ಜನಸ್ಪಂದನ ನ್ಯೂಸ್, ಡೆಸ್ಕ್ : ದುಷ್ಕರ್ಮಿಯೊಬ್ಬ ನಾಯಿಯನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ರೀಲ್ಸ್ (Reels) ಗಾಗಿ ಕ್ರೂರವಾಗಿ ಹಿಂಸಿಸುವ ವಿಡಿಯೋ ಸಾಮಾಜಿಕ ಜಾಲತಾಣ (social media) ಗಳಲ್ಲಿ ವೈರಲ್ ಆಗುತ್ತಿದೆ.
ಇನ್ನು ಈ ವೈರಲ್ ವಿಡಿಯೋ (Viral video) ನೋಡಿದ ನೆಟ್ಟಿಗರು ತೀವ್ರ ಆಕ್ರೋಶ (extreme anger) ಹೊರಹಾಕಿದ್ದಾರೆ.
Read it : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಹೀಗೆ ಮರದ ಕೊಂಬೆಗೆ ತಲೆಕೆಳಗಾಗಿ ಕಟ್ಟಿ ನಾಯಿಯನ್ನು ಕಟ್ಟಿ ವಿಡಿಯೋ ಮಾಡಿ ಹಿಂಸಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು (Netizens) ಒತ್ತಾಯಿಸಿದ್ದಾರೆ.
ನಾಯಿಯನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ರೀಲ್ಸ್‌ಗಾಗಿ ಕ್ರೂರವಾಗಿ ಹಿಂಸಿಸುವ (tortured the dog) ವಿಡಿಯೋ ಮಾಡಿದ ವ್ಯಕ್ತಿಯನ್ನು (content creator) ಬಿಹಾರದ ಮೊಹಮ್ಮದ್ ಆಲಂ (Mohammad Alam from Bihar) ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ, ನಾಯಿಯನ್ನು ಮರಕ್ಕೆ ಕಟ್ಟಿದ ವ್ಯಕ್ತಿ ಓಡಿಹೋಗಿ ನಾಯಿಯನ್ನು ಒದೆಯುತ್ತಿರುವುದನ್ನು (kicking the dog) ಕಾಣಬಹುದಾಗಿದೆ. ಇನ್ನೊಂದು ವಿಡಿಯೋದಲ್ಲಿ, content creator ನ್ನು ಮರದ ಕೊಂಬೆಯ ಮೇಲೆ ನಿಂತು ನಾಯಿಯ ಬಾಲವನ್ನು ಹಿಡಿದು ಎಸೆಯುತ್ತಿರುವುದನ್ನು (grabbing the dog’s tail) ಸಹ ನೋಡಬಹುದಾಗಿದೆ.
Read it : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ನಾಯಿಗೆ ಈ ರೀತಿಯಲ್ಲಿ ಚಿತ್ರಹಿಂಸೆ ಕೊಡುತ್ತಿರುವ ವಿಡಿಯೋ ನೋಡಿದ ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ (expressed their anger). ಮಾತನಾಡದ ಮುಖ ಜೀವಿಯನ್ನು ತಮ್ಮ ರೀಲ್ಸ್ ಚಟಕ್ಕೆ (their viral practice) ಬಳಸುವುದು ಸರಿಯಲ್ಲ. ಹೀಗಾಗಿ, ಈ ವ್ಯಕ್ತಿಯ ವಿರುದ್ಧ ಪ್ರಾಣಿ ಪ್ರಿಯರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Take cognizance immediately @PoliceBhagalpur @bihar_police@dmbhagalpur
This boy has crossed all limits of brutality with his dog.From causing pain & horrifying acts like throwing the dog into fire & hanging it upside down from a tree etc this is nothing short of barbaric/crime pic.twitter.com/gIf1e4KKJK
— Tarun Agarwal (@AntiCrueltyCell) January 4, 2025
ಹಿಂದಿನ ಸುದ್ದಿ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ ದಂಪತಿ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಸದಾಶಿವ ನಗರದ (Sadashiva Nagar, Bangalore) ಆರ್. ಎಂ. ವಿ ಎರಡನೇ ಹಂತದ ಟೆಂಪಲ್ ರಸ್ತೆಯಲ್ಲಿ ದಂಪತಿ ತಮ್ಮಿಬ್ಬರು ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾವು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಸಾವಿಗೀಡಾದವರು ಅನೂಪ್ (38), ಪತ್ನಿ ರಾಖಿ (35), ಮಕ್ಕಳಾದ ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಉತ್ತರ ಪ್ರದೇಶ (Uttar Pradesh) ಮೂಲದವರಾದ ಅನೂಪ್, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ (Software consultant in a private company) ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ದಂಪತಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ನಿಖರ ಕಾರಣ (exact reason) ತಿಳಿದು ಬಂದಿಲ್ಲ. ಅನುಪ್ರಿಯಾಗೆ ಆರೋಗ್ಯ ಸಮಸ್ಯೆ ಇತ್ತು. ಇದರ ಜೊತೆಗೆ ಮೊದಲ ಮಗುವಿಗೆ ಮಾನಸಿಕ ತೊಂದರೆ (mental trouble) ಇದ್ದ ಕಾರಣ ದಂಪತಿ ಬಹಳ ಕುಗ್ಗಿ ಹೋಗಿದ್ದರು ಎನ್ನಲಾಗಿದೆ.
ಇದನ್ನು ಓದಿ : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ಇನ್ನೂ ಅನೂಪ್ ಮನೆಯಲ್ಲಿ ಮೂರು ಜನ ಕೆಲಸಗಾರರಿದ್ದರು. ಇಬ್ಬರು ಕೆಲಸಗಾರರು ಅಡುಗೆ ಕೆಲಸಕ್ಕೆಂದು, ಒಬ್ಬರು ಮಗು ನೋಡಿಕೊಳ್ಳಲು ಇದ್ದರು. ಮೂವರಿಗೂ ತಿಂಗಳಿಗೆ 15 ಸಾವಿರ ರೂ. ಸಂಬಳ (salary) ನೀಡುತ್ತಿದ್ದ ಟೆಕ್ಕಿ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು ಎಂದು ತಿಳಿದು ಬಂದಿದೆ.
ಇನ್ನೂ ಬೆಳಗ್ಗೆ 11 ಗಂಟೆಗೆ ಪಾಂಡಿಚೇರಿಗೆ ಹೋಗಲಿದ್ದೇವೆ. ನೀವು ಬೇಗ ಕೆಲಸಕ್ಕೆ ಬನ್ನಿ ಎಂದು ಅನೂಪ್ ಕೆಲಸದವರಿಗೆ ಹೇಳಿದ್ದರು. ಹೀಗಾಗಿ ಬೆಳಗ್ಗೆ ಕೆಲಸದವರು ಮನೆಗೆ ಬಂದಿದ್ದಾರೆ. ಈ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ 10 ಗಂಟೆಯವರೆಗೂ ದಂಪತಿ ಸಂತೋಷವಾಗಿಯೇ ಇದ್ದರು ಎಂದು ಕೆಲಸದವರು ತಿಳಿಸಿದ್ದಾರೆ.