ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಘಟನೆಯಲ್ಲಿ ಪತಿಯೋರ್ವ ತನ್ನ ಪತ್ನಿಯ ಮೇಲೆ ಚಾಕು (knife) ಹಿಡಿದು ದಾಳಿ ನಡೆಸಿರುವ ಘಟನೆ ನಡೆದಿದೆ. ದಾಳಿ ಮಾಡಿದ ಪತಿ ಪ್ರವೀಣ್ ಕುಮಾರ್ ಎಂದು ಹಾಗೂ ದಾಳಿಗೊಳಗಾದ ಪತ್ನಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ.
ದಾಳಿ ವೇಳೆ ಪದ್ಮಾವತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಯಿಂದ ಪತಿ ಪ್ರವೀಣ್ ಕುಮಾರ್ ಕೂಡ ಕೈಗೆ ಗಾಯಗೊಂಡಿದ್ದಾರೆ.
Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಪ್ರಾಥಮಿಕ ಮಾಹಿತಿ ಪ್ರಕಾರ, 30 ವರ್ಷದ ಪದ್ಮಾವತಿ ಹಲವು ದಿನಗಳಿಂದ ಪತಿ ಜೊತೆ ಮನಸ್ತಾಪದಿಂದ ಕಳವಳದಿಂದ ಬಳಲುತ್ತಿದ್ದಿದ್ದು, ತಮ್ಮ ವೈವಾಹಿಕ ಸಂಬಂಧ ಮುಂದುವರಿಸಲು ಸಾಧ್ಯವಾಗದೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಸೂಚನೆಯಂತೆ, ವಿವಾದಿತ ಇಬ್ಬರೂ ಅರ್ಜಿ ವಿಚಾರಣೆಗೆ ಕೋರ್ಟ್‌ಗೆ ಹಾಜರಾದರು. ಆದರೆ, ನ್ಯಾಯಾಲಯ ಹಾಲ್ ಪ್ರವೇಶಿಸಿದ ಕೂಡಲೇ ಪತಿ ಪ್ರವೀಣ್ ಕುಮಾರ್, ಮೊದಲೇ ಯೋಜಿಸಿದ್ದಂತೆ ಚಾಕು (knife) ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿದ್ದಾರೆ.
Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!
ಈ ಸಂದರ್ಭದಲ್ಲಿ ಕೋರ್ಟ್ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣವೇ ಪ್ರವೀಣ್ ಕುಮಾರ್‌ನನ್ನು ಹಿಡಿದು ಚಾಕು (knife) ಕಸಿದುಕೊಂಡಿದ್ದಾರೆ. ಬಳಿಕ ಪ್ರವೀಣ್ ಕುಮಾರ್ ವಶಕ್ಕೆ ಪಡೆದಿದ್ದಾರೆ.
ಪತಿಯ ದಾಳಿಯಿಂದ ಪತ್ನಿ ಪದ್ಮಾವತಿ ಗಂಭೀರ ಗಾಯಗೊಂಡು ಕುಸಿದಿದ್ದಾರೆ. ತುರ್ತು ಚಿಕಿತ್ಸೆಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿದೆ. ಪತಿ ಪ್ರವೀಣ್ ಕುಮಾರ್ ಕೂಡ ದಾಳಿ ವೇಳೆ ಚಾಕು (knife) ತಗುಲಿಕೆಯಿಂದ ಕೈಗೆ ಗಾಯ ಹೊಂದಿದ್ದು, ಅವನನ್ನೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಈ ಘಟನೆಯ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಮತ್ತು ಪೊಲೀಸರು ತಟಸ್ಥವಾಗಿ ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ.
Accident : ಕಾರು ಪಲ್ಟಿಯಾಗಿ ಬಸ್‌ಗೆ ಡಿಕ್ಕಿ ; ಸ್ಥಳದಲ್ಲೇ 3 ಜನರ ದುರ್ಮರಣ.!
ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಹರ್ಲಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಅಪಘಾತ (Accident) ದಲ್ಲಿ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಪ್ಪಳ ದಿಕ್ಕಿನಿಂದ ಗದಗ ಕಡೆಗೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ, ರಸ್ತೆ ವಿಭಜಕ (ಡಿವೈಡರ್) ದಾಟಿ ಎದುರುಗಡೆಯಿಂದ ಬರುತ್ತಿದ್ದ ಗೋವಾ ನೋಂದಣಿ ಹೊಂದಿದ ಬಸ್‌ಗೆ ಡಿಕ್ಕಿ ಹೊಡೆದಿದೆ.
Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಅಪಘಾತ (Accident) ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತ (Accident) ದಲ್ಲಿ ಮೃತರನ್ನು ಹಾವೇರಿ ಮೂಲದವರು ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆಯಾದ ಅರ್ಜುನ್ ನೆಲ್ಲೂರು (34), ಆತನ ಸಂಬಂಧಿ ರವಿ ನೆಲ್ಲೂರು (35) ಹಾಗೂ ಈರಣ್ಣ ಉಪ್ಪಾರ (38) ಸೇರಿದ್ದಾರೆ.
3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್ ನೀಡಲು ಆಹಾರ ಇಲಾಖೆ ಕ್ರಮ.!
ಅಪಘಾತ (Accident) ದ ವಿಷಯ ತಿಳಿದ ತಕ್ಷಣ ಗದಗ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಗೋವಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಗೆ ಹೊರಡಿದ್ದ ಬಸ್ ಗೆ ಕೊಪ್ಪಳ ಕಡೆಯಿಂದ ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರು ಢಿಕ್ಕಿ ಹೊಡೆದು ಅಪಘಾತ (Accident) ಸಂಭವಿಸಿದೆ.
ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!
ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಪಘಾತ (Accident) ದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.