Tuesday, September 17, 2024
spot_img
spot_img
spot_img
spot_img
spot_img
spot_img
spot_img

ಮಲಗಿದ ಯುವಕನ ಚಡ್ಡಿಯಲ್ಲಿ ಅವಿತು ಕುಳಿತ ನಾಗರ ಹಾವು : ಮುಂದೆನಾಯ್ತು Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಅಥವಾ ಮನೆ ಅಕ್ಕ ಪಕ್ಕದಲ್ಲಿನ ಪೊದೆಗಳಲ್ಲಿ ಅವಿತು ಕುಳಿತುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಹಾವು ಮಲಗಿದ್ದವನ ಚಡ್ಡಿಯೊಳಗೆಯೇ ಅವಿತು ಕುಳಿತುಬಿಟ್ಟಿದೆ.

ಹೌದು, ಮಲಗಿದ ಯುವಕನ ಚಡ್ಡಿಯೊಳಗೆಯೇ ಅವಿತು ಕುಳಿತಿತ್ತು, ಸದ್ಯ ಬಹಳ ಜೋಪಾನವಾಗಿ ಅವಿತು ಕುಳಿತ ಹಾವನ್ನು ಹೊರತೆಗೆಯಲಾಗಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ :  ಜುಲೈ 3 ರಿಂದ ಜಿಯೋ, ಏರ್ಟೆಲ್ ಟ್ಯಾರಿಫ್ ಹೆಚ್ಚಳ : ಯಾವ ಪ್ಲಾನ್ ಗೆ ಎಷ್ಟು ಏರಿಕೆ? ಇಲ್ಲಿದೆ ಡಿಟೇಲ್ಸ್.

ಈ ಹಾವು ಎಂದರೆ ಸಾಕು ಎಂಥ ಧೈರ್ಯವಂತ ಮನುಷ್ಯನಿಗಾದರೂ ಮಾರುದ್ಧ ಜಿಗಿಯೋದು ಗ್ಯಾರಂಟಿ. ಒಂದು ವೇಳೆ ಮನೆಯೊಳಗೆ ಹಾವು ಬಂದರೆ ನಾವು ಅಲ್ಲಿಂದ ಕಾಲ್ಕಿತ್ತು ಬಿಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.

ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ಈ ಘಟನೆ ಥೈಲ್ಯಾಂಡ್‌ನ ಪೂರ್ವ ಪ್ರಾಂತ್ಯದ ರೇಯಾಂಗ್‌ ಎಂಬಲ್ಲಿ ನಡೆದಿದ್ದು, ಮನೆಯಲ್ಲಿ ಮಂಚದ ಮೇಲೆ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ ಯುವಕನ ಬಳಿ ಬಂದ ಹಾವೊಂದು ಸೀದಾ ಹೋಗಿ ಆತನ ಬಾಕ್ಸರ್ ಶಾರ್ಟ್ಸ್‌ಗೆ  (ಚಡ್ಡಿ) ಯೊಳಗೆ ನಾಗರ ಹಾವು ಸೇರಿ ಬಿಟ್ಟಿದೆ.

ಇದನ್ನೂ ಓದಿ :  SSC ಇಂದ 8,326 ಹುದ್ದೆಗಳಿಗೆ ಅರ್ಜಿ ಆಹ್ವಾನ : ಜಸ್ಟ್ ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.! 

ಇದರಿಂದ ಭಯಬೀತನಾದ ಆ ಯುವಕ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಉರಗ ತಜ್ಞರಿಗೆ ಕರೆ ಮಾಡಿ ಅವರು ಬರುವವರೆಗೂ ಸ್ವಲ್ಪವೂ ಅಲುಗಾಡದೆ ಧೈರ್ಯದಿಂದ ಅಲ್ಲೇ ಮಲಗುತ್ತಾನೆ. ನಂತರ ಉಗರ ತಜ್ಞರು ಬಂದು ಸ್ನೇಕ್‌ ಹುಕ್‌ ಸಹಾಯದಿಂದ ಜೋಪಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ. 

@unikinfold ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಥೈಲ್ಯಾಂಡ್‌ನ ರೇಯಾಂಗ್‌ ಪ್ರಾಂತ್ಯದಲ್ಲಿ ವ್ಯಕ್ತಿಯ ಚಡ್ಡಿಯೊಳಗೆ ಸೇರಿಕೊಂಡ ನಾಗರ ಹಾವು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಯುವಕನೊಬ್ಬ ಬೆಡ್‌ ಮೇಲೆ ಮಲಗಿರುವಂತಹ ದೃಶ್ಯವನ್ನು ಕಾಣಬಹುದು.

ಆತನ ಚಡ್ಡಿಯೊಳಗೆ ಸಣ್ಣ ಗಾತ್ರದ ನಾಗರ ಹಾವು ಸೇರಿಕೊಂಡ ಕಾರಣ ಆತ ಯಾವುದೇ ಕಾರಣಕ್ಕೂ ಒಂದಿಷ್ಟು ಅಲುಗಾಡದೆ ಮಲಗಿರುತ್ತಾನೆ. ಬಳಿಕ ಉರಗ ತಜ್ಞರು ಬಂದು ಯುವಕನಿಗೆ ಯಾವುದೇ ಅಪಾಯವಾಗದಂತೆ ಸ್ನೇಕ್‌ ಹುಕ್‌ ಸಹಾಯದಿಂದ ಹಾವನ್ನು ಜೋಪಾನವಾಗಿ ಹೊರ ತೆಗೆದಿದ್ದಾರೆ. 

ಇದನ್ನೂ ಓದಿ : ಟ್ರಾಫಿಕ್ ಜಾಮ್‌ನಿಂದಾಗಿ ಬೇಸತ್ತು ಬಾಹುಬಲಿಯಂತೆ ತನ್ನ ಬೈಕ್‌ನ್ನೇ ಹೆಗಲ ಮೇಲೆ ಹೊತ್ತು ಸಾಗಿದ ವ್ಯಕ್ತಿ ; Video ವೈರಲ್.! 

ಕೇವಲ 5 ದಿನಗಳ ಹಿಂದೆಷ್ಟೆ ಹಂಚಿಕೊಳ್ಳಲಾದ ಈ ವಿಡಿಯೋ 77,488 likes ಪಡೆದುಕೊಂಡಿದ್ದು, ಹಾವಿಗೆ ಅವಿತುಕೊಳ್ಳಲು ಬೇರೆ ಯಾವ ಸ್ಥಳವೂ ಸಿಗಲಿಲ್ಲವೇ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.

 

View this post on Instagram

 

A post shared by FOLKMEDIA ALTERNATIVE (@unikinfold)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img