Saturday, July 13, 2024
spot_img
spot_img
spot_img
spot_img
spot_img
spot_img

ಟ್ರಾಫಿಕ್ ಜಾಮ್‌ನಿಂದಾಗಿ ಬೇಸತ್ತು ಬಾಹುಬಲಿಯಂತೆ ತನ್ನ ಬೈಕ್‌ನ್ನೇ ಹೆಗಲ ಮೇಲೆ ಹೊತ್ತು ಸಾಗಿದ ವ್ಯಕ್ತಿ ; Video ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಎಲ್ಲಿಯಾದರೂ ಅತೀ ಅವಶ್ಯವಾಗಿ ಹೋಗಬೇಕಾದಾಗ ಸಡನ್‌ ಆಗಿ ಟ್ರಾಫಿಕ್ ಜಾಮ್ ಆಗಿ ಬಿಟ್ಟರೇ ಹೇಗಾಗಬಾರದು. ನೀವೇನಾದರು ಇಂತ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದರೆ ಅದರ ಅರಿವು ನಿಮಗೆ ಬರುತ್ತದೆ.

ಮಹಾ ನಗರಗಳಲ್ಲಿ ದೊಡ್ಡ ಸಮಸ್ಯೆ ಎಂದರೆ ಅದುವೇ ಟ್ರಾಫಿಕ್ ಜಾಮ್. ಟ್ರಾಫಿಕ್​​ ಜಾಮ್​ನಿಂದ ಎಷ್ಟೇ ಕೋಪ ಬಂದರೂ ಕೂಡ ಏನು ಮಾಡಲಾಗದೇ ಗಂಟೆಗಟ್ಟಲೆ ಕಾಯುವುದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ : ತೂಕ ಇಳಿಸಿಕೊಳ್ಳಬೇಕೆ.? ಹಾಗಿದ್ರೆ ನಿಯಮಿತವಾಗಿ ಸೇವಿಸಿ ಈ 7 ಬೀಜಗಳನ್ನ.!

ಇದೀಗ ಅಂತಹ ಟ್ರಾಫಿಕ್ ಜಾಮ್‌ನಿಂದಾಗಿ ವ್ಯಕ್ತಿಯೊಬ್ಬರು ತೀವ್ರ ಅಸಮಾಧಾನಗೊಂಡು ಬಾಹುಬಲಿಯಂತೆ ತನ್ನ ಬೈಕ್‌ನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಷ್ಟು ವಾಹನ ದಟ್ಟನೆಯ ನಡುವೆ ತನ್ನ ಬೈಕ್​​ ಎತ್ತಿಕೊಂಡು ನಡೆಯುತ್ತಿರುವ ದೃಶ್ಯ ಒಮ್ಮೆಗೆ ಬಾಹುಬಲಿ ಸಿನಿಮಾ ನೆನಪಿಸುತ್ತದೆ. ಸಾಕಷ್ಟು ದೂರದ ವರೆಗೆ ಟ್ರಾಫಿಕ್​​ ಜಾಮ್‌ನಲಿ ಸಿಲುಕಿರುವ ಜನರು ಏಕಾಏಕಿ ಈ ದೃಶ್ಯ ಕಂಡು ದಂಗಾಗಿ ಹೋಗಿದ್ದಾರೆ.

ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಬೈಕ್​​ ಎತ್ತಿಕೊಂಡು ಬರುವ ದೃಶ್ಯವನ್ನು ತಮ್ಮ ಮೊಬೈಲ್​​​ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ : ಕೇಂದ್ರ ಸರ್ಕಾರದ ವಿವಿಧ ಇಲಾಖೆಯ 17,727 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

@basit_ki_memes ಎಂಬ ಹೆಸರಿನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್​​ 18ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್​​ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 2,33,656 ನೆಟ್ಟಿಗರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Abdul Basit (@basit_ki_memes)

spot_img
spot_img
- Advertisment -spot_img