Thursday, April 25, 2024
spot_img
spot_img
spot_img
spot_img
spot_img
spot_img

2ನೇ ಮಹಾಯುದ್ಧದಲ್ಲಿ ಸೈನಿಕನಾಗಿ ಕೆಲಸ ಮಾಡಿದ ಕರಡಿ ಬಗ್ಗೆ ನಿಮಗೆ ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅದು  2 ನೇ ಮಹಾಯುದ್ಧ () ಅಂದರೆ  1939 ರಿಂದ 1945 ರ ವರೆಗೆ ನಡೆದ ಈ ಯುದ್ಧ. ಈ ಯುದ್ಧದಲ್ಲಿ ನಿಷ್ಠಾವಂತ ಕರಡಿಯೊಂದು ಭಾಗವಹಿಸಿದಂತಹ ನೈಜ್ಯ ಕಥೆಯ ಬಗ್ಗೆ ನಿಮಗೆ ಗೊತ್ತಾ.?  ಇಲ್ವಾ. ಹಾಗಿದ್ರೆ ಈ ಸೈನಿಕ ಕರಡಿಯ ಇಂಟರಿಸ್ಟಿಂಗ್ ಸ್ಟೋರಿಯ ಓದಿ.!

ಸೈನಿಕರಿಗೆ  ಕರಡಿ ಸಿಕ್ಕಿದ ಕಥೆಯೇ ರೋಚಕ :

ಪೋಲೆಂಡ್   ಸೈನಿಕರು  1941 ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಆಕ್ರಮನದ ನಂತರ ಇರಾನ್ ಬೆಟ್ಟಗಳ ಮೂಲಕ ಇನ್ನೊಂದು ದೇಶಕ್ಕೆ ಹಾದು ಹೋಗುತ್ತಿರುವ ಸಂದರ್ಭದಲ್ಲಿ ಓರ್ವ ಹುಡುಗ ಆ ಸೈನಿಕರ ಕಣ್ಣಿಗೆ ಬೀಳುತ್ತಾನೆ. ಹುಡುಗನ ಸಂಗಡ ಒಂದು ಪುಟ್ಟ  ಕರಡಿ ಮರಿಯೂ ಕೂಡಾ ಇರುವುದು  ಕಂಡು ಬರುತ್ತದೆ. ತಾಯಿಯನ್ನು ಕಳೆದುಕೊಂಡ ಪಾಪ ಈ ಮರಿ ಕರಡಿ ಅನಾಥವಾಗಿದೆ ಎಂದು ಬಾಲಕ ಸೈನಿಕರ ಬಳಿ ಹೇಳಿಕೊಳ್ಳುತ್ತಾನೆ. ಈ ಮುಗ್ಧ ಮರಿ ಕರಡಿಯನ್ನು ಅನಾಥ ಮಾಡುವುದು ಬೇಡ ಎಂದು ಸೈನಿಕರು ಅದನ್ನು ತಮ್ಮೊಂದಿಗೆ ಕರೆದುಕೊಂಡು ಹೋಗ್ತಾರೆ.

ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮರಿ ಕರಡಿಗೆ “ವೋಜ್ಟೆಕ್” ಎಂದು ನಾಮಕರಣ :

ತಮ್ಮ ಜೊತೆ ಕರೆದುಕೊಂಡು ಬಂದ ಕರಡಿಯನ್ನು ಚನ್ನಾಗಿ ಪ್ರೀತಿಯಿಂದ ನೋಡಿಕೊಳ್ಳುವುದರ ಜೊತೆಗೆ ಈ ಪುಟ್ಟ ಮರಿ ಕರಡಿಗೆ “ವೋಜೆಕ್ಟ್ʼ ಎಂಬ ಹೆಸರನ್ನು ಕೂಡಾ ಇಡುತ್ತಾರೆ. ಇನ್ನು ಈ ಮರಿ ಕರಡಿಯೂ ಸಹ ಅಷ್ಟೇ ಸೈನಿಕರನ್ನು ತನ್ನ ಬಂಧು ಬಳಗ ಎನ್ನುವಂತೆ ಅವರ ಜೊತೆ ಬಲು  ಪ್ರೀತಿಯಿಂದ ನಡೆದುಕೊಳ್ಳುತ್ತಿತ್ತು. ದಿನ ಕಳೆದಂತೆ ವೋಜೆಕ್ಟ್ ಸೈನಿಕರಿಗೆ ತಮ್ಮ ದಿನನಿತ್ಯದ ಕಾರ್ಯಗಳಿಗೆ ಸಹಾಯ ಮಾಡುತ್ತಿತ್ತು. ಅವರ  ಜೊತೆಯಲ್ಲಿಯೇ ಟೆಂಟ್ ಅಲ್ಲಿ ಮಲಗುತ್ತಿತ್ತು.  ಅಷ್ಟೇ ಅಲ್ಲದೇ ಈ ಕರಡಿಗೆ ಬೀಯರ್, ಸಿಗರೇಟ್ ಅಂದರೆ ಬಲು ಇಷ್ಟವಾಗಿತ್ತು. ಈ ವಿಚಾರವನ್ನು ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಪೋಲಿಷ್ ಸೈನಿಕ  ವೊಜ್ಸಿಕ್ ನರೆಬ್ಸ್ಕಿ  ಬಿಬಿಸಿ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.

