ಜನಸ್ಪಂದನ ನ್ಯೂಸ್, ಆರೋಗ್ಯ : ಮಾನವನಿಗೆ ದೇಹದ ಪ್ರತಿಯೊಂದು ಭಾಗವು ಮುಖ್ಯ. ಸ್ವಲ್ಪ ಕಡೆಗಣಿಸಿದರೆ ಆರೋಗ್ಯದ ಮೇಲೆ ದೊಡ್ಡ ಹಾನಿಯನ್ನು ಉಂಟು ಮಾಡಬಹುದು (Can cause great damage). ಕೆಲವರ ಉಗುರುಗಳು ಸುಮ್ಮಸುಮ್ಮನೆ ಉದುರುವುದು, ಬಣ್ಣ ಬದಲಾಗಿರುತ್ತವೆ. ಯಾಕೆ ಹೀಗೆ.? ಮುಂದೆ ಓದಿ.
ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು (Weak nails can be caused by internal factors, mainly our diet) ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದ ಉಗುರುಗಳು ದುರ್ಬಲವಾಗುವುದು.
ಇದನ್ನು ಓದಿ : ಶಿಕ್ಷಕಿ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ; DDPI ಕಚೇರಿಯ ಅಧಿಕಾರಿ ಲೋಕಾಯುಕ್ತ ಬಲೆಗೆ.!
* ಕೆಲವರ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೀಗಾಗಲು ಅತಿಯಾದ ಧೂಮಪಾನ (smoking) ಸಾಮಾನ್ಯ ಕಾರಣವಾಗಿರಬಹುದು. ಅಲ್ಲದೇ ಹಳದಿ ಉಗುರುಗಳು ಮಧುಮೇಹದ ಚಿಹ್ನೆಯಾಗಿರಬಹುದು (A sign of diabetes). ಈ ರೀತಿಯ ಉಗುರುಗಳು ಥೈರಾಯ್ಡ್ ಕಾಯಿಲೆ, ಉಸಿರಾಟದ ಕಾಯಿಲೆ, ಶಿಲೀಂಧ್ರಗಳ ಸೋಂಕು, ರುಮಟಾಯ್ಡ್ ಮತ್ತು ಸಂಧಿವಾತ ಕಾಯಿಲೆಗಳನ್ನು ಸೂಚಿಸುತ್ತವೆ.
* ಕೆಲವರ ಉಗುರುಗಳು ಚಮಚದ ಆಕಾರದಲ್ಲಿರುತ್ತವೆ. ಇವರು ರಕ್ತಹೀನತೆ, ಹೈಪೋಥೈರಾಯ್ಡಿಸಮ್ ಅಥವಾ ಯಕೃತ್ತಿನ ಸಮಸ್ಯೆಗಳಿಗೆ ತುತ್ತಾಗಿರಬಹುದು. ಹೀಗಾಗಿ ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ, ಮುಖ್ಯವಾಗಿ ಕಬ್ಬಿಣ ಭರಿತ ಆಹಾರಗಳ ಮೇಲೆ ಗಮನ ನೀಡಬೇಕು.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
* ತೆಳುವಾದ ಮತ್ತು ಮೃದುವಾದ ಉಗುರುಗಳನ್ನು ಹೊಂದಿದ್ದರೆ ಅದು ವಿಟಮಿನ್ ಬಿ ಕೊರತೆಯನ್ನು ಸೂಚಿಸುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಆಹಾರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕೊಬ್ಬಿನಾಮ್ಲ ಇರುವ ಆಹಾರ ಸೇವಿಸುವುದು ಉತ್ತಮ.
* ಉಗುರುಗಳು ಕುಣಿಕೆಯ ರೀತಿ ಕಾಣಿಸಿಕೊಂಡರೆ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತ ಎಂದು ಪೌಷ್ಟಿಕತಜ್ಞರ (Nutritionist) ಅಭಿಪ್ರಾಯ. ಅಲ್ಲದೇ ಹೃದಯದ ಸಮಸ್ಯೆಯನ್ನು ಕೂಡ ಇರಬಹುದು.
ಇದನ್ನು ಓದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
* ಉಗುರುಗಳ ಮೇಲಿನ ಬಿಳಿ ಚುಕ್ಕೆಗಳು ಕೇವಲ ಚುಕ್ಕೆಗಳಲ್ಲ, ಇವು ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನ (Fungal infection) ಸಂಕೇತವಾಗಿರಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
ಹಿಂದಿನ ಸುದ್ದಿ : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸುಪ್ರೀಂ ಕೋರ್ಟ್, ವಯಸ್ಸಾದ ತಂದೆ- ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ (Children who do not take care of elderly parents do not get property) ಎಂದು ಮಹತ್ವದ ತೀರ್ಪು ನೀಡಿದೆ.
ಇದನ್ನು ಓದಿ : ಲಾಡ್ಜ್‌ನಲ್ಲಿ ಗುತ್ತಿಗೆ ಆಧಾರಿತ Engineer ಆ*ತ್ಮಹ*ತ್ಯೆ.!
ತನ್ನ ಮಗನಿಗೆ ಉಡುಗೊರೆ ರೂಪದಲ್ಲಿ ಕೊಟ್ಟ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಿ (cancel), ಹೆತ್ತವರಿಗೆ ಆಸ್ತಿಯನ್ನು ಮರಳಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸಿ. ಟಿ. ರವಿಕುಮಾರ್ ಅವರ ನ್ಯಾಯಪೀಠವು ಈ ತೀರ್ಪು ನೀಡಿದೆ. ಮಕ್ಕಳು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ವಿಫಲರಾದರೆ (If children fail to cope with their responsibilities), ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ರಚಿಸಲಾದ ನ್ಯಾಯ ಮಂಡಳಿಗಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳು ಆಸ್ತಿಯನ್ನು ಹಿಂದಿರುಗಿಸಬೇಕು ಎಂದು ತಿಳಿಸಿದೆ.
ಇದನ್ನು ಓದಿ : Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
ವ್ಯಕ್ತಿಯೋರ್ವ, ತನ್ನ ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಷರತ್ತಿನೊಂದಿಗೆ (condition) ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ ಆತ ತನ್ನ ಹೆತ್ತ ಅಮ್ಮನೊಂದಿಗೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಹೀಗಾಗಿ ಕಾಯಿದೆ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಸಂತ್ರಸ್ತೆ ಅರ್ಜಿಯನ್ನು ಸಲ್ಲಿಸಿದರು.
ಮಕ್ಕಳು ತಮ್ಮ ತಂದೆತಾಯಿಯನ್ನು ನೋಡಿಕೊಳ್ಳಲು ವಿಫಲವಾದರೆ ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ (Parents and Senior Citizens Welfare Act) ಪೋಷಕರು ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು ಹಿಂತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನು ಓದಿ : ತೊಡೆ ಮೇಲೆ Girlfriend ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಕಾರು ಚಲಾಯಿಸಿದ ಯುವಕ.!
ಸುಪ್ರೀಂ ಕೋರ್ಟ್ ಆದೇಶಿಸಿರುವ ಈ ತೀರ್ಪು, ಮಕ್ಕಳು ಪೋಷಕರಿಂದ ಪಡೆದ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ (Do not abuse), ಅವರ ಹಿತಾಸಕ್ತಿಗಳ ಪಾಲನೆಯನ್ನು ಖಚಿತಪಡಿಸಲು, ಹಿರಿಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.