ಜನಸ್ಪಂದನ ನ್ಯೂಸ್, ನೌಕರಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್ (Typist) ಮತ್ತು ಜವಾನ (Peon) ಹುದ್ದೆಗಳ ಭರ್ತಿಗೆ ಪರಿಷ್ಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Websiteನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
Read it : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!
ಹುದ್ದೆಗಳ ವಿವರ :
- ಟೈಪಿಸ್ಟ್ - 30 ಹುದ್ದೆಗಳು.
- ಜವಾನ – 28 ಹುದ್ದೆಗಳು.
- ಒಟ್ಟು 58 ಹುದ್ದೆಗಳಿವೆ.
ಅರ್ಹತೆ :
- ಟೈಪಿಸ್ಟ್ (Typist) ಹುದ್ದೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು PUC ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ (Diploma in Commercial Practice) ನಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board) ಯಿಂದ ನಡೆಸಲಾಗುವ Typing ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಜವಾನ (Peon) ಹುದ್ದೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಪೂರ್ಣಗೊಳಿಸಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷಗಳು.
Read it : Health : ಉಗುರುಗಳು ಈ ರೀತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!
ವಯೋಮಿತಿ ಸಡಲಿಕೆ :
- ಪ್ರವರ್ಗ 2A/2B/3A/3B ಅಭ್ಯರ್ಥಿಗಳಿಗೆ 3 ವರ್ಷ ಮತ್ತು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ – I ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಸಲಾಗಿದೆ.
ವೇತನ ಶ್ರೇಣಿ :
- ಜವಾನ ಹುದ್ದೆಗೆ ರೂ. 17,000/- ರಿಂದ ರೂ. 28,950/- (ಮಾಸಿಕ ವೇತನ).
- ಟೈಪಿಸ್ಟ್ ಹುದ್ದೆಗೆ ರೂ. 21,400/- ರಿಂದ ರೂ. 42,000/- (ಮಾಸಿಕ ವೇತನ).
ಅರ್ಜಿ ಶುಲ್ಕ :
- SC/ST/ವಿಶೇಷಚೇತನ/ಪ್ರವರ್ಗ – I ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಪ್ರವರ್ಗ 2A/2B/3A/3B ಅಭ್ಯರ್ಥಿಗಳಿಗೆ ರೂ. 100/- ಅರ್ಜಿ ಶುಲ್ಕ ಮತ್ತು
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 200/- ಅರ್ಜಿ ಶುಲ್ಕವಿದೆ.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬೇಕು.
Read it : Lokayukta Raid : ಲೋಕಾಯುಕ್ತ ಬಲೆಗೆ ಬಿದ್ದ ASI.!
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಆರಂಭೀಕ ದಿನಾಂಕ : ಡಿಸೆಂಬರ್ 23, 2024.
- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಜನವರಿ 06, 2025,
ಪ್ರಮುಖ ಲಿಂಕ್ :
ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ bengalururural.dcourts.gov.in ಇಲ್ಲಿಗೆ ಭೇಟಿ ನೀಡಿ.
Disclaimer : The above given information is available On online, candidates should check it properly before applying. This is for information only.