ್ಯಾಂಕ್ ದಿವಾಳಿ ಆದರೆ RBI 5 ಲಕ್ಷ ಹಣಕ್ಕೆ ಮಾತ್ರ ಗ್ಯಾರಂಟಿ ಕೊಡುವುದು. ಹಾಗಾಗಿ ಒಂದೇ ಬ್ಯಾಂಕ್‌ನಲ್ಲಿ 20ಲಕ್ಷ, 30ಲಕ್ಷ, 50 ಲಕ್ಷ ಹಣ ಇಡುವ ಬದಲು ನಾಲ್ಕೈದು ಬ್ಯಾಂಕ್‌ನಲ್ಲಿ ಡಿವೈಡ್ ಮಾಡಿ ಐದೈದು ಲಕ್ಷ ಇಟ್ಟರೆ ಈ ದೃಷ್ಟಿಕೋನದಲ್ಲಿ ಹೆಚ್ಚು ಸೇಫ್.

* ಕೆಲವರು ಇದರ ಬದಲು ಒಂದೇ ಬ್ಯಾಂಕ್‌ನಲ್ಲಿ ನಮ್ಮ ಮಕ್ಕಳ ಹೆಸರಿನಲ್ಲಿ ಕೂಡ ಖಾತೆ ತೆರೆದು ಇಡುತ್ತೇವೆ ಎಂದು ಹೇಳುತ್ತಾರೆ. ಇದು ಕೂಡ ಒಳ್ಳೆಯದೇ, ನೀವು 7 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ ITR ಫೈಲ್ ಮಾಡಬೇಕಾಗುತ್ತದೆ. ನೀವು ಒಂದೇ ಒಂದು ಖಾತೆಯಿಂದ ಎಲ್ಲವನ್ನು ನಿರ್ವಹಿಸುತ್ತಿದ್ದಾರೆ ITR ಫೈಲ್ ಮಾಡುವುದು ಮಾಹಿತಿ ನೀಡುವುದು ಸರಾಗ.

* ಆದರೆ ಹತ್ತಾರು ಅಕೌಂಟ್‌ಗಳು ಇದ್ದಾಗ ಆ ಎಲ್ಲ ಮಾಹಿತಿಯನ್ನು ನೀಡುವುದು ಸ್ವಲ್ಪ ಜಂಜಾಟವೇ ಸರಿ, ಆದರೆ ಅಸಾಧ್ಯವಲ್ಲ. ಹೀಗಾಗಿ ನಿಮ್ಮ ಕಡೆ ನೀವು ಬಳಸದೆ ಇರುವ ಹೆಚ್ಚು ಅಕೌಂಟ್‌ಗಳು ಇದ್ದರೆ ಅರ್ಜಿ ನೀಡಿ ಕ್ಲೋಸ್ ಮಾಡಿರಿ.

spot_img
spot_img
spot_img
- Advertisment -spot_img