Thursday, April 25, 2024
spot_img
spot_img
spot_img
spot_img
spot_img
spot_img

Video : ಆಟವಾಡಲು ಹೋಗಿ ಈಜುಕೊಳದಲ್ಲಿ ಮುಳುಗುತ್ತಿದ್ದ ಪುಟ್ಟ ತಂಗಿಯ ಪ್ರಾಣ ಉಳಿಸಿ ಅಣ್ಣ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಈಜುಕೊಳದಲ್ಲಿ (swimming pool) ಮುಳುಗುತ್ತಿದ್ದ ಪುಟ್ಟ ತಂಗಿಯನ್ನು ಬಾಲಕನೋರ್ವ ರಕ್ಷಿಸಿದ ಘಟನೆ ನಡೆದಿದ್ದು, ಈ ಪುಟಾಣಿ ಬಾಲಕ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತು ವಿಡಿಯೋವೊಂದು (video) ವೈರಲ್ ಆಗಿದೆ.

ಇದನ್ನು ಓದಿ : ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ; ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!

ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ತನ್ನ ಪಾಡಿಗೆ ಈಜುಕೊಳದಲ್ಲಿ ಈಜಾಡುತ್ತಾ ಮೋಜು ಮಾಡುತ್ತಿರುವ ದೃಶ್ಯವನ್ನು ನೋಡಬಹುದು. ಅಲ್ಲೇ ಪಕ್ಕದಲ್ಲಿ ಜಾರು ಬಂಡಿಯಲ್ಲಿ ಆತನ ಪುಟ್ಟ ತಂಗಿ ಆಟವಾಡುತ್ತಿದ್ದಳು (play). ಹೀಗೆ ಆಟವಾಡುತ್ತಾ ಆಕೆ ಸೀದಾ ಈಜುಕೊಳಕ್ಕೆ ಬಂದು ಬೀಳುತ್ತಾಳೆ. ಈಜು ಬಾರದ ಆಕೆ ನೀರಿನಲ್ಲಿ ಮುಳುಗಿ, ಅಲ್ಲಿಂದ ಮೇಲೆ ಬರಲು ಒದ್ದಾಡುತ್ತಿರುತ್ತಾಳೆ.

ಈ ವೇಳೆ ಆಕೆಯ ಸಹೋದರ ಇದನ್ನು ಕಂಡ ಏನು ಮಾಡಬೇಕೆಂದು ತೋಚದೆ, ಆಕೆ ಇನ್ನೋನು ಮುಳುಗಿ ಹೋಗುತ್ತಿದ್ದಾಳೆ ಎನ್ನುವಷ್ಟರಲ್ಲಿ ಬಾಲಕ ಸಮಯ ಪ್ರಜ್ಞೆ (Time consciousness) ಮೆರೆದು ಪುಟ್ಟ ತಂಗಿಯನ್ನು ನೀರಿನಿಂದ ಮೇಲಕ್ಕೆತ್ತಿ ಆಕೆಯ ಪ್ರಾಣ ರಕ್ಷಿಸಿದ್ದಾನೆ.

@NearEscaped ಎಂಬ ಹೆಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ : Water : ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯುತ್ತಿದ್ದೀರಾ.? ಹಾಗಿದ್ರೆ ಸೇವಿಸಿ ಈ ಆಹಾರ ಪದಾರ್ಥಗಳನ್ನ.

ಒಬ್ಬ ಬಳಕೆದಾರ ಈಜು ಬಾರದಿರುವ ಮಕ್ಕಳನ್ನು ನೀರಿನ ಬಳಿ ಪೋಷಕರು ಏಕೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರೆ, ಇನ್ನೋರ್ವ ನಿಜವಾದ ಸೂಪರ್ ಹೀರೋ (real super hero) ಈತ ಎಂದು ಕಾಮೆಂಟ್ ಮಾಡಿದ್ದಾನೆ.

spot_img
spot_img
spot_img
- Advertisment -spot_img