ವೋಜ್ಟೆಕ್ ಕರಡಿ ಸೈನಿಕನಾಗಿ  ನೇಮಕ :

ವೋಜ್ಟೆಕ್ ಕರಡಿಯನ್ನೂ 22 ನೇ ಫಿರಂಗಿ ಸರಬರಾಜು ಕಂಪೆನಿಗೆ ಸೈನಿಕನಾಗಿ ಸೇರ್ಪಡೆ ಮಾಡಲಾಯಿತು. 1943 ರಲ್ಲಿ ಯುದ್ಧಕ್ಕಾಗಿ ಇಟಲಿಗೆ ತೆರಳಬೇಕಾದರೆ ಈ ಕರಡಿಯನ್ನು ಕೂಡಾ ಸೈನಿಕರು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋದರು.  ಇದು ಸೈನ್ಯದಲ್ಲಿ ಆಯುಧಗಳನ್ನೆಲ್ಲಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ  ಸಾಗಿಸುವ ಕೆಲಸ ಮಾಡುತ್ತಿತ್ತು. ಹೀಗೆ ವೋಜ್ಟೆಕ್ ಕರಡಿ  ಇರಾಕ್, ಸಿರಿಯಾ, ಸ್ಕಾಟ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಪೋಲಿಷ್ ಸೈನ್ಯದ ಜೊತೆ  ಯುದ್ಧದಲ್ಲಿ ಭಾಗವಹಿಸಿತ್ತು.  ಆ ಸಮಯದಲ್ಲಿ ಈ ಕರಡಿ  “ಸೋಲ್ಜರ್ ಬೀರ್” ಎಂದೇ  ಖ್ಯಾತಿಯನ್ನು ಪಡೆದಿತ್ತು.

ವಿದ್ಯಾರ್ಥಿಗಳಿಗೆ Good News : ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್.!

ಎರಡನೇ ಮಹಾಯುದ್ಧದ ನಂತರ ವೋಜ್ಟೆಕ್ ಕರಡಿ ಹೋದದೆಲ್ಲಿ :

1945  ಎರಡನೇ ಮಹಾಯುದ್ಧ ಮುಗಿದ ನಂತರ ಈ ಕರಡಿಯನ್ನು ಸ್ಕಾಟ್ಲೆಂಡ್ ನ ಎಡಿನ್ಬರ್ಗ್ ಮೃಗಾಲಯಕ್ಕೆ ಕಳುಹಿಸಲಾಯಿತು.  ನಂತರ ಪೋಲಿಷ್ ಸೈನಿಕರು ಕೂಡಾ ವೋಕ್ಟೆಕ್ ನನ್ನು ಕಾಣಲು ಆಗೊಮ್ಮೆ ಈಗೊಮ್ಮೆ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಹೀಗೆ ತನ್ನ ಕೊನೆಯ 16 ವರ್ಷಗಳನ್ನು ಮೃಗಾಲಯದಲ್ಲಿಯೇ ಕಳೆದ  ವೋಜ್ಟೆಕ್  1965 ರಲ್ಲಿ ತನ್ನ 21 ನೇ ವಯಸ್ಸಿನಲ್ಲಿ  ಸಾವನನ್ನಪ್ಪಿತು.

ನಿಸ್ವಾರ್ಥ ಸೇವೆಗೆ ಸಾಕ್ಷಿಯಾದ ವೋಜ್ಟೆಕ್ ಕರಡಿಯ ಗೌರವಾರ್ಥವಾಗಿ ಸ್ಕಾಟ್ಲೆಂಡ್ ಮತ್ತು ಪೋಲೆಂಡ್ ದೇಶದಲ್ಲಿ  ಈ ಕರಡಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ  2011 ರಲ್ಲಿ ಈ ಧೀರ ಕರಡಿಯ ಕುರಿತ “ವೋಕ್ಟೆಕ್-ದಿ ಬೀರ್ ದಟ್ ವಾಂಟೆಡ್ ಟು ವಾರ್ʼ  ಎಂಬ ಸಾಕ್ಷ್ಯ ಚಿತ್ರವನ್ನು ಕೂಡಾ ಮಾಡಲಾಗಿದೆ.

spot_img
spot_img
spot_img
- Advertisment -spot_img