Thursday, April 25, 2024
spot_img
spot_img
spot_img
spot_img
spot_img
spot_img

ಶನಿ ದೇವರಿಗೆ ಪ್ರದಕ್ಷಿಣೆ ಹಾಕಿದ ಬೆಕ್ಕಣ್ಣ ; ಆಶ್ಚರ್ಯಕರ ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಹಿಂದೆ ಹಸುವೊಂದು ಅಯ್ಯಪ್ಪ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದ ಹಾಗೂ ಶ್ವಾನವೊಂದು ದೇವಾಲಯದಲ್ಲಿ ಪ್ರದಕ್ಷಿಣೆ (Temple circumambulation) ಹಾಕಿದಂತಹ ಸುದ್ದಿಗಳು ವೈರಲ್ ಆಗಿದ್ದವು.

ಇದೀಗ ಬೆಕ್ಕೊಂದು (Cat) ಶನಿ ದೇವರಿಗೆ ಭಕ್ತಪೂರ್ವಕವಾಗಿ ಪ್ರದಕ್ಷಿಣೆಯನ್ನು ಹಾಕುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ ವಿಡಿಯೋವೊಂದು ಸಖತ್ ಸೌಂಡ್ ಮಾಡ್ತಿದೆ.

ವಿದ್ಯಾರ್ಥಿಗಳಿಗೆ Good News : ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್.!

ಮಹಾರಾಷ್ಟ್ರದಲ್ಲಿ (Maharashtra) ಈ ಘಟನೆ ನಡೆದಿದ್ದು, ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಿದ ಬೆಕ್ಕೊಂದು ಶನಿ ದೇವರ ವಿಗ್ರಹದ ಸುತ್ತ ಭಕ್ತಿ ಪೂರ್ವಕವಾಗಿ ಪ್ರದಕ್ಷಿಣೆ ಹಾಕಿದೆ. ಈ ದೃಶ್ಯ ಕಂಡ ಭಕ್ತರೆಲ್ಲರೂ ಬೆಕ್ಕಿನ ಭಕ್ತಿಯನ್ನು ಕಂಡು ಆಶ್ಚರ್ಯಚಕಿತರಗಿದ್ದಾರೆ. ಅಲ್ಲದೆ ಹಲವರು ಈ ಅಚ್ಚರಿಯ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿ (record) ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಮಂಜುನಾಥ್ ಹೆಚ್.ಸಿ (@manjunath HC) ಎಂಬವರು ಈ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಾಯಿ ಇಲ್ಲದ ಮೂಕ ಜೀವಿ ಬೆಕ್ಕು, ಆದರೂ ಹಿಂದಿನ ಜನ್ಮದ (previous birth) ಸಂಸ್ಕಾರದಿಂದ ದೈವತ್ವವನ್ನು ಗುರುತಿಸಿ ಈ ರೀತಿ ಶನಿ ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ” ಎಂಬ ಶೀರ್ಷಿಕೆ ನೀಡಿದ್ದಾರೆ.

ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು (views) ಹಾಗೂ 18 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವಾರು ಕಮೆಂಟ್ಸ್ ಗಳು ಬಂದಿವೆ.

ಅಬ್ಬಬ್ಬಾ ಈ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಬೆಕ್ಕು ಸಾಕಿದರೆ ಅನಿಷ್ಟ ಅಂತಾರೆ ಆದರೆ ಈ ಬೆಕ್ಕು ಭಕ್ತಿಯಿಂದ ಪ್ರದಕ್ಷಿಣೆ ಹಾಕೋದು ನೋಡಿದ್ರೆ ಬೆಕ್ಕು ಸಾಕ್ಬೇಕು ಅಂತ ಅನ್ಸುತ್ತೆ ಎಂಬ ಕಮೆಂಟ್ ಮಾಡಿದ್ದಾರೆ.

spot_img
spot_img
spot_img
- Advertisment -spot_img