Wednesday, January 8, 2025
HomeHealth and Fitnessಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!
spot_img

ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ ಎಂದು ಕರೆಯುವ ಕಡಲೆ ಕಾಯಿಯನ್ನು (ನೆಲಗಡಲೆ) ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಇಷ್ಟಪಟ್ಟು ತಿನ್ನುತ್ತಾರೆ. ಈ ಕಡಲೆಕಾಯಿಯಲ್ಲಿ ಫೋಲಿಕ್ ಆಮ್ಲವು (Folic acid) ಹೆಚ್ಚಾಗಿರುತ್ತದೆ.

100 ಗ್ರಾಂ ಕಡಲೆಕಾಯಿಯಲ್ಲಿ 24 ಗ್ರಾಂ ಮೊನೊಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. 16 ಗ್ರಾಂ ಪಾಲಿಅನ್ ಸ್ಯಾಚುರೇಟೆಡ್’ಗಳನ್ನು (Polyunsaturated) ಹೊಂದಿರುತ್ತದೆ.

Read it : ವಿಡಿಯೋ : Reels ಚಟಕ್ಕೆ ನಾಯಿಗೆ ಚಿತ್ರಹಿಂಸೆ ; ನೆಟ್ಟಿಗರ ತೀವ್ರ ಆಕ್ರೋಶ.!

ಇನ್ನೂ ಚೀನಾ ಬಳಿಕ ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದನೆ ಮಾಡುವ ರಾಷ್ಟ್ರ (India is the second largest groundnut producer in the world) ಎನ್ನುವುದು ಹೆಮ್ಮೆಯ ಸಂಗತಿ.

* ಕಡಲೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಾಯಕವಾಗಿದೆ.

Read it : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

* ರಕ್ತ ಪರಿಚಲನೆ (blood circulation) ಸುಧಾರಿಸಲು ಇದು ಉಪಯುಕ್ತ.

* ಹೃದಯ ಸಂಬಂಧಿ ಮತ್ತು ಹೃದಯಾಘಾತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

* ಹಲವು ರೀತಿಯ ಸೋಂಕುಗಳು ಮತ್ತು ರೋಗಗಳನ್ನು ನಿಯಂತ್ರಿಸಬಹುದು (Diseases and infections can be controlled).

* ಕಡಲೆಕಾಯಿ ಮೆದುಳಿನ ಬೆಳವಣಿಗೆ ಮತ್ತು ಸ್ಮರಣೆಗೆ ತುಂಬಾ ಒಳ್ಳೆಯದು.

Read it : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

* ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ಗಳಿದ್ದು, ದೃಷ್ಟಿ ಸುಧಾರಣೆಗೆ (Vision improvement) ಇವು ಸಹಾಯ ಮಾಡುತ್ತವೆ.

* ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿದೆ.

* ನಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ತಡೆದು, ಯೌವನವನ್ನು ಕಾಪಾಡಿಕೊಳ್ಳಲು (To preserve youth) ಸಹಾಯ ಮಾಡುತ್ತದೆ.

* ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು (Gas, indigestion, constipation and acidity problems) ಸಹ ಕಡಿಮೆಯಾಗುತ್ತವೆ.

* ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡವು ಕಡಿಮೆಯಾಗುವುದು (Less stress).

Read it : District ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಳೆಗಳನ್ನು ಬಲಪಡಿಸಬಹುದು.

* ಪ್ರತಿದಿನ 30 ಗ್ರಾಂ ಕಡಲೆ ಕಾಯಿ ತಿನ್ನುವುದರಿಂದ ಪಿತ್ತಕೋಶದ ಕಲ್ಲುಗಳನ್ನು ಜ ತಡೆಯಬಹುದೆಂಬ ಅಂಶ 20 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಹಿಂದಿನ ಸುದ್ದಿ : ನಕಲಿ ದಾಖಲೆ ಪ್ರಮಾಣಪತ್ರ ನೀಡಿದ್ದ ಕೇಸ್ ; PSI ಅಮಾನತು.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಬ್ಯಾಡರಹಳ್ಳಿ ಠಾಣೆ ಸಬ್​ಇನ್ಸ್​​ಪೆಕ್ಟರ್​ (police sub inspector) ಅವರನ್ನು ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳು (fake documents) ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್​ (Bengaluru West Division DCP Girish) ಆದೇಶ ಹೊರಡಿಸಿದ್ದಾರೆ.

ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಕಾಶಿಲಿಂಗೇಗೌಡರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ಕುರಿತು ವಿಧಾನಸೌಧ ಠಾಣೆಯಲ್ಲಿ‌ ನಕಲಿ ದಾಖಲೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಸಬ್​ಇನ್ಸ್​​ಪೆಕ್ಟರ್​ ಕಾಶಿಲಿಂಗೇಗೌಡ ಜಾಮೀನು‌ ಪಡೆದು ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್​ಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ (Police Department Administration Officer S. T. Chandrasekhar) ಅವರು, ಸಬ್​ಇನ್ಸ್​​ಪೆಕ್ಟರ್​ ಕಾಶಿಲಿಂಗೇಗೌಡ ವಿರುದ್ಧ ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ದೂರು ನೀಡಿದ್ದು, ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ‌ ಎಫ್​ಐಆರ್​ ದಾಖಲಿಸಲಾಗಿತ್ತು.

Read it : ಇಬ್ಬರು ಮಕ್ಕಳನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಟೆಕ್ಕಿ ದಂಪತಿ.!

ಸರ್ಕಾರವು ತನ್ನ ನಿಯಮದಲ್ಲಿ, ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು (Candidate age should not exceed 30 years) ತಿಳಿಸಿದೆ.

ಆದರೆ ಅಭ್ಯರ್ಥಿ ಅಲ್ಲದಿದ್ದರೂ ಕಾಶಿಲಿಂಗೇಗೌಡ ನಕಲಿ ಜನ್ಮದಿನಾಂಕ ಇರುವ ದಾಖಲೆ ನೀಡಿ ಸಬ್​ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ, ಬಳಿಕ ನೇಮಕಗೊಂಡಿದ್ದರು (appointed) ಎಂದು ದೂರು ನೀಡಲಾಗಿತ್ತು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